ಬುಧವಾರ, ಏಪ್ರಿಲ್ 30, 2025
HomeCinemaVikram Is Fine : ತಮಿಳು ನಟ ವಿಕ್ರಮ್​ಗೆ ಹೃದಯಾಘಾತವಾಗಿಲ್ಲ : ವದಂತಿಗಳಿಗೆ ಕಿವಿಗೊಡಬೇಡಿ ಎಂದ ಮ್ಯಾನೇಜರ್​

Vikram Is Fine : ತಮಿಳು ನಟ ವಿಕ್ರಮ್​ಗೆ ಹೃದಯಾಘಾತವಾಗಿಲ್ಲ : ವದಂತಿಗಳಿಗೆ ಕಿವಿಗೊಡಬೇಡಿ ಎಂದ ಮ್ಯಾನೇಜರ್​

- Advertisement -

Vikram Is Fine : ತಮಿಳು ಚಿತ್ರರಂಗದ ಖ್ಯಾತ ನಟ ವಿಕ್ರಮ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಕ್ರಮ್​ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಮಾಧ್ಯಮಗಳಲ್ಲಿ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಪ್ರಸಾರವಾಗಿತ್ತು. ಆದರೆ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಚಿಯಾನ್​ ವಿಕ್ರಮ್​ ಮ್ಯಾನೇಜರ್​ ಸೂರ್ಯನಾರಾಯಣ್​ , ವಿಕ್ರಮ್​ಗೆ ಹೃದಯಾಘಾತವಾಗಿಲ್ಲ.ಅವರಿಗೆ ಸ್ವಲ್ಪ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈಗ ಅವರು ಚೇತರಿಕೆಯಾಗಿದ್ದಾರೆ ಎಂದು ಹೇಳಿದ್ದಾರೆ. ಸಂಜೆ ಆರು ಗಂಟೆ ಸುಮಾರಿಗೆ ವಿಕ್ರಮ್​​ ತಮ್ಮ ಮುಂದಿನ ಸಿನಿಮಾ ಪೊನ್ನಿಯಿನ್​ ಸೆಲ್ವನ್​​ ಟ್ರೈಲರ್​ ಲಾಂಚ್​ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿದ್ದರು.


ಈ ಸಂಬಂಧ ಟ್ವೀಟ್​ ಮಾಡಿರುವ ಚಿಯಾನ್ ವಿಕ್ರಮ್​ ಮ್ಯಾನೇಜರ್​ ಸೂರ್ಯ ನಾರಾಯಣ್​, ಆತ್ಮೀಯ ಅಭಿಮಾನಿಗಳು ಹಾಗೂ ಹಿತೈಷಿಗಳೇ, ಚಿಯಾನ್​ ವಿಕ್ರಮ್​ ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತು. ಇದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಧ್ಯಮಗಳಿಗೆ ಬಿತ್ತರವಾಗಿರುವಂತೆ ಅವರಿಗೆ ಹೃದಯಾಘಾತವಾಗಿಲ್ಲ. ಈ ವದಂತಿಗಳನ್ನು ಕೇಳಿ ನಮಗೆ ನೋವಾಗಿದೆ ಎಂದು ಬರೆದುಕೊಂಡಿದ್ದಾರೆ.


ಈ ಸಂದರ್ಭದಲ್ಲಿ ವಿಕ್ರಮ್​ ಕುಟುಂಬಕ್ಕೆ ಅಗತ್ಯವಿರುವ ಗೌಪ್ಯತೆಯನ್ನು ನೀಡುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ. ನಮ್ಮ ಪ್ರೀತಿಯ ಚಿಯಾನ್​ ಈಗ ಆರೋಗ್ಯವಾಗಿದ್ದಾರೆ. ಒಂದು ದಿನದಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿತ್ತಾರೆ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸೂರ್ಯನಾರಾಯಣ್​ ಮನವಿ ಮಾಡಿದ್ದಾರೆ.


ನಟ ಚಿಯಾನ್​ ವಿಕ್ರಮ್​ರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಾದ ಬಳಿಕ ಮಾಧ್ಯಮಗಳಲ್ಲಿ ಚಿಯಾನ್​ ವಿಕ್ರಮ್​​ರಿಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿತ್ತು.

ವಿಕ್ರಮ್ ಅವರನ್ನು ಚಿಯಾನ್ ವಿಕ್ರಮ್ ಎಂದೂ ಕರೆಯಲಾಗುತ್ತದೆ ಮತ್ತು ಅವರ ನಿಜವಾದ ಹೆಸರು ಕೆನಡಿ ಜಾನ್ ವಿಕ್ಟರ್ (ಕೆನ್ನಿ). ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ರಾಷ್ಟ್ರೀಯ ಪ್ರಶಸ್ತಿ, ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳು, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು 2004 ರಲ್ಲಿ ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.


ನಟ ವಿಕ್ರಮ್​ 1990ರಲ್ಲಿ ತಮ್ಮ ನಟನಾ ವೃತ್ತಿ ಜೀವನವನ್ನು ಆರಂಭಿಸಿದರು. ಆದರೆ ಇವರ ನಟನಾ ಜೀವನಕ್ಕೆ ಬ್ರೇಕ್​ ನೀಡಿದ ಸಿನಿಮಾ ಅಂದರೆ ಅದು 1999ರಲ್ಲಿ ತೆರೆ ಕಂಡ ಸೇತು ಸಿನಿಮಾ . ಈ ಸಿನಿಮಾಗಾಗಿ ವಿಕ್ರಮ್​ 20 ಕೆಜಿ ತೂಕ ಇಳಿಸಿದ್ದರು. ತಲೆ ಬೋಳಿಸಿಕೊಂಡಿದ್ದರು. ಸೇತು ಸಿನಿಮಾದ ಬಳಿಕ ವಿಕ್ರಮ್​ಜೆಮಿನಿ, ಸಮುರಾಯ್, ಧೂಲ್, ಕಾದಲ್ ಸಡುಗುಡು, ಸಾಮಿ, ಪಿತಾಮಗನ್, ಅರುಲ್, ಅಣ್ಣಿಯನ್, ಭೀಮಾ, ರಾವಣನ್, ದೈವ ತಿರುಮಗಲ್, ಡೇವಿಡ್, ಇರು ಮುಗನ್ ಮತ್ತು ಮಹಾನ್ ಸೇರಿದಂತೆ ಹಲವಾರು ಹಿಟ್ ಚಲನಚಿತ್ರಗಳನ್ನು ನೀಡಿದರು.

ಇದನ್ನು ಓದಿ : Amarnath cloudburst : ಅಮರನಾಥ ಗುಹೆಯ ಬಳಿ ಮೇಘಸ್ಫೋಟ : ಇಬ್ಬರ ಮೃತದೇಹ ಪತ್ತೆ

ಇದನ್ನೂ ಓದಿ : Exclusive : secret of Hardik Pandya’s Success : ಹಾರ್ದಿಕ್ ಪಾಂಡ್ಯ ಯಶೋಗಾಥೆಯ ಹಿಂದಿನ ಶಿಲ್ಪಿ ನಮ್ಮ ಕನ್ನಡಿಗ..!

Vikram Is Fine, Didn’t Have A Heart Attack: Manager

RELATED ARTICLES

Most Popular