ಭಾನುವಾರ, ಏಪ್ರಿಲ್ 27, 2025
HomeCinemaThe Kashmir Files : ದಿ ಕಾಶ್ಮೀರಿ ಫೈಲ್ಸ್‌ ಮೂರು ದಿನದಲ್ಲೇ ದಾಖಲೆಯ ಗಳಿಕೆ

The Kashmir Files : ದಿ ಕಾಶ್ಮೀರಿ ಫೈಲ್ಸ್‌ ಮೂರು ದಿನದಲ್ಲೇ ದಾಖಲೆಯ ಗಳಿಕೆ

- Advertisement -

ದೇಶದಾದ್ಯಂತ ಸಂಚಲನ ಮೂಡಿಸಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ದಿ‌ ಕಾಶ್ಮೀರಿ ಫೈಲ್ಸ್ (The Kashmir Files) ಸಿನಿಮಾ ಬಾಕ್ಸಾ ಫೀಸಿನಲ್ಲೂ ಉತ್ತಮ ಗಳಿಕೆ ಕಂಡಿದ್ದು ಮೂರೇ ದಿನದಲ್ಲಿ ಸಿನಿಮಾ 31.06 ಕೋಟಿ ಗಳಿಸಿದೆ ಎಂದು ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಖಚಿತಪಡಿಸಿದ್ದಾರೆ. ಮಾರ್ಚ್ 11 ರಂದು ದೇಶದಾದ್ಯಂತ 630 ಪರದೆಗಳಲ್ಲಿ‌ತೆರೆ ಕಂಡಿದ್ದ ದಿ‌ ಕಾಶ್ಮೀರಿ ಫೈಲ್ಸ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಎರಡೇ ದಿನದಲ್ಲಿ ಸಿನಿಮಾ 2000 ಕ್ಕೂ ಅಧಿಕ ಪರದೆಗಳಲ್ಲಿ ಪ್ರದರ್ಶನ ಕಾಣಲಾರಂಭಿಸಿದೆ.

1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಸತ್ಯ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದ್ದು, ಸಾಕಷ್ಟು ವಿವಾದಗಳು ಹಾಗೂ ಕಾನೂನು ಸಮರದ ಬಳಿಕ ಸಿನಿಮಾ ತೆರೆ ಕಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿರುವ ಕಾಶ್ಮೀರಿ ಫೈಲ್ಸ್, ಸೋಷಿಯಲ್ ಮೀಡಿಯಾದ ಪ್ರಚಾರದಿಂದಲೇ ಮತ್ತಷ್ಟು ಖ್ಯಾತಿ ಪಡೆದುಕೊಂಡು ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆಯಲು ಮುಂದಾಗಿದೆ. ದೇಶದಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣ್ತಿರೋ ದಿ ಕಾಶ್ಮೀರೀ ಫೈಲ್ಸ್ ವಿಶೇಷವಾಗಿ ಬಿಜೆಪಿ ಪಕ್ಷದಿಂದ ಸಖತ್ ಬೆಂಬಲ ಸಿಗ್ತಿದ್ದು, ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದಲ್ಲಿರೋ ರಾಜ್ಯಗಳು ತೆರಿಗೆ ವಿನಾಯ್ತಿ ಘೋಷಿಸಿವೆ.

ಸ್ವತಃ ಪ್ರಧಾನಿ ನರೇಂದ್ರ‌ ಮೋದಿ ಸಹ ಸಿನಿಮಾವನ್ನು ವೀಕ್ಷಿಸಿದ್ದು, ಸಿನಿಮಾ ತಂಡಕ್ಕೆ ಅಭಿನಂದನೆ ಸಲ್ಲಿಸಿ ಶುಭಕೋರಿದ್ದಾರೆ. ಇನ್ನೊಂದೆಡೆ ಕರ್ನಾಟಕದ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ನಾಯಕರು ಸಿನಿಮಾ ವೀಕ್ಷಿಸಿದ್ದಾರೆ. ಮಾತ್ರವಲ್ಲ ಕರ್ನಾಟಕದಲ್ಲಿ ಶಾಸಕರು ಹಾಗೂ ಸಚಿವರುಗಳಿಗೆ ದಿ ಕಾಶ್ಮೀರಿ ಫೈಲ್ಸ್ ಸಿನಿಮಾದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು ಎಲ್ಲರೂ ಸಿನಿಮಾ ನೋಡಿ ಎಂದು ಸ್ವತಃ ಸ್ಪೀಕರ್ ಮನವಿ ಮಾಡಿದ್ದಾರೆ.

ಸಿನಿಮಾದಲ್ಲಿ ಅನುಪಮ್ ಖೇರ್ ಸೇರಿದಂತೆ ಎಲ್ಲರ ನಟನೆಯೂ ಮೆಚ್ಚುಗೆಗೆ ಪಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ದಾಖಲೆ‌ಬರೆಯುವ ಮುನ್ಸೂಚನೆ ನೀಡಿದೆ. ಇನ್ನೊಂದೆಡೆ ಸಿನಿಮಾದಲ್ಲಿ ಸುಳ್ಳು ಕತೆಯನ್ನು ವೈಭವಿಕರಿಸಲಾಗಿದೆ. ಕೇವಲ ಕಾಶ್ಮೀರಿ ಪಂಡಿತರ ಮೇಲೆ ಮಾತ್ರ ದೌರ್ಜನ್ಯ ನಡೆದಿಲ್ಲ ಎಂದು ಎಡಪಂಥೀಯ ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ದಿ ಕಾಶ್ಮೀರಿ ಫೈಲ್ಸ್ ಪರ ಮತ್ತು ವಿರುದ್ಧ ಚರ್ಚೆಗಳು ಜೋರಾಗಿದೆ.

ಇದನ್ನೂ ಓದಿ :  ಜೇಮ್ಸ್ ಜೊತೆಗೆ ತೆರೆಗೆ ಬರ್ತಾನೆ ಭೈರಾಗಿ : ಶಿವಕುಮಾರ್‌, ಪುನೀತ್ ಅಭಿಮಾನಿಗಳಿಗೆ ಸಿಹಿಸುದ್ದಿ

ಇದನ್ನೂ ಓದಿ : ದಿ‌ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್‌ ಬೊಮ್ಮಾಯಿ

( The Kashmiri Files is a record gain in three days )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular