Lust Stories 2 : ಲಸ್ಟ್ ಸ್ಟೋರೀಸ್ 2 ಸಿನಿಮಾದ ಟೀಸರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಪ್ರೀತಿ, ಕಾಮವನ್ನು ಒಳಗೊಂಡಿದ್ದು, ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಲಸ್ಟ್ ಸ್ಟೋರೀಸ್ 2 ಅದ್ಬುತವಾಗಿ ಮೂಡಿಬಂದಿದೆ. ನೀನಾ ಗುಪ್ತಾ ವಯಸ್ಸಾದ ಮಹಿಳೆಯಾಗಿ ದಂಪತಿಗಳಿಗೆ ವೈವಾಹಿಕ ಸಲಹೆಗಳನ್ನು ನೀಡುವ ಮೂಲಕ ಟೀಸರ್ ಆರಂಭಗೊಳ್ಳುತ್ತದೆ.
ನೆಟ್‌ಫ್ಲಿಕ್ಸ್ ಇಂಡಿಯಾ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಅಮೃತಾ ಸುಭಾಷ್, ಅಂಗದ್ ಬೇಡಿ, ಕಾಜೋಲ್, ಕುಮುದ್ ಮಿಶ್ರಾ, ಮೃಣಾಲ್ ಠಾಕೂರ್, ನೀನಾ ಗುಪ್ತಾ, ತಮನ್ನಾ ಭಾಟಿಯಾ (Tamannaah Bhatia) , ತಿಲ್ಲೋಟಮಾ ಶೋಮ್ ಮತ್ತು ವಿಜಯ್ ವರ್ಮಾ (Vijay Varma) ಸೇರಿದಂತೆ ಹಲವು ಖ್ಯಾತ ನಾಮರು ಸಿನಿಮಾದಲ್ಲಿ ನಟಿಸಿದ್ದಾರೆ.
ವಿಜಯ್ ವರ್ಮಾ ತಮನ್ನಾ ಬಾಟಿಯಾ ಹಣೆಗೆ ರೋಮ್ಯಾಟಿಂಕ್ ಆಗಿ ಮುತ್ತಿಟ್ಟಿದ್ದಾರೆ. ಈ ಜೋಡಿಯ ರೋಮ್ಯಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮನ್ನಾ ಹಾಗೂ ವಿಜಯ್ ನಟನೆಯನ್ನು ನೋಡಿ ಸಾಕಷ್ಟು ಕಮೆಂಟ್‌ಗಳು ಹರಿದು ಬರುತ್ತಿದೆ. “ಅಚಾ ಯಹಾ ಸೆ ಆಪ್ಕಿ ಲವ್ ಸ್ಟೋರಿ ಶುರು ಹುಯಿ ಹೈ? ಎಂದು ಒಬ್ಬ ಬಳಕೆದಾರರು ಉಲ್ಲೇಖಿಸಿದ್ದಾರೆ, ಮತ್ತೊಬ್ಬ ಬಳಕೆದಾರರು ” ಮೇರಿ ತಮನ್ನಾ ಹೈ ಕಿ ಆಪ್ಕಿ ಯೇ ಸರಣಿ ಬಹುತ್ ಹಿಟ್ ಹೋ” ಎಂದು ಬರೆದುಕೊಂಡಿದ್ದಾರೆ.
ಲಸ್ಟ್ ಸ್ಟೋರೀಸ್ 2 ಅನ್ನು ಅಮಿತ್ ರವೀಂದ್ರನಾಥ್ ಶರ್ಮಾ, ಆರ್. ಬಾಲ್ಕಿ, ಕೊಂಕಣ ಸೇನ್ ಶರ್ಮಾ ಮತ್ತು ಸುಜೋಯ್ ಘೋಷ್ ಸೇರಿದಂತೆ ಒಟ್ಟು ನಾಲ್ವರು ನಿರ್ದೇಶಕರು ನಿರ್ದೇಶಿಸಿದ್ದಾರೆ. ನೀನಾ ಗುಪ್ತಾ ಡೈಲಾಗ್, ವಿಜಯ್ ತಮನ್ನಾ ರೋಮ್ಯಾನ್ಸ್ ಅದ್ಬುತವಾಗಿದೆ.