ಭಾನುವಾರ, ಏಪ್ರಿಲ್ 27, 2025
HomeCinemaDivya Agarwal: ಸಲಾರ್ ಎಂಟ್ರಿಕೊಟ್ಟ ಕಿರುತೆರೆ ಬ್ಯೂಟಿ: ಸ್ಪೆಶಲ್ ಪಾತ್ರದಲ್ಲಿ ಬಿಗ್ ಬಾಸ್ ಒಟಿಟಿ ವಿನ್ನರ್

Divya Agarwal: ಸಲಾರ್ ಎಂಟ್ರಿಕೊಟ್ಟ ಕಿರುತೆರೆ ಬ್ಯೂಟಿ: ಸ್ಪೆಶಲ್ ಪಾತ್ರದಲ್ಲಿ ಬಿಗ್ ಬಾಸ್ ಒಟಿಟಿ ವಿನ್ನರ್

- Advertisement -

ಮೊನ್ನೆ ಮೊನ್ನೆಯಷ್ಟೇ ಬಿಗ್ ಬಾಸ್ ಒಟಿಟಿ ವಿನ್ನರ್ ಕಿರೀಟ ತೊಟ್ಟ ನಟಿ,ಮಾಡೆಲ್ ಹಾಗೂ ಡ್ಯಾನ್ಸರ್ ದಿವ್ಯಾ ಅರ್ಗವಾಲ್ ಭರ್ಜರಿ ಸುದ್ದಿ ಕೊಟ್ಟಿದ್ದಾರೆ.   ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ದಿವ್ಯಾಗೆ ಅದೃಷ್ಟ ಒಲಿದು ಬಂದಿದ್ದು, ಬಹುನೀರಿಕ್ಷಿತ ಸಲಾರ್ ಚಿತ್ರದಲ್ಲಿ ಸ್ಥಾನ ಪಡೆದಿದ್ದಾರೆ.

ಕೆಜಿಎಫ್ ಮೂಲಕ ಹೆಸರುವಾಸಿಯಾದ ನಿರ್ದೇಶಕ ಪ್ರಶಾಂತ್ ನೀಲ್ ಡೈರೆಕ್ಷನ್ ಅಲ್ಲಿ ಮೂಡಿ ಬರುತ್ತಿರುವ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿರೋ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

2022 ರ ಏಪ್ರಿಲ್ ನಲ್ಲಿ ತೆರೆಗೆ ಬರಲಿಸೋ ಸಿನಿಮಾದ ಬಗ್ಗೆ  ಸಾಕಷ್ಟು ನೀರಿಕ್ಷೆಗಳಿದ್ದು, ಬಿಗ್ ಬಜೆಟ್ ಸಿನಿಮಾಗಳ ಮೂಲಕವೇ ಸದ್ದು ಮಾಡುತ್ತಿರುವ ಹೊಂಬಾಳೆ ಫಿಲ್ಸ್ಮಂ ಈ ಸಿನಿಮಾ ನಿರ್ಮಿಸುತ್ತಿದ್ದರು. ಈ ಸಿನಿಮಾದ ಸ್ಪೆಶಲ್ ರೋಲ್ ವೊಂದಕ್ಕೆ ದಿವ್ಯಾ ಅರ್ಗವಾಲ್ ಆಯ್ಕೆಯಾಗಿದ್ದಾರಂತೆ.

ಇದನ್ನೂ ಓದಿ : ಪರಮ ಸುಂದರಿಯಾದ್ರು ಪ್ರಿಯಾಂಕಾ ಉಪೇಂದ್ರ್: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

MTV Splitsvilla-10′ ಮತ್ತು ‘Ace of Space-1’  ವಿನ್ನರ್ ಆಗಿರೋ ದಿವ್ಯಾ ಅರ್ಗವಾಲ್, ರಾಗಿಣಿ ಎಂಎಂಎಸ್ ಹಾಗೂಹಾರರ್ ಸಿನಿಮಾದ ಮೂಲಕ ಬಣ್ಣ ಹಚ್ಚಿದ್ದರು. ಕಿರುತೆರೆಯ ನಟಿ ಹಾಗೂ ಮಾಡೆಲ್, ಡ್ಯಾನ್ಸರ್ ಆಗಿ ಹೆಸರು ಗಳಿಸಿರೋ ದಿವ್ಯಾ ಅಗರ್ವಾಲ್ ಪ್ರಭಾಸ್ ಸೆಟ್ ಸೇರಿರೋ ಸಂಗತಿ ಅಧಿಕೃತವಾಗಿ ಹೊರಬೀಳಬೇಕಿದೆ.

ವಿದ್ಯಾ ಇಮೇಜ್ ಸರಿಹೊಂದೋ ಪಾತ್ರವೊಂದನ್ನು ಸೃಷ್ಟಿಸಿ ನಿರ್ದೇಶಕರು ದಿವ್ಯಾರನ್ನು ಸಂಪರ್ಕಿಸಿದ್ದಾರಂತೆ. ಇದಕ್ಕೆ ದಿವ್ಯಾ ಅರ್ಗವಾಲ್ ಕೂಡ ಖುಷಿಯಿಂದ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಶೂಟಿಂಗ್ ಗೆ ಹಾಜರಾಗಲಿದ್ದಾರಂತೆ.

ಇದನ್ನೂ ಓದಿ : ಸೈಮಾ ಅವಾರ್ಡ್ಸ್ ಫಂಕ್ಷನ್ ನಲ್ಲಿ‌ ಚಿರು : ಸ್ನೇಹಕ್ಕೆ ಪನ್ನಗಾಭರಣ ಕೊಟ್ರು ವಿಶೇಷ ಬೆಲೆ

(big boss ott winner divvy Agarwal entry to salar movie)


RELATED ARTICLES

Most Popular