ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಹಾಗೂ ಸಾಮಾಜಿಕ ಕಥೆಯುಳ್ಳ ಸಿನಿಮಾಗಳನ್ನ ಕೊಡುತ್ತಾ ಬಂದಿರುವ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಹೋಂ ಮಿನಿಸ್ಟರ್ ಆಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಹೋಮ್ ಮಿನಿಸ್ಟರ್ ಸಿನಿಮಾ ಎರಡು ವರ್ಷಗಳ ಹಿಂದೆಯೇ ಈ ಸಿನಿಮಾ ಸೆಟ್ಟೇರಿತ್ತು. ಸುಜಯ್ ಕೆ. ಶ್ರೀಹರಿ ನಿರ್ದೇಶನದಲ್ಲಿ ಉಪೇಂದ್ರಗೆ ನಾಯಕಿಯಾಗಿ ವೇದಿಕಾ ಕುಮಾರ್ ನಟಿಸುತ್ತಿದ್ದರು.

ಪ್ರೇಕ್ಷಕರು ನಿರೀಕ್ಷಿಸಿದ ವೇಗದಲ್ಲಿ ಈ ಸಿನಿಮಾ ಕೆಲಸಗಳು ಪೂರ್ಣಗೊಂಡು ಸಿನಿಮಾ ಬಿಡುಗಡೆ ಕಂಡಿರಲಿಲ್ಲ. ಆದ್ರೀಗ ‘ಹೋಮ್ ಮಿನಿಸ್ಟರ್’ ಸದ್ಯದಲ್ಲಿಯೇ ತೆರೆಗೆ ಬರಲಿದೆ.

ಹೌದು, ಹೋಂ ಮಿನಿಸ್ಟರ್’ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದ್ದು, ಸಿನಿಮಾವನ್ನ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯಾವುದೇ ಕತ್ತರಿ ಹಾಕದೆ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ನೀಡಿದೆ.

ಹೋಂ ಮಿನಿಸ್ಟರ್ ಟೈಟಲ್ ಹೊಂದಿರುವ ಈ ಸಿನಿಮಾದಲ್ಲಿ ಥ್ರಿಲ್ಲರ್ ಹಾಗು ಪೊಲಿಟಿಕಲ್ ಆಧಾರದ ಸಿನಿಮಾವಾಗಿದೆ. ಲೀಡ್ ರೋಲ್ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕಾಣಿಸಿಕೊಂಡಿದ್ದಾರೆ.

ವೇದಿಕಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ತಾನ್ಯ ಹೋಪ್, ಶ್ರೀನಿವಾಸಮೂರ್ತಿ, ಹಿರಿಯ ನಟ ಅವಿನಾಶ್, ಮಾಳವಿಕ ಅವಿನಾಶ್, ಸಾಧುಕೋಕಿಲ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಶ್ರೀಹರಿ ಆಕ್ಷನ್ ಕಟ್ ಹೇಳಿದ್ದರೆ, ಪೂರ್ಣ ಚಂದ್ರ ನಾಯ್ಡು ಹಾಗು ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಸದ್ಯ ಲಾಕ್ಡೌನ್ ಇರುವುದರಿಂದ ಯಾವುದೇ ಸಿನಿಮಾ ಚಿತ್ರಮಂದಿರಗಳು ತೆರೆಯುವಂತೆ ಇಲ್ಲ. ಲಾಕ್ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಿ ಚಿತ್ರಮಂದಿರಗಳು ತೆರವಾದ ಬಳಿಕ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ನಟ ಉಪೇಂದ್ರ ಅವರು ಪ್ರಜಾಕೀಯ ಕೆಲಸಗಳನ್ನು ಪೂರ್ಣಾವಧಿಯಾಗಿ ಕೈಗೆತ್ತಿಕೊಳ್ಳುವ ಮುನ್ನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಆದರೆ ಯಾವಾಗ ಅವರು ಚುನಾವಣೆ ಕಡೆಗೆ ಗಮನ ಹರಿಸಲು ಆರಂಭಿಸಿದರೋ ಆಗಿನಿಂದ ಸಿನಿಮಾ ಚಟುವಟಿಕೆಗಳು ಕೊಂಚ ವಿಳಂಬ ಆಗತೊಡಗಿದವು. ಹಾಗಂತ ಅಭಿಮಾನಿಗಳಿಗೆ ಅವರು ನಿರಾಸೆ ಮಾಡಿಲ್ಲ.

ಪ್ರಜಾಕೀಯದ ಕೆಲಸ ಕಾರ್ಯಗಳ ನಡುವಲ್ಲೇ ಉಪ್ಪಿ ಸಿನಿಮಾಗಳಲ್ಲಿಯೂ ಬ್ಯೂಸಿಯಾಗಿದ್ದಾರೆ. ರಿಯಲ್ ಸ್ಟಾರ್ ನಟನೆಯ ರವಿಚಂದ್ರ, ಬುದ್ದಿವಂತ -2, ಕಬ್ಜ ಸೇರಿದಂತೆ ಸಾಲು ಸಾಲು ಸಿನಿಮಾಗಳು ಸದ್ಯದಲ್ಲಿಯೇ ತೆರೆಗೆ ಬರಲಿವೆ.