ಮಂಗಳವಾರ, ಏಪ್ರಿಲ್ 29, 2025
HomeCinemaಸದ್ದಿಲ್ಲದೇ ಹೊಸ ಸಿನಿಮಾಗೆ ಸಜ್ಜಾದ ನಟಿ: ಮೇಘನಾ ನ್ಯೂ ಲುಕ್ ರಿವೀಲ್

ಸದ್ದಿಲ್ಲದೇ ಹೊಸ ಸಿನಿಮಾಗೆ ಸಜ್ಜಾದ ನಟಿ: ಮೇಘನಾ ನ್ಯೂ ಲುಕ್ ರಿವೀಲ್

- Advertisement -

ಬದುಕಿನ ಏರಿಳಿತಗಳಲ್ಲಿ ದಿಟ್ಟ ಮಹಿಳೆಯಾಗಿ ನಿಂತ ನಟಿ ಮೇಘನಾ ರಾಜ್ ಸರ್ಜಾ ಸದ್ಯ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ (Meghana New Look Reveal) ಮಾಡಿದ್ದಾರೆ. ಕಿರುತೆರೆ,ಹಿರಿತೆರೆ ಎರಡಲ್ಲೂ ಬ್ಯುಸಿಯಾಗಿರೋ ಮೇಘನಾ ಮೊನ್ನೆ ಮೊನ್ನೆ ಫ್ಯಾಮಿಲಿ ಹಾಲಿಡೇ ಮುಗಿಸಿ ವರ್ಕ್ ಮೋಡ್ ಗೆ ಮರಳಿದ್ದಾರೆ ಜೊತೆ -ಜೊತೆಗೆ ಹೊಸ್ ಲುಕ್ ನಲ್ಲಿ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ತಮ್ಮ ಗುಂಡಗಿನ ಮುಖದ ಜೊತೆ ಕೊಂಚ ಕೆಂಚುಕಲರ್ ಕೂದಲಿನಿಂದಲೇ ಕ್ಯೂಟ್ ಎನ್ನಿಸುತ್ತಿದ್ದ ನಟಿ ಮೇಘನಾ ರಾಜ್ ಸರ್ಜಾ ಸದ್ಯ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಹೇರ್ ಸ್ಟೈಲ್ ಬದಲಾಯಿಸಿಕೊಂಡಿರೋ‌ ಮೇಘನಾ ಬಾಯ್ ಕಟ್ ಮೂಲಕ ರಗಡ್ ಲುಕ್ ನಲ್ಲಿ ಪೋಸ್ ನೀಡಿದ್ದಾರೆ. ಹೊಸ ಹೇರ್ ಸ್ಟೈಲ್ ಜೊತೆ ಕ್ಯೂಟ್ ಪೋಟೋ ಕ್ಲಿಕ್ಕಿಸಿಕೊಂಡಿರೋ ಮೇಘನಾ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋಗೆ ಸಖತ್ ಲೈಕ್ಸ್ ಹಾಗೂ ಕಮೆಂಟ್ ಹರಿದಬಂದಿದ್ದು ಕೆಲವರು ನಿಮ್ಮ ಮೊದಲಿನ ಹೇರ್ ಸ್ಟೈಲ್ ಚೆನ್ನಾಗಿತ್ತು ಅಂದ್ರೇ ಇನ್ನೂ ಹಲವರು ವಾವ್ ಹೊಸ ಲುಕ್ ತುಂಬ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಸದ್ಯ ತತ್ಸಮ ತದ್ಬವ್ ಸಿನಿಮಾ ಶೂಟಿಂಗ್ ಮುಗಿಸಿರೋ ಮೇಘನಾ ಸರ್ಜಾ ಸದ್ಯದಲ್ಲೇ ಹೊಸ ಸಿನಿಮಾವನ್ನು ಅನೌನ್ಸ್ ಮಾಡಲಿದ್ದಾರಂತೆ. ‌ಇದುವರೆಗೂ ಕಾಣಿಸಿಕೊಳ್ಳದ ವಿಭಿನ್ನ ಬಾಂಡ್ ಪಾತ್ರ ವೊಂದರಲ್ಲಿ ಮೇಘನಾ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ‌ ಈ ಹೊಸ ಲುಕ್ ಗೆ ಮೇಘನಾ ಬದಲಾಗಿದ್ದಾರಂತೆ. ತತ್ಸಮ ತದ್ಬವ ಸಿನಿಮಾದ‌ ಮೂಲಕ ಮೇಘನಾ ಸರ್ಜಾ ತಮ್ಮ ತಾಯ್ತನದ ಬ್ರೇಕ್ ಬಳಿಕ ಸ್ಯಾಂಡಲ್ ವುಡ್ ಗೆ ರ್ರೀ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮೇಘನಾ ಹಲವು ರಿಯಾಲಿಟಿ ಶೋ ಹಾಗೂ ಜಾಹೀರಾತಿಗಾಗಿ ಬಣ್ಣ ಹಚ್ಚಿದ್ದರು.

ಮೇಘನಾ ಸರ್ಜಾ ಮಗನೊಂದಿಗೆ ಸಮಯ ಕಳೆಯಲು ಅವಕಾಶವೇ ಸಿಗುತ್ತಿಲ್ಲ ಎಂದು ಇಂಟರವ್ಯೂಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ ಮೊನ್ನೆ ಮೊನ್ನೆ ಮೇಘನಾ ತಮ್ಮ ಫುಲ್ ಫ್ಯಾಮಿಲಿ ಜೊತೆ ರೆಸಾರ್ಟ್ ನಲ್ಲಿ ಸಮಯ ಕಳೆದು ಬಂದಿದ್ದಾರೆ. ಮಗನ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿ, ಕಾಡಿನಲ್ಲಿ ರೆಸಾರ್ಟ್ ನಲ್ಲಿ ಸಮಯ ಕಳೆದಿರುವ ಮೇಘನಾ ಪೋಟೋ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಮಲೆಯಾಳಂ ಹಾಗೂ ಕನ್ನಡ ಸಿನಿಮಾದಲ್ಲಿ ಗುರುತಿಸಿಕೊಂಡಿರೋ ಮೇಘನಾ ಬಾಲ್ಯದಲ್ಲಿಯೇ ನಾಟಕಗಳಲ್ಲಿ ಅಭಿನಯಿಸಿದ್ದರು. 2009 ರಲ್ಲಿ ಬೆಂಡು ಅಪ್ಪಾರಾವ್ RMP ಸಿನಿಮಾದ ಮೂಲಕ ಸಿನಿ ಕೆರಿಯರ್ ಆರಂಭಿಸಿದ್ದರು. ನಟ ಚಿರು ಸರ್ಜಾರನ್ನು ಪ್ರೀತಿಸಿ ಮದುವೆಯಾದ ಮೇಘನಾಗೆ ಚಿರು ಅಕಾಲಿಕ ನಿಧನ ದೊಡ್ಡ ಶಾಕ್ ನೀಡಿತ್ತು.

ಇದನ್ನೂ ಓದಿ : Met Gala 2023 : ಜಗತ್ತಿನ ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ನಲ್ಲಿ ನಟಿ ಆಲಿಯಾ ಭಟ್‌ ಧರಿಸಿದ ಗೌನ್‌ ಬೆಲೆ ಎಷ್ಟು ಗೊತ್ತೆ ?

ಇದನ್ನೂ ಓದಿ : ಡಿವೋರ್ಸ್ ಖುಷಿಗೆ ಫೋಟೋಶೂಟ್ ಮಾಡಿದ ತಮಿಳು ಕಿರುತೆರೆ ನಟಿ ಶಾಲಿನಿ

The actress is quietly gearing up for a new movie: Meghana New Look Reveal

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular