ಮಂಗಳವಾರ, ಏಪ್ರಿಲ್ 29, 2025
HomeCinemaVikrant Rona new song lullaby : ಲಾಲಿ ಹಾಡಿನಲ್ಲೇ ಮೋಡಿ‌ ಮಾಡಿದ ಕಿಚ್ಚ: ವಿಕ್ರಾಂತ್...

Vikrant Rona new song lullaby : ಲಾಲಿ ಹಾಡಿನಲ್ಲೇ ಮೋಡಿ‌ ಮಾಡಿದ ಕಿಚ್ಚ: ವಿಕ್ರಾಂತ್ ರೋಣ ಎರಡನೇ ಹಾಡು ರಿಲೀಸ್

- Advertisement -

ಸದ್ಯ ಸ್ಯಾಂಡಲ್‌ವುಡ್ ನಲ್ಲೇ ವಿಕ್ರಾಂತ್ ರೋಣ ಸಿನಿಮಾದ್ದೇ ಸುದ್ದಿ. ಇನ್ನೇನು ರಿಲೀಸ್ ಗೆ ಸಿದ್ಧವಾಗ್ತಿರೋ ಸಿನಿಮಾದ ಬಗ್ಗೆ ಚಿತ್ರತಂಡ ಒಂದೊಂದೇ ಅಪ್ಡೇಟ್ಸ್ ಗಳನ್ನು ಹೊರಬಿಡುತ್ತಿದ್ದು, ರಾ ರಾ ರಕ್ಕಮ್ಮ ಗ್ರ್ಯಾಂಡ್‌ ಸಕ್ಸಸ್ ಬಳಿಕ ಈಗ ವಿಕ್ರಾಂತ್ ರೋಣ (Vikrant Rona new song lullaby ) ಎರಡನೇ ಹಾಡನ್ನು ಪ್ರೇಕ್ಷಕರ ಮುಂದಿಟ್ಟಿದ್ದು, ಸಾಹಿತ್ಯ, ಸಂಗೀತದಿಂದ ಈ ಹಾಡು ಪ್ರೇಕ್ಷಕರನ್ನು ಸೆಳೆಯುತ್ತಿದೆ.

ತಣ್ಣನೇ ಬೀಸೋ ಗಾಳಿ, ಹಾಡಿದೆ ಜೋ ಲಾಲಿ, ಈ ಮಡಿಲೆ ನಿನ್ನ ತೂಗೋ ಉಯ್ಯಾಲೆ ತೂಗೂ ಉಯ್ಯಾಲೆ ಎಂದು ಆರಂಭವಾಗೋ ಈ ಹಾಡು ಕಣ್ಣಿನ ರೆಪ್ಪೆ ಮುಚ್ಚಿ , ನಿದ್ದೆಗೆ ಬೇಗ ಜಾರಿ,‌ ಮಲಗೆ ಮಲಗೆ ನನ್ನ ಮುದ್ದು ಬಂಗಾರಿ , ಮುದ್ದು ಬಂಗಾರಿ ಎಂಬ ಲಾಲಿ ಸಾಲುಗಳು ಈಗ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಶನಿವಾರ ಸಂಜೆ 5 ಗಂಟೆಗೆ ರಿಲೀಸ್ ಆಗಿರೋ ಈ ಹಾಡು ಒಂದೇ ಗಂಟೆಯಲ್ಲಿ ದಾಖಲೆಯ ವಿವ್ಸ್ ಪಡೆದುಕೊಂಡಿದೆ. ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿಯವರೇ ಸ್ವತಃ ಈ ಹಾಡಿಗೆ ಲಿರಿಕ್ಸ್ ಬರೆದಿದ್ದು, ಅಜನೀಶಗ ಲೋಕನಾಥ ಸಂಗೀತವಿದೆ.

ಇನ್ನೂ ಈ ಮನತಟ್ಟುವ ಸಾಹಿತ್ಯಕ್ಕೆ ಗಾಯಕ ವಿಜಯ್ ಪ್ರಕಾಶ್ ಮತ್ತಷ್ಟು ಜೀವ ತುಂಬಿದ್ದು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಹಾಡು ಕೇಳೋದೇ ಒಂದು ಸುಂದರ ಅನುಭವ ಎಂದು ಪ್ರೇಕ್ಷಕರು ಹೇಳ್ತಿದ್ದಾರೆ. ಮತ್ತೊಮ್ಮೆ ಕಿಚ್ಚ ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ವಿಕ್ರಾಂತ್ ರೋಣ ಹಳ್ಳಿಯೊಂದರಲ್ಲಿ ನಡೆಯೋ ನಿಗೂಢ ಕತೆಯನ್ನು ಬೇಧಿಸುವ ಕಹಾನಿಯನ್ನು ಒಳಗೊಂಡಿದೆ.

ಈಗಾಗಲೇ ಸುದೀಪ್ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡೀಸ್ ಜೊತೆ ಕುಣಿದಿರುವ ರಾರಾ ರಕ್ಕಮ್ಮ ಹಾಡು ಸಖತ್ ಫೇಮಸ್ ಆಗಿದ್ದು, ಸುದೀಪ್ ಕೂಡ ಮೈಚಳಿ ಬಿಟ್ಟು ಎಕ್ಕಾ ಸಕ್ಕಾ ಅಂತೆಲ್ಲ ಕುಣಿದಿದಿದ್ದಾರೆ. ಜಾಕ್ವಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣ ಮೂಲಕವೇ ಕರ್ನಾಟಕದ ಸ್ಯಾಂಡಲ್ ವುಡ್ ಕಾಲಿರಿಸಿದ್ದು, ಗಡಂಗ ರುಕ್ಕಮ್ಮನಾಗಿ‌ ಕುಣಿದು ಕುಪ್ಪಳಿಸಿ ಕನ್ನಡದ ಪಡ್ಡೆ ಹೈಕಳ‌ ನಿದ್ದೆ ಕೆಡಿಸಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾದ ಇಂಗ್ಲೀಷ್, ಹಿಂದಿ,ತಮಿಳ ,ಕನ್ನಡ ಹಾಗೂ‌‌‌ಮಲೆಯಾಳಂನಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಜಾಕ್ ಮಂಜು ಬಂಡವಾಳ ಹೂಡಿರೋ ಈ ಸಿನಿಮಾ ಆರಂಭದಲ್ಲಿ ಫ್ಯಾಂಟಮ್ ಎಂದು ಹೆಸರು ಪಡೆದಿದ್ದು ಬಳಿಕ ವಿಕ್ರಾಂತ್ ರೋಣ ಎಂದು ಮರುನಾಮಕರಣ ಮಾಡಲಾಗಿದೆ.

ಇದನ್ನೂ ಓದಿ : Jothe Jotheyali Serial :ಮುಕ್ತಾಯವಾಗುತ್ತಿದೆಯಾ ‘ಜೊತೆ ಜೊತೆಯಲಿ’ ಧಾರವಾಹಿ : ಸುಳಿವು ಬಿಚ್ಚಿಟ್ಟಿದೆ ಈ ವಿಡಿಯೋ

ಇದನ್ನೂ ಓದಿ : Rishabh Shetty : ರಿಷಬ್​ ಶೆಟ್ಟಿ ಮನೆಗೆ ವಿಶೇಷ ಅತಿಥಿ ಸೇರ್ಪಡೆ : ಖುಷಿ ವಿಚಾರ ಹಂಚಿಕೊಂಡ ಪ್ರಗತಿ ಶೆಟ್ಟಿ

Vikrant Rona new song lullaby released

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular