ಚೆನ್ನೈ : ನಟ ರಜನೀಕಾಂತ್ ಅವರನ್ನು ಅಕ್ಟೋಬರ್ 28 ರಂದು ಕೌವರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಜನೀಕಾಂತ್ ಆಸ್ಪತ್ರೆಗೆ ದಾಖಲಾದ ಕಾರಣದಿಂದ ಅಭಿಮಾನಿಗಳು ಆತಂಕದಲ್ಲಿದ್ದರು. ಆದರೆ ನಟ ರಜನೀಕಾಂತ್ ಚೆನ್ನೈ ಆಸ್ಪತ್ರೆಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಅವರಿಗೆ ವೈದ್ಯರ ಸಲಹೇ ಮೇರೆಗೆ ʼಕ್ಯಾರೋಟಿಡ್ ಎಂಡಾರೆಕ್ಟಮಿʼ ಚಿಕಿತ್ಸ್ತೆಯನ್ನು ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾರ ಕೌವರಿ ಆಸ್ಪತ್ರೆಗೆ ದಾಖಲಾದ ನಟ ರಜನೀಕಾಂತ್ ಅವರು ಶುಕ್ರವಾರ ʼಕ್ಯಾರೋಟಿಡ್ ಎಂಡಾರೆಕ್ಟಮಿʼ ಸರ್ಜರಿಯನ್ನು ಮಾಡಿಸಿಕೊಂಡಿದ್ದಾರೆ. ಇದಾದ ಬಳಿಕ ನಟ ರಜನೀಕಾಂತ್ ಚೆತರಿಸಿಕೊಳ್ಳುತ್ತಿದ್ದಾರೆ. ನಟ ರಜನೀಕಾಂತ್ ಅವರ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಹೊರಡಿಸಿದ ವೈದ್ಯಕೀಯ ಬುಲೆಟಿನ್ ತಿಳಿಸಿದೆ.
ಇದನ್ನೂ ಓದಿ: Puneeth- Sehwag : ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಸೆಹವಾಗ್
ತಜ್ಞ ವೈದ್ಯರು ರಜನೀಕಾಂತ್ ಅವರ ಆರೋಗ್ಯಸ್ಥಿತಿಯನ್ನು ಪರಿಶೀಲಿಸಿ ನಂತರ ಈ ಸರ್ಜರಿಯನ್ನು ಮಾಡಬೇಕು ಎಂದು ತಿಳಿಸಿದ್ದಾರೆ. ನಂತರ ಮರುದಿನವೇ ನಟ ರಜನೀಕಾಂತ್ ಅವರಿಗೆ ʼಕ್ಯಾರೋಟಿಡ್ ಎಂಡಾರೆಕ್ಟಮಿʼ ಸರ್ಜರಿಯನ್ನು ಮಾಡಲಾಗಿದೆ. ಮೆದುಳಿನ ನರದಲ್ಲಿ ರಕ್ತ ಬ್ಲಾಕ್ ಆದ ಸಂದರ್ಭದಲ್ಲಿ ಈ ಚಿಕಿತ್ಸೆಯನ್ನು ಮಾಡಲಾಗುತ್ತದೆ.
ಇದನ್ನೂ ಓದಿ: Raayan Raj Sarja : ಸಿಂಬ ಕಲ್ಪನೆಯಲ್ಲಿ ರಾಯಲ್ ಆಗಿ ನಡೆಯಿತು ಮೇಘನಾ ಪುತ್ರನ ಹುಟ್ಟುಹಬ್ಬ
(Actor Rajinikanth treated with carotid endadectomy)