ತಮಿಳುನಾಡಿನ ರಾಜಕೀಯದಲ್ಲಿ ಹಾಗೂ ಸಿನಿಮಾರಂಗದಲ್ಲಿ ಮಿಂಚಿದ ನಟಿ ಹಾಗೂ ಮಾಜಿಸಿಎಂ ಜಯಲಲಿತಾ ಜೀವನಗಾಥೆ ತಲೈವಿ ಹೆಸರಲ್ಲಿ ತೆರೆಗೆ ಬರಲಿದೆ.
ಸೆ.೧ ರಂದು ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾದಲ್ಲಿ ಬಾಲಿವುಡ್ ನಟಿ ಕಂಗನಾ ರನಾವುತ್ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ ಮೂಲದ ಜಯಲಲಿತಾ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನವರ್ಯಾರು ನಟಿಸಿಲ್ಲ.
ಆದರೂ ತಲೈವಿ ಚಿತ್ರತಂಡ ಕನ್ನಡ ಚಿತ್ರರಂಗವನ್ನು ಮರೆತಿಲ್ಲ.ತಲೈವಿ ಸಿನಿಮಾ ಬಿಡುಗಡೆಯ ಸವಿನೆನಪಿಗಾಗಿ ತಲೈವಿ ತಂಡ ಸ್ಯಾಂಡಲ್ ವುಡ್ ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಗೆ ಸ್ಪೆಶಲ್ ಗಿಫ್ಟ್ ಒಂದನ್ನು ಕಳುಹಿಸಿದೆ
ಇದನ್ನೂ ಓದಿ: ಶರ್ಟ್ ಬಟನ್ ಹಾಕಲು ಮರೆತ್ರಾ ಮೌನಿ ರಾಯ್?: ನಾಗಿನ್ ನಟಿಯ ಬೋಲ್ಡ್ ಅವತಾರ ವೈರಲ್
ತಲೈವಿ ಸಿನಿಮಾ ರಿಲೀಸ್ ಆಹ್ವಾನ ಪತ್ರಿಕೆಯ ಜೊತೆಗೆ ರಚಿತಾ ರಾಮ್ ಗೆ ತಲೈವಿ ತಂಡ ನೀಲಿ ಬಣ್ಣದ ಕಾಂಚಿವರಂ ಸೀರೆಯನ್ನು ಉಡುಗೊರೆಯಾಗಿ ಕಳಸಿದೆ.
ತಲೈವಿ ಚಿತ್ರತಂಡ ಕಳುಹಿಸಿದ ಈ ಸ್ಪೆಶಲ್ ಗಿಫ್ಟ್ ನ್ನು ಖುಷಿಯಿಂದ ಸ್ವೀಕರಿಸಿರುವ ರಚಿತಾ ರಾಮ್ ಚಿತ್ರತಂಡಕ್ಕೆ ಧನ್ಯವಾದ ಹೇಳಿದ್ದಾರೆ.ಮಾತ್ರವಲ್ಲ ತಲೈವಿ ಚಿತ್ರ ತಂಡಕ್ಕೆ ಶುಭಹಾರೈಸಿದ್ದಾರೆ.
ಇದನ್ನೂ ಓದಿ: ಆಂಕ್ಯರ್ ಅನುಶ್ರೀ ಡ್ರಗ್ಸ್ ತಗೋತಿದ್ರು ಮತ್ತು ನಮಗೂ ಕೊಡ್ತಿದ್ರು: ಚಾರ್ಜಶೀಟ್ ನಲ್ಲಿ ಸ್ಪೋಟಕ ಹೇಳಿಕೆ
ಕೊರೋನಾ ಕಾರಣಕ್ಕೆ ವಿಳಂಬಗೊಂಡಿದ್ದ ತಲೈವಿ ಸಿನಿಮಾ ಗೌರಿ-ಗಣೇಶ್ ಹಬ್ಬದ ವೇಳೆಗೆ ತೆರೆಗೆ ಬರಲಿದೆ. ಸಿನಿಮಾ ರಿಲೀಸ್ ಗೂ ಮುನ್ನ ಜಯಲಲಿತಾ ಸಮಾಧಿ ಗೆ ಭೇಟಿ ನೀಡಿದ ನಟಿ ಕಂಗನಾ ಗೌರವ ಸಲ್ಲಿಸಿದ್ದರು.
( Kannada love of Thalaivi film team)