ಮಂಗಳವಾರ, ಏಪ್ರಿಲ್ 29, 2025
HomeCinemaಬಾಲಯ್ಯ - ದುನಿಯಾ ವಿಜಿ ನಟನೆಯ 'ವೀರಸಿಂಹ ರೆಡ್ಡಿ' ಓಟಿಟಿ ರಿಲೀಸ್ ಡೇಟ್‌ ಫಿಕ್ಸ್

ಬಾಲಯ್ಯ – ದುನಿಯಾ ವಿಜಿ ನಟನೆಯ ‘ವೀರಸಿಂಹ ರೆಡ್ಡಿ’ ಓಟಿಟಿ ರಿಲೀಸ್ ಡೇಟ್‌ ಫಿಕ್ಸ್

- Advertisement -

ಸಂಕ್ರಾಂತಿಯಂದು ತೆರೆಕಂಡ ‘ವೀರಸಿಂಹ ರೆಡ್ಡಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಸಿನಿಮಾದಲ್ಲಿ ಕನ್ನಡ ನಟ ದುನಿಯಾ ವಿಜಯ್ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ಸಿನಿಮಾ ಓಟಿಟಿ ರಿಲೀಸ್ ಡೇಟ್ (Veera Simha OTT Release date) ಕನ್ಫರ್ಮ್ ಆಗಿದೆ. ಬಾಲಕೃಷ್ಣ ಡಬಲ್ ರೋಲ್‌ನಲ್ಲಿ ಅಬ್ಬರಿಸಿದ್ದ ‘ವೀರಸಿಂಹ ರೆಡ್ಡಿ’ ಸಿನಿಮಾಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದರು. ಪರಿಣಾಮ ಸಿನಿಮಾ ಭರ್ಜರಿ ಗಳಿಕೆ ಮಾಡಿತ್ತು. ಜನವರಿ 12ಕ್ಕೆ ರಿಲೀಸ್ ಆಗಿದ್ದ ಸಿನಿಮಾ 130 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ನಿರ್ಮಾಪಕರು ಘೋಷಿಸಿದ್ದರು. ಫೆಬ್ರವರಿ 23ರ ಸಂಜೆ 6 ಗಂಟೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಸೌತ್‌ ಫ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

‘ವೀರಸಿಂಹ ರೆಡ್ಡಿ’ ಆಗಿ ಬಾಲಯ್ಯ ಆರ್ಭಟಕ್ಕೆ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಇನ್ನು ಸಿನಿಮಾದಲ್ಲಿ ಬಾಲಯ್ಯನ ಒಂದು ಪಾತ್ರದ ಲುಕ್ ಕನ್ನಡ ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣನ ‘ಬೈರತಿ ರಣಗಲ್’ ಲುಕ್‌ ನೆನಪಿಸುತ್ತಿತ್ತು. ಇದನ್ನು ನೋಡಿಯೇ ನಾವು ಕಾಪಿ ಮಾಡಿದ್ದು ಎಂದು ಇತ್ತೀಚೆಗೆ ಬಾಲಯ್ಯ ಹೇಳಿದ್ದರು. ಅಂದಾಜು 15 ಕೋಟಿಗೆ ಡಿಸ್ನಿ ಸಂಸ್ಥೆ ‘ವೀರಸಿಂಹ ರೆಡ್ಡಿ’ ಓಟಿಟಿ ರೈಟ್ಸ್ ಖರೀದಿಸಿರುವುದಾಗಿ ಹೇಳಲಾಗುತ್ತಿದೆ. ಫ್ಯಾಕ್ಷನಿಸಂ ಇಲ್ಲದಂತೆ ಮಾಡಿ ರಾಯಲಸೀಮೆಯನ್ನು ಅಭಿವೃದ್ಧಿಪಡಿಸಬೇಕು ಎಂದು ನಂಬಿದ ‘ವೀರಸಿಂಹ ರೆಡ್ಡಿ’ ಎನ್ನುವ ಪವರ್‌ಫುಲ್ ವ್ಯಕ್ತಿಯ ಸುತ್ತಾ ಈ ಸಿನಿಮಾ ಕಥೆ ಸುತ್ತತ್ತದೆ. ಇನ್ನು ಬಾಲಯ್ಯ ಡೈಲಾಗ್ಸ್, ಆಕ್ಷನ್ ಧಮಾಕ ನೋಡಿ ಫ್ಯಾನ್ಸ್ ಖುಷಿಯಾಗಿದ್ದರು.

ಸಿನಿಮಾದಲ್ಲಿ ಬಾಲಯ್ಯ ಜೋಡಿಯಾಗಿ ಶ್ರುತಿ ಹಾಸನ್ ಮಿಂಚಿದ್ದಾರೆ. ಇನ್ನು ಬಾಲಯ್ಯ ಸಹೋದರಿಯಾಗಿ ನೆಗೆಟಿವ್ ಶೇಡ್ ರೋಲ್‌ನಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿ, ಪ್ರಮೋಷನ್ ಮಾಡಿ ರಿಲೀಸ್ ಮಾಡಿತ್ತು.

ಇದನ್ನೂ ಓದಿ : Archana Jois : ಕೆಜಿಎಫ್‌ ಖ್ಯಾತಿಯ ಅರ್ಚನಾ ಜೋಯಿಸ್‌ ಸಿನಿ ಪಯಣದ ಬಗ್ಗೆ ನಿಮಗೆಷ್ಟು ಗೊತ್ತು ?

ಇದನ್ನೂ ಓದಿ : Kabza Audio Launch Date : ಆರ್‌.ಚಂದ್ರು, ನಟ ಉಪೇಂದ್ರ ಕಾಂಬಿನೇಷನ್‌ “ಕಬ್ಜ” ಆಡಿಯೋ ಲಾಂಚ್‌ ಡೇಟ್‌ ಫಿಕ್ಸ್‌

ಇದನ್ನೂ ಓದಿ : ನಟಿ ಸಮಂತಾಗೆ IVIG ಟ್ರೀಟ್‌ಮೆಂಟ್ : ಕೊನೆಗೂ ಹೆಲ್ತ್‌ ಅಪ್‌ಡೇಟ್‌ ನೀಡಿದ ಸ್ಯಾಮ್

ವೀರಸಿಂಹ ರೆಡ್ಡಿ ಸಿನಿಮಾಕ್ಕೆ ಮಿಶ್ರಪ್ರತಿಕ್ರಿಯೆ ಬಂದಿದ್ದರಿಂದ ಸಾಕಷ್ಟು ಜನ ಥಿಯೇಟರ್‌ಗೆ ಹೋಗಿರಲಿಲ್ಲ. ಅವರೆಲ್ಲಾ ಸ್ಮಾಲ್ ಸ್ಕ್ರೀನ್‌ನಲ್ಲಿ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಇನ್ನು ಡಿಸ್ನಿ ಸಂಸ್ಥೆ ಇತ್ತೀಚೆಗೆ ದಕ್ಷಿಣದ ಸಿನಿಮಾಗಳನ್ನು ಹೆಚ್ಚು ಕೊಂಡುಕೊಳ್ಳುತ್ತಿದ್ದು, ಭಾರೀ ಮೊತ್ತವನ್ನೇ ನೀಡುತ್ತಿದೆ. ಸದ್ಯ ಬಾಲಕೃಷ್ಣ ಅನಿಲ್ ರಾವಿಪುಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Veera Simha OTT Release date : Balayya-Duniya VG starrer ‘Veerasimha Reddy’ OTT release date fixed

RELATED ARTICLES

Most Popular