ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಗೌರಿ ಗಣೇಶ್ ಹಬ್ಬದ ಖುಷಿ ಡಬ್ಬಲ್ಲಾಗಿದೆ. ಹಬ್ಬದ ಸವಿ ಹೆಚ್ಚಿಸೋಕೆ ರಜನಿಕಾಂತ್ ಬಹುನೀರಿಕ್ಷಿತ ಸಿನಿಮಾ ಅಣ್ಣಾತ್ತೆ ಸಿನಿಮಾದ ಪೋಸ್ಟರ್ ಹಾಗೂ ಫರ್ಸ್ಟ್ ಲುಕ್ ಸೆ.೧೦ ರಂದು ರಿವೀಲ್ ಆಗಲಿದೆ.
ಕೊರೋನಾ ನಡುವೆ ಗೌರಿ ಗಣೇಶ್ ಹಬ್ಬವನ್ನು ಸರಳವಾಗಿ ಆಚರಿಸೋ ಬೇಸರದಲ್ಲಿದ್ದ ಅಭಿಮಾನಿಗಳಿಗೆ ರಜನಿಕಾಂತ್ ಮೂವಿ ಫರ್ಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ಪರಮ ಸುಂದರಿಯಾದ್ರು ಅಗ್ನಿಸಾಕ್ಷಿ ಚೆಲುವೆ: ವೈಷ್ಣವಿ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ
ಸೆ.೧೦ ರಂದು ಮುಂಜಾನೆ ೧೧ ಗಂಟೆಗೆ ಅಣ್ಣಾತ್ತೆ ಸಿನಿಮಾದ ಫರ್ಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಲಿದೆ. ಅದೇ ದಿನ ಸಂಜೆ ೬ ಗಂಟೆಗೆ ಅಣ್ಣಾತ್ತೆ ಸಿನಿಮಾದ ಮೋಷನ್ ಪೋಸ್ಟರ್ ಅನಾವರಣಗೊಳ್ಳಲಿದೆ.
ಅಣ್ಣಾತ್ತೆ ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದಲೂ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಈಗ ಸಿನಿಮಾದ ಮೊದಲ ಪೋಸ್ಟರ್ ಹೊರಬೀಳೋ ಸುದ್ದಿ ಸಿಕ್ಕಿದೆ. ಅಣ್ಣಾತ್ತೆ ಸಿನಿಮಾ ಪೋಸ್ಟರ್ ಹಾಗೂ ಫರ್ಸ್ಟ್ ಲುಕ್ ರಿಲೀಸ್ ಸುದ್ದಿ ಈಗ ಸೋಷಿಯಲ್ ಮೀಡಿಯಾ ದಲ್ಲಿ ಟ್ರೆಂಡ್ ಸೃಷ್ಟಿಸಿದೆ.
ಇದನ್ನೂ ಓದಿ: ತಲೈವಿ ಚಿತ್ರತಂಡದ ಕನ್ನಡ ಪ್ರೀತಿ:ಗುಳಿ ಕೆನ್ನೆ ಬೆಡಗಿಗೆ ಸಿಕ್ತು ಸ್ಪೆಶಲ್ ಗಿಫ್ಟ್
ಸದ್ಯ ರಜನಿಕಾಂತ್ ಅಣ್ಣಾತ್ತೆ ಸಿನಿಮಾ ಶೂಟಿಂಗ್ ಮುಗಿಸಿದ್ದು,ಮುಂದಿನ ವರ್ಷದ ವೇಳೆಗೆ ಸಿನಿಮಾ ತೆರೆಗೆ ಬರಲಿದೆ. ರಜನಿಕಾಂತ್ ಜೊತೆ ನಟಿ ನಯನತಾರಾ,ಕೀರ್ತಿ ಸುರೇಶ್,ಹಿರಿಯ ನಟ ಮೀನಾ,ಖಷ್ಬೂ,ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.
(Happy news for rajanikanth fans .annatte first look will release on gawori ganesh festival)