Vijay’s Beast movie :ಕಾಲಿವುಡ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ವಿಜಯ್ರ ( Vijay’s Beast movie) ಬಹುನಿರೀಕ್ಷಿತ ಸಿನಿಮಾ ಬೀಸ್ಟ್ ಇದೇ ತಿಂಗಳ 13ರಂದು ತೆರೆ ಕಾಣಲಿದೆ. ಟ್ರೇಲರ್ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದ್ದ ಈ ಸಿನಿಮಾ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ.
ಈ ಸಿನಿಮಾದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ತೋರಿಸಲಾಗಿದೆ ಎಂದಿರುವ ಕುವೈತ್ ತಮ್ಮ ದೇಶದಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲು ನಿಷೇಧವನ್ನು ಹೇರಿದೆ. ಕುವೈತ್ ಹಿತಾಸಕ್ತಿಗೆ ವಿರೋಧವಾದ ಸಿನಿಮಾಗಳಿಗೆ ಜಾಗವಿಲ್ಲ ಎಂದಿದ್ದ ಅಲ್ಲಿನ ಸರ್ಕಾರ ಈ ಸಿನಿಮಾ ರಿಲೀಸ್ ತಡೆ ನೀಡಿದ್ದು ಚಿತ್ರರಂಗಕ್ಕೆ ಆಘಾತವನ್ನು ನೀಡಿತ್ತು .
ವಿದೇಶದಲ್ಲಿ ನಿಷೇಧವನ್ನು ಎದುರಿಸುತ್ತಿರುವ ಬೀಸ್ಟ್ ಸಿನಿಮಾಗೆ (Vijay’s Beast movie) ಇದೀಗ ತಮಿಳುನಾಡಿನಲ್ಲಿಯೂ ಅಪಸ್ವರ ಕೇಳಿ ಬರುತ್ತಿದೆ. ತಮಿಳುನಾಡಿನಲ್ಲಿಯೂ ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿ ತಮಿಳುನಾಡು ಮುಸ್ಲಿಂ ಲೀಗ್ ಅಧ್ಯಕ್ಷ ಮುಸ್ತಾಫ ಧ್ವನಿ ಎತ್ತಿದ್ದಾರೆ. ಈ ಸಂಬಂಧ ತಮಿಳುನಾಡು ಗೃಹ ಇಲಾಖೆಗೆ ಪತ್ರ ಬರೆಯುವ ಮೂಲಕ ಬೀಸ್ಟ್ ಸಿನಿಮಾವನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಕಲಾನಿಧಿ ಮಾರನ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ನಟ ವಿಜಯ್ ವಿಜಯವೀರ ರಾಘವನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೀಸ್ಟ್ ಸಿನಿಮಾದಲ್ಲಿ ವಿಜಯ್ರದ್ದು ರಾ ಏಜೆಂಟ್ ಕೆಲಸ. ನಟ ವಿಜಯ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದು ಇವರಿಬ್ಬರ ಕೆಮಿಸ್ಟ್ರಿ ಹೇಗಿರುತ್ತೆ ಎಂಬುದನ್ನು ಸಿನಿಮಾ ಮಂದಿರಗಳಲ್ಲಿಯೇ ನೋಡಬೇಕಿದೆ. ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಅನಿರುದ್ಧ ರವಿಚಂದರ್ ಸಂಗೀತವಿದೆ.
ಇದನ್ನು ಓದಿ : Poonam Pandey : ನುಡಿದಂತೆ ನಡೆದ ನೀಲಿತಾರೆ : ಕ್ಯಾಮರಾ ಎದುರೇ ಟೀ ಶರ್ಟ್ ಬಿಚ್ಚಿದ ಪೂನಂ : viral Video
ಇದನ್ನೂ ಓದಿ : ಬಾಯ್ ಫ್ರೆಂಡ್ ಜೊತೆಗೆ ಜಾಲಿ ರೈಡ್ : ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ದ ಎಫೆ್ಐಆರ್
vijay’s beast reportedly banned in kuwait lands in trouble in tamil nadu too