ಚಿರಂಜೀವಿ ಸರ್ಜಾ…. ಬಾಳಿ ಬದುಕಬೇಕಿದ್ದ ಹೀರೋ. ಪಕ್ಕದ ಮನೆ ಹುಡುಗನಂತ ಸರಳ ವ್ಯಕ್ತಿತ್ವದ ಚಿರು ಇನ್ನಿಲ್ಲವಾಗಿದ್ದೇ ದುರಂತ. ಆದರೇ ಜ್ಯೂನಿಯರ್ ಚಿರುಗೆ ತಂದೆ ಇಲ್ಲದ ಕೊರಗು ಬಾಧಿಸದಂತೆ ನೋಡಿಕೊಳ್ಳುವ ನಿರ್ಧಾರ ಮಾಡಿರುವ ಚಿಕ್ಕಪ್ಪ ಧ್ರುವ ಸರ್ಜಾ ಜ್ಯೂನಿಯರ್ ನಾಮಕರಣ ಕ್ಕೆ ಭರ್ಜರಿ ಗಿಫ್ಟ್ ಸಿದ್ಧಮಾಡಿದ್ದಾರೆ.

ಹೌದು, ಸದ್ಯದಲ್ಲೇ ಜ್ಯೂನಿಯರ್ ಚಿರುಗೆ ಅದ್ದೂರಿ ನಾಮಕರಣ ನಡೆಯಲಿದೆ. ಚಿರು ಮನೆಯಲ್ಲಿ ನಡೆಯಲಿರೋ ಈ ನಾಮಕರಣದ ದಿನಾಂಕ ಹಾಗೂ ಜ್ಯೂನಿಯರ್ ಚಿರು ಹೆಸರು ಸದ್ಯದಲ್ಲೇ ಬಹಿರಂಗವಾಗಲಿದೆ.

ನಾಮಕರಣಕ್ಕೆ ತಂದೆಯ ಮನೆಯಿಂದ ಮಗುವಿಗೆ ಬೆಲೆಬಾಳುವ ಉಡುಗೊರೆ ಕೊಡೋ ಸಂಪ್ರದಾಯವಿದೆ. ಇದೇ ಕಾರಣಕ್ಕೆ ಧ್ರುವ ಸರ್ಜಾ ಅಣ್ಣನ ಮಗನಿಗೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಈಗಾಗಲೇ ಪುಟ್ಟ ಕಂದನಿಗಾಗಿ 10 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಯ ತೊಟ್ಟಿಲು ಖರೀದಿಸಿರುವ ಧ್ರುವ ಸರ್ಜಾ, ನಾಮಕರಣ ದ ಗಿಫ್ಟ್ ಎಂದು 5 ಎಕರೆ ತೋಟ ಕೊಡಲು ಜನರು ನಿರ್ಧರಿಸಿದ್ದಾರಂತೆ.

ಕನಕಪುರ ರಸ್ತೆಯ ತಮ್ಮ ಫಾರ್ಂ ಹೌಸ್ ಬಳಿಯೇ ಧ್ರುವ ಸರ್ಜಾ ಅಣ್ಣನ ಮಗನಿಗಾಗಿ ಜಮೀನು ಖರೀದಿಸಿದ್ದಾರಂತೆ. ಈ ಕಾಗದ ಪತ್ರಗಳನ್ನು ನಾಮಕರಣದ ದಿನ ತಂದೆಯ ಮನೆಯ ಕೊಡುಗೆಯಾಗಿ ಜ್ಯೂನಿಯರ್ ಚಿರುಗೆ ನೀಡಲಿದ್ದಾರಂತೆ.

ಅಕ್ಟೋಬರ್ 22 ರಂದು ಮೇಘನಾ ರಾಜ್ ಡೆಲಿವರಿಯಾಗಿ ಮಗು ಹುಟ್ಟುತ್ತಿದ್ದಂತೆ ಅಣ್ಣನೇ ಮರಳಿ ಬಂದಿದ್ದಾನೆ ಎಂದಿದ್ದ ಧ್ರುವ ತಮ್ಮ ಕತ್ತಿನಲ್ಲಿ ಇದ್ದ ಚಿನ್ನದ ಸರವನ್ನು ಮಗು ಕೊರಳಿಗೆ ಹಾಕಿದ್ದರು. ಈಗ ಕೊಡುಗೆಯಾಗಿ ಜಮೀನು ಖರೀದಿಸಿದ್ದಾರೆ.

ಚಿರುಗೆ ಅಣ್ಣ ಎಂದ್ರೇ ಪಂಚ ಪ್ರಾಣವಾಗಿತ್ತು. ಚಿಕ್ಕಂದಿನಿಂದಲೂ ಅಣ್ಣನೊಂದಿಗೆ ಬೆಳೆದ ಚಿರುಗೆ ಅಣ್ಣನ ಅಗಲಿಕೆ ಸಹಿಸಿಕೊಳ್ಳಲು ಸಾಧ್ಯ ವಾಗುತ್ತಿಲ್ಲ.ಅಣ್ಣನ ಪ್ರತಿರೂಪವಾಗಿ ಮಗು ಬಂದಿದೆ ಎಂದುಕೊಂಡಿರುವ ದ್ರುವ ಸರ್ಜಾ ಆ ಮಗುವಿನ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದು ಒಂದಾದ ಮೇಲೊಂದು ಬೆಲೆ ಬಾಳುವ ಗಿಫ್ಟ್ ನೀಡುತ್ತಿದ್ದಾರೆ.

ಇತ್ತೀಚಿಗಷ್ಟೇ ಧ್ರುವ ಸರ್ಜಾ ಅಣ್ಣನ ಸಮಾಧಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಜ್ಯೂನಿಯರ್ ಚಿರು ನಾಮಕರಣದ ಬಳಿಕ ಮೇಘನಾ ಮಗುವಿನ ಜೊತೆ ಸಮಾಧಿ ಬಳಿ ತೆರಳಿ ಆಶೀರ್ವಾದ ಪಡೆಯಲಿದ್ದಾರೆ.