lavanya of dasapurandara fame : ಸಧ್ಯ ಕನ್ನಡ ಕಿರುತೆರೆ ತಾರೆಯರಲ್ಲಿ ಸಾಲು ಸಾಲು ವಿವಾಹಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದಷ್ಟೇ ನನ್ನರಸಿ ರಾಧೆ ಸೀರಿಯಲ್ ಖ್ಯಾತಿಯ ತೇಜಸ್ವಿನಿ ಪ್ರಕಾಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅದೇ ರೀತಿ ಅಗ್ನಿಸಾಕ್ಷಿ ಖ್ಯಾತಿಯ ಐಶ್ವರ್ಯ ಸಾಲಿಮಠ ಕೂಡ ಮೂರುಗಂಟು ಬೆಸೆದುಕೊಂಡಿದ್ದರು. ಅದೇ ರೀತಿ ಇದೀಗ ರಾಜಾ – ರಾಣಿ ಧಾರವಾಹಿ ಖ್ಯಾತಿಯ ಶಶಿ ಹೆಗಡೆ ಹಾಗೂ ಲಾವಣ್ಯ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ.

ಸಧ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರವಾಹಿಯಲ್ಲಿ ಪದ್ಮ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ಲಾವಣ್ಯ ಕಿರುತೆರೆ ನಟ ಶಶಿ ಹೆಗಡೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗೋಳಿ ಎಂಬಲ್ಲಿ ಈ ಜೋಡಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಮೇ 22ರಂದು ಮದುವೆಯಾಗಿದೆ .

ಪ್ರೀ ವೆಡ್ಡಿಂಗ್ ಶೂಟ್ನ ವಿಡಿಯೋವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ನಟ ಶಶಿಧರ ಹೆಗಡೆ ನಾಲ್ಕು ವರ್ಷಗಳಿಂದ ಕಂಡ ಕನಸು ನನಸಾಗಿ ಎರಡು ದಿನಗಳಾಯಿತು. ಸಿಕ್ಕಳು ನಮ್ಮ ಮನೆಯ ಅರಸಿ. ನೀವೆಲ್ಲರು ನಮಗೆ ಹರಸಿ ಎಂದು ಶೀರ್ಷಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಎಂಗೇಜ್ಮೆಂಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು.
ಬಿಕಾಂ ಪದವಿಧರನಾದ ಶಶಿ ಹೆಗಡೆ ಉದ್ಯೋಗಕ್ಕೆಂದು ಬೆಂಗಳೂರಿಗೆ ತೆರಳಿ ಕೆಲವು ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದರು. ಆದರೆ ತಾಯಿಯ ಕೊನೆಯ ಆಸೆಯಂತೆ ನಟನಾ ಕ್ಷೇತ್ರದಲ್ಲಿ ತಾವೇನಾದರೂ ಸಾಧನೆ ಮಾಡಬೇಕೆಂದುಕೊಂಡಿದ್ದ ಶಶಿಗೆ ಕಲರ್ಸ್ ಸೂಪರ್ ಸೀರಿಯಲ್ನಲ್ಲಿ ಅವಕಾಶ ಸಿಕ್ಕಿತ್ತು. ಇದೇ ಧಾರವಾಹಿಯಲ್ಲಿ ಶಶಿಧರ್ ತಂಗಿಯ ಪಾತ್ರದಲ್ಲಿ ನಟಿ ಲಾವಣ್ಯ ಕಾಣಿಸಿಕೊಳ್ಳುತ್ತಿದ್ದರು. ಈ ವೇಳೆ ಲಾವಣ್ಯ ಹಾಗೂ ಶಶಿ ಹೆಗಡೆ ನಡುವೆ ಪರಿಚಯವಾಗಿತ್ತು.
ಲಾವಣ್ಯರನ್ನು ಮೊದಲ ನೋಟದಲ್ಲೇ ಇಷ್ಟಪಟ್ಟಿದ್ದ ಶಶಿ ಲಾವಣ್ಯರೆದುರು ಪ್ರೇಮ ನಿವೇದನೆಯನ್ನು ಇಟ್ಟು ಬಳಿಕ ಲಾವಣ್ಯರ ತಾಯಿಯನ್ನೂ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಹಸಮಣೆ ಏರಿದೆ. ಶಶಿ ಹೆಗ್ಡೆ ಪ್ರಸ್ತುತ ತೆಲುಗು ಕಿರುತೆರೆಯಲ್ಲಿ ನಟಿಸುತ್ತಿದ್ದು ಶೀಘ್ರದಲ್ಲಿಯೇ ಕನ್ನಡ ಕಿರುತೆರೆಗೆ ಮರಳುವ ತಯಾರಿಯಲ್ಲಿದ್ದಾರೆ.
ಇದನ್ನು ಓದಿ : ಚೈತ್ರಾ ಹಳ್ಳಿಕೇರಿ 25 ಕೋಟಿ ಪರಿಹಾರಕ್ಕಾಗಿ ಸುಳ್ಳು ಆರೋಪ : ನಟಿ ಪತಿ ಬಾಲಾಜಿ ಪ್ರತ್ಯಾರೋಪ
ಇದನ್ನೂ ಓದಿ : Samantha and Vijay : ಸಾಹಸ ಚಿತ್ರೀಕರಣದ ವೇಳೆ ಗಾಯಗೊಂಡ ಸಮಂತಾ ಮತ್ತು ವಿಜಯ ದೇವರಕೊಂಡ
tv actress lavanya of dasapurandara fame gets married to shashi hegde