ಸೋಮವಾರ, ಏಪ್ರಿಲ್ 28, 2025
HomeCinemaThe Kerala Story OTT : ಶೀಘ್ರದಲ್ಲೇ ಓಟಿಟಿಗೆ ಲಗ್ಗೆ ಇಡಲಿದೆ ದಿ ಕೇರಳ ಸ್ಟೋರಿ...

The Kerala Story OTT : ಶೀಘ್ರದಲ್ಲೇ ಓಟಿಟಿಗೆ ಲಗ್ಗೆ ಇಡಲಿದೆ ದಿ ಕೇರಳ ಸ್ಟೋರಿ ಸಿನಿಮಾ

- Advertisement -

ನಟಿ ಅದಾ ಶರ್ಮಾ (The Kerala Story OTT) ಅಭಿನಯದ ದಿ ಕೇರಳ ಸ್ಟೋರಿ ಸಿನಿಮಾವು ಮೇ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ನಂತರ ಹೆಚ್ಚಿನ ಪ್ರೇಕ್ಷಕರ ಗಮನ ಸೆಳೆದಿದೆ. ಸದ್ಯ ಉತ್ತಮ ಪ್ರದರ್ಶನದ ನಡುವೆಯು ದಿ ಕೇರಳ ಸ್ಟೋರಿ ಸಿನಿಮಾ ಓಟಿಟಿಗೆ ಬಿಡುಗಡೆ ದಿನಾಂಕದ ಬಗ್ಗೆ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ. ಈ ಸಿನಿಮಾವು ಮಿಶ್ರ ಪ್ರತಿಕ್ರಿಯೆಗಳೊಂದಿದೆ ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ಸುಮಾರು 50 ಕೋಟಿ ಗಳಿಸಿದೆ. ಈಗ ಥಿಯೇಟ್ರಿಕಲ್ ಬಿಡುಗಡೆಯ ನಂತರ, ಕೇರಳ ಸ್ಟೋರಿಯ ಅಭಿಮಾನಿಗಳು ಯಾವಾಗ ಓಟಿಟಿ ಲಗ್ಗೆ ಇಡಲಿದೆ ಎಂದು ಕಾಯುತ್ತಿದ್ದಾರೆ. ಹೀಗಾಗಿ ಈ ಸಿನಿಮಾವು ಮುಂದಿನ ವಾರದಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಬರುವ ಸುದ್ದಿ ಹರಿದಾಡುತ್ತಿದೆ.

ದಿ ಕೇರಳ ಸ್ಟೋರಿ ಸಿನಿಮಾವು, ಕೇರಳ ರಾಜ್ಯದಿಂದ ಕಾಣೆಯಾದ ಸುಮಾರು 32 ಮಹಿಳೆಯರನ್ನು ಕೇಂದ್ರೀಕರಿಸುತ್ತದೆ. ಸಿನಿಮಾ ನಿರ್ಮಾಪಕ ಸುದೀಪ್ತೋ ಸೇನ್ ಅವರು ಎಲ್ಲಿದ್ದಾರೆ ಮತ್ತು ಅವರಿಗೆ ಏನಾಯಿತು ಎಂಬುದನ್ನು ಈ ಸಿನಿಮಾ ಮೂಲಕ ವಿವರಿಸಲು ಪ್ರಯತ್ನಿಸಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಅದಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಅದಾ ಶರ್ಮಾ ಇಸ್ಲಾಂಗೆ ಮತಾಂತರಗೊಂಡ ಫಾತಿಮಾ ಬಾ ಪಾತ್ರದಲ್ಲಿ ನಟಿಸಿದ್ದಾರೆ. ಫಾತಿಮಾ ಬಾ ಹಿಂದೂ ಮಲಯಾಳಿ ನರ್ಸ್ ಆಗಿದ್ದು, ಆಕೆಯನ್ನು ತನ್ನ ಮನೆಯಿಂದ ಅಪಹರಿಸಲಾಯಿತು ಮತ್ತು ಅಫ್ಘಾನ್ ಜೈಲಿನಲ್ಲಿ ಕೊನೆಗೊಳ್ಳುವ ಮೊದಲು ಐಸಿಸ್ ಭಯೋತ್ಪಾದಕ ಗುಂಪಿಗೆ ಸೇರುವಂತೆ ಒತ್ತಾಯಿಸಲಾಯಿತು.

ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಈ ಸಿನಿಮಾ ಹಾಗೂ ಪಾತ್ರದ ಬಗ್ಗೆ ಹಲವರಿಂದ ಹಲವು ಪ್ರತಿಕ್ರಿಯೆಗಳು ಬರುತ್ತಿವೆ. ಒಟಿಟಿಯಲ್ಲಿ ಕೇರಳ ಸ್ಟೋರಿ ಸಿನಿಮಾವನ್ನು ವೀಕ್ಷಿಸಲು ನೀವು ಸಹ ಉತ್ಸುಕರಾಗಿದ್ದರೆ, ನೀವು ಸ್ವಲ್ಪ ಸಮಯ ಕಾಯಬೇಕು ಅಥವಾ ಸಿನಿಮಾದ ಕಥೆಯನ್ನು ಅರ್ಥಮಾಡಿಕೊಳ್ಳಲು ಈ ಸಿನಿಮಾವನ್ನು ಕೂಡಲೇ ವೀಕ್ಷಿಸಲು ನೀವು ಹತ್ತಿರದ ಥಿಯೇಟರ್‌ಗೆ ಹೋಗಬಹುದು.

ಮಾಧ್ಯಮ ವರದಿಗಳ ಪ್ರಕಾರ, ದಿ ಕೇರಳ ಸ್ಟೋರಿ ಸಿನಿಮಾವನ್ನು ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾದ ತಯಾರಕರು ಸಿನಿಮಾವನ್ನು ಓಟಿಟಿಯಲ್ಲಿ ಜೂನ್ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಈ ಕುರಿತಂತೆ ತಯಾರಕರಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದ್ದರಿಂದ ನೀವು ಕೇರಳ ಸ್ಟೋರಿಯ ಅಭಿಮಾನಿಯಾಗಿದ್ದರೆ ಮತ್ತು ಅದರ ಓಟಿಟಿ ಬಿಡುಗಡೆಗಾಗಿ ಕಾಯುತ್ತಿದ್ದರೆ ನೀವು ಇನ್ನೂ ಸ್ವಲ್ಪ ಕಾಯಬೇಕಾಗಿದೆ.

ಇದನ್ನೂ ಓದಿ : Korean singer choi sung bong : 33 ನೇ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡ ಪಾಪ್ ತಾರೆ ಚೋಯ್ ಸುಂಗ್-ಬಾಂಗ್

ಇದನ್ನೂ ಓದಿ : Ram charan teja Upasana Kamineni : ಮಗುವಿನ ಜೊತೆ ಆಸ್ಪತ್ರೆ ಮುಂದೆ ಪೋಸ್‌ ಕೊಟ್ಟ ರಾಮ್ ಚರಣ್, ಉಪಾಸನಾ ಕಾಮಿನೇನಿ

ಇನ್ನು ದಿ ಕೇರಳ ಸ್ಟೋರಿ ಓಟಿಟಿ ಬಿಡುಗಡೆಗಾಗಿ ಸ್ವಲ್ಪ ಸಮಯ ಕಾಯಬೇಕಾಗಿದೆ ಮತ್ತು ನೀವು ಶೀಘ್ರದಲ್ಲೇ Zee5 ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾವನ್ನು ವೀಕ್ಷಿಸಲು ಸಾಧ್ಯವಾಗಬಹುದು. ಅದರ ಓಟಿಟಿ ಬಿಡುಗಡೆಯೊಂದಿಗೆ, ತಯಾರಕರು ಕೇರಳ ಸ್ಟೋರಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ ಮತ್ತು UK ಮತ್ತು ಫ್ರಾನ್ಸ್‌ನಲ್ಲಿಯೂ ಬಿಡುಗಡೆ ಮಾಡಲಿದ್ದಾರೆ.

The Kerala Story OTT: The Kerala Story movie will soon be launched on OTT

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular