ಚೆನ್ನೈ : ಬಹುಭಾಷಾ ನಟಿ ವಿಜಯ ಲಕ್ಷ್ಮೀ ಕಳೆದೆರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ವಿಜಯಲಕ್ಷ್ಮೀ ವಿರುದ್ದ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಇದೀಗ ನಟಿ ವಿಜಯಲಕ್ಷ್ಮಿ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ತನ್ನ ವಿರುದ್ದ ಅಪಪ್ರಚಾರ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.
ನಾನು ಆರೋಗ್ಯವಾಗಿದ್ದೇನೆ, ಅಭಿಮಾನಿಗಳ ಪ್ರೀತಿ ನನ್ನನ್ನು ಉಳಿಸಿದೆ. ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸೀಮನ್ ಕಾರಣ. ಆದರೆ ಕೆಲವರು ಈಗ ನನ್ನನ್ನು ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದವಳೆಂದು ಹೇಳುತ್ತಿದ್ದಾರೆ. ದಯಮಾಡಿ ಇಂತಹ ಊಹಾಪೋಹಗಳನ್ನ ನಿಲ್ಲಿಸಿ ಎಂದಿದ್ದಾರೆ.

ಈಗಾಗಲೇ ಹಲವು ಕಡೆಯಿಂದ ಅಭಿಮಾನಿಗಳು ನನ್ನ ಆರೋಗ್ಯ ವಿಚಾರಿಸಲು ಕರೆಗಳು ಮಾಡುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು. ಇನ್ನೊಬ್ಬರ ಜೀವನದಲ್ಲಿ ಯಾರು ಆಟ ಆಡಬೇಡಿ, ಯಾರು ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಲ್ಲ. ಆದಷ್ಟು ಬೇಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರ‍್ತಿನಿ ಅಂತ ವಿಜಯಲಕ್ಷ್ಮಿ ತಿಳಿಸಿದ್ದಾರೆ.