ಸೋಮವಾರ, ಜೂನ್ 16, 2025
HomeCinemaTomorrow Release Movies : ನಾಳೆ ಒಂದೇ ದಿನ 18 ಸಿನಿಮಾ ತೆರೆಗೆ : ಸಿನಿಮಾ...

Tomorrow Release Movies : ನಾಳೆ ಒಂದೇ ದಿನ 18 ಸಿನಿಮಾ ತೆರೆಗೆ : ಸಿನಿಮಾ ಸುನಾಮಿಗೆ ಸಿನಿಪ್ರೇಕ್ಷಕರೇ ತತ್ತರ

- Advertisement -

ಸಿನಿಮಾ ಕ್ಷೇತ್ರದಲ್ಲಿ ವಾರಕ್ಕೆ ಹೆಚ್ಚೆಂದರೆ ಐದಾರು ಸಿನಿಮಾ ತೆರೆ ಕಾಣುವುದು (Tomorrow Release Movies) ಸಾಮಾನ್ಯ. ಅದು ಕೂಡ ಸಿನಿರಂಗಕ್ಕೆ ಆರೋಗ್ಯಕರವಲ್ಲ. ಈ ತರಹ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಸಿನಿಮಂದಿರಗಳ ಸಮಸ್ಯೆ ಒಂದು ಕಡೆಯಾದರೆ, ಇನ್ನೊಂದು ಕಡೆ ಸಿನಿಪ್ರೇಕ್ಷಕರಿಗೆ ಕಿರಿಕಿರಿ ಆಗುವುದಂತೂ ಗ್ಯಾರಂಟಿ. ಬಿಡುಗಡೆಗೊಂಡ ಅಷ್ಟು ಸಿನಿಮಾ ಚೆನ್ನಾಗಿದ್ದರೆ, ನೋಡುಗರು ಹಣವನ್ನು ಒಂದೇ ಸಮಯಕ್ಕೆ ತರೋದು ಹೇಗೆ ? ಇಂತಹ ಹತ್ತು ಹಲವು ಪ್ರಶ್ನೆಗಳ ನಡುವೆಯೇ ನಾಳೆ ಕರ್ನಾಟಕದಲ್ಲಿ ಒಟ್ಟು 18 ಸಿನಿಮಾಗಳು ತೆರೆಗೆ ಅಪ್ಪಳಿಸಲಿದೆ.

ಈ 18 ಸಿನಿಮಾಗಳ ಪೈಕಿ 10 ಸಿನಿಮಾಗಳು ಕನ್ನಡದೇ ಆಗಿರುವುದು ಮತ್ತಷ್ಟು ಭಯ ಹುಟ್ಟಿಸುತ್ತಿರುವ ವಿಷಯವಾಗಿದೆ. ಕನ್ನಡದ 10 ಸಿನಿಮಾಗಳಾದ ವಿಜಯಾನಂದ, ಬಾಂಡ್‌ ರವಿ, ಡಾ.56 ನಾನೇ ರಾಕ್ಷಸ, ದ್ವಿಪಾತ್ರ, ಸುನಾಮಿ 143, ಕ್ಷೇಮಗಿರಿಯಲ್ಲಿ ಕರ್ನಾಟಕ, ಪ್ರಾಯಶಃ, ಮೈಸೂರು ಡೈರೀಸ್‌, ಪಂಖುರಿ ನಾಳೆ ತೆರೆ ಕಾಣಲಿದೆ. ಇವುಗಳೊಂದಿಗೆ ಎಂಟು ಪರಭಾಷೆ ಸಿನಿಮಾಗಳಾಗಿವೆ.

ಇದನ್ನೂ ಓದಿ : Deepika Padukone : ಲೇಡಿ ಸಿಂಗಂ ಆಗಿ ಎಂಟ್ರಿ ಕೊಟ್ಟ ನಟಿ ದೀಪಿಕಾ ಪಡುಕೋಣೆ

ಇದನ್ನೂ ಓದಿ : Worldwide Google Search Movie : 2022ರಲ್ಲಿ ವಿಶ್ವದಾದ್ಯಂತ ಗೂಗಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿದ ಕನ್ನಡ ಸಿನಿಮಾ ಯಾವುದು ಗೊತ್ತಾ ?

ಇದನ್ನೂ ಓದಿ : Aniruddha Jatkar : ಮತ್ತೆ ಕಿರುತೆರೆಗೆ ಕಾಲಿಟ್ಟ ಅನಿರುದ್ಧ : “ಸೂರ್ಯವಂಶ” ಧಾರಾವಾಹಿಗೆ ಹೀರೋ

ಇದನ್ನೂ ಓದಿ : Ambareesh-Sumalatha : 31ನೇ ಮದುವೆ ವಾರ್ಷಿಕೋತ್ಸವದಂದು ಅಂಬರೀಶ್ ನೆನೆದ ಸುಮಲತಾ

ಸಲಾಂ ವೆಂಕಿ, ನಾಯಿ ಶೇಖರ್‌ ರಿಟರ್ನ್ಸ್‌, ಗುರ್ತಂದ ಶೀಲಕಾಲಂ, ವರಲಾರು ಮುಕ್ಕಿಯಂ, ಪಂಚತಂತ್ರ, ಮುಖಚಿತ್ರಂ ಸೇರಿದಂತೆ ಹಲವು ಪರಭಾಷಾ ಸಿನಿಮಾಗಳು ಕೂಡ ಈ ವಾರ ಕನ್ನಡದಲ್ಲಿ ತೆರೆ ಕಾಣಲಿದ್ದು, ಎಲ್ಲಾ ಸಿನಿಮಂದಿರಗಳಲ್ಲೂ ಪ್ರದರ್ಶನಕ್ಕೆ ಸಿದ್ಧವಾಗಿದೆ. ಕೆಲವಷ್ಟು ಸಿನಿತಂಡ ಹೆಚ್ಚು ಸಿನಿಮಂದಿರ ಸಿಕ್ಕರೆ, ಒಂದಷ್ಟು ಸಿನಿತಂಡ ಥಿಯೇಟರ್‌ಗಾಗಿ ಗುದ್ದಾಟವನ್ನು ಆರಂಭಿಸಿದ್ದಾರೆ. ಬಿಡುಗಡೆಗೊಂಡ ಎಲ್ಲಾ ಸಿನಿಮಾಗಳು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ, ಆದರೆ ಒಳ್ಳೆಯ ಸಿನಿಮಾವಾದರೂ ಯಶಸ್ಸನ್ನು ಕಾಣುತ್ತಾ ಎಂದು ಕಾದು ನೋಡಬೇಕಿದೆ.

Tomorrow Release Movies: Tomorrow 18 movies will be released in a single day: moviegoers are anxious for the movie tsunami.

RELATED ARTICLES

Most Popular