ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಮಲಯಾಲಂನಲ್ಲಿ ಮೋಹನ್ ಲಾಲ್ ಗೆ ಜೊತೆಯಾಗೋದು ಭಾರೀ ಸುದ್ದಿಯಾಗಿತ್ತು. ‘ರಾಮ್’ ಚಿತ್ರದಲ್ಲಿ ನಟ ಮೋಹನ್ ಲಾಲ್ ಗೆ ಜೊತೆಯಾಟಿ ತ್ರಿಷಾ ನಟಿಸಬೇಕಿತ್ತು. ಆದ್ರೀಗ ತ್ರಿಷಾ ಕೃಷ್ಣನ್ ಚಿತ್ರದಿಂದ ಹೊರನಡೆದಿದ್ದಾರೆ.

ಈ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ತೆಲುಗಿನ ‘ಆಚಾರ್ಯ’ ಸಿನಿಮಾದಿಂದ ಹೊರ ನಡೆದು ಸುದ್ದಿಯಾಗಿದ್ರು. ಸೃಜನಾತ್ಮಕ ವ್ಯತ್ಯಾಸಗಳಿಂದಾಗಿ ತಾವು ಚಿತ್ರದಿಂದ ಹೊರ ನಡೆದಿರುವುದಾಗಿಯೂ ಹೇಳಿಕೊಂಡಿದ್ದರು ತ್ರಿಷಾ.

ಇದೀಗ ಮಲಯಾಲಂ ನಟ ಮೋಹನ್ ಲಾಲ್ ನಟನೆಯ ಬಹುನಿರೀಕ್ಷಿತ ರಾಮ್ ಚಿತ್ರದಿಂದಲೂ ಹೊರ ನಡೆಯುವ ಮೂಲಕ ಶಾಕ್ ಕೊಟ್ಟಿದ್ದಾರೆ.

‘ರಾಮ್ ‘ ಮಲಯಾಲಂನ ಬಹು ನಿರೀಕ್ಷಿತ ಸಿನಿಮಾ. ಮೋಹನ್ ಲಾಲ್ ನಟನೆಯ ಸಿನಿಮಾಕ್ಕೆ ಆಚಾರ್ಯ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಹಾಗೂ ರಾಮಚರಣ್ ಬಂಡವಾಳ ಹೂಡಿದ್ದಾರೆ.

ಅಲ್ಲದೇ ಮಲಯಾಲಂ ಸಿನಿರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿದ್ದ ದೃಶ್ಯಂ ಸಿನಿಮಾದ ಖ್ಯಾತ ನಿರ್ದೇಶಕ ಜೀತು ಜೋಸೆಫ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.


ಹಿ ಹ್ಯಾಸ್ ನೋ ಬೌಂಡರೀಸ್ ಅನ್ನೋ ಅಡಿಬರಹವನ್ನು ಹೊಂದಿದ್ದ ಸಿನಿಮಾ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಆದ್ರೀಗ ನಟಿ ತ್ರಿಷಾ ಕೃಷ್ಣನ್ ಸಿನಿಮಾದಿಂದ ಹೊರ ನಡೆದಿರೋದು ಅಭಿಮಾನಿಗಳಿಗೆ ನಿರಾಸೆಯಾಗಿದೆ.

ತ್ರಿಷಾ ಕೃಷ್ಣನ್ ಜಾಗದಲ್ಲಿ ಮಗಧೀರ ಖ್ಯಾತಿಯ ಕಾಜಲ್ ಅಗರ್ ವಾಲ್ ಕಾಣಿಸಿಕೊಂಡಿದ್ದು, ರಾಮ್ ಚಿತ್ರದಲ್ಲಿ ಮೋಹನ್ ಲಾಲ್ ಗೆ ಜೊತೆಯಾಗಲಿದ್ದಾರೆ.

ತ್ರಿಷಾ ರಾಮ್ ಸಿನಿಮಾದಿಂದ ಹೊರನಡೆದಿರೋದಕ್ಕೆ ನಿಖರವಾದ ಕಾರಣ ಏನೂ ಅನ್ನೋದು ಗೊತ್ತಾಗಿಲ್ಲ. ಸಿನಿಮಾ ಇನ್ನಷ್ಟೇ ಸೆಟ್ಟರಬೇಕಿದೆ.

ಆದರೆ ಕೊರೊನಾ ವೈರಸ್ ಸೋಂಕಿ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಸದ್ಯಕ್ಕೆ ಆರಂಭವಾಗೋದು ಅಸಾಧ್ಯ.

ಒಟ್ಟಿನಲ್ಲಿ ಸಿನಿಮಾ ಸೆಟ್ಟೇರಿದ ನಂತರವಷ್ಟೇ ತ್ರಿಷಾ ಸಿನಿಮಾದಿಂದ ಹೊರ ನಡೆದಿರೋದಕ್ಕೆ ನಿಖರ ಕಾರಣ ತಿಳಿಯಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ ಸಿನಿ ಪ್ರೇಕ್ಷಕರು.

ನಟಿ ತ್ರಿಷಾ ಕೃಷ್ಣನ್ photos : trisha krishana instagram