ಮಂಗಳವಾರ, ಏಪ್ರಿಲ್ 29, 2025
HomeCinemaVikrant Rona : ವಿಕ್ರಾಂತ್ ರೋಣ...ರಾ..ರಾ..ರಾ..ರಕ್ಕಮ್ಮ ಹಾಡಿಗೆ ಕುಣಿದವರಿಗೆ ಸಿಕ್ತು ಇಪ್ಪತ್ತೈದು ಸಾವಿರ ಬಹುಮಾನ

Vikrant Rona : ವಿಕ್ರಾಂತ್ ರೋಣ…ರಾ..ರಾ..ರಾ..ರಕ್ಕಮ್ಮ ಹಾಡಿಗೆ ಕುಣಿದವರಿಗೆ ಸಿಕ್ತು ಇಪ್ಪತ್ತೈದು ಸಾವಿರ ಬಹುಮಾನ

- Advertisement -

Vikrant Rona Rakkamma song : ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ(Vikrant Rona)ಜೀ5 ಒಟಿಟಿಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಅಡ್ವೆಂಚರ್ಸ್ ಜೊತೆಗೆ ಮರ್ಡರ್ ಮಿಸ್ಟ್ರೀ ಜಾನರ್ ನ ಈ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟಂಬರ್ 2ರಂದು ಜೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಒಂದು ನಿಮಿಷದಲ್ಲಿ 1000ಕ್ಕೂ ಹೆಚ್ಚು ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ. ಅಲ್ಲದೇ ಕಳೆದ ಮೂರು ವಾರಗಳಿಂದ ಜೀ5 ಒಟಿಟಿಯಲ್ಲಿ ಟ್ರೇಡಿಂಗ್ ಟಾಪ್ 3 ಸ್ಥಾನ ಕೂಡ ಗಿಟ್ಟಿಸಿಕೊಂಡಿದೆ.

VikranthronaZEE5Contest ನಡಿ ಜೀ5 ಒಟಿಟಿ ಸಂಸ್ಥೆ ರಕ್ಕಮ್ಮ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದವರಿಗೆ 25 ಸಾವಿರ ಬಹುಮಾನ ಹಾಗೂ ಪ್ರಮುಖ 10 ಸ್ಪರ್ಧಿಗಳಿಗೆ ಉಡುಗೊರೆ ಹಾಗೂ ಸುದೀಪ್ ವೈಯಕ್ತಿಕ ಪಾತ್ರ ಕೊಡುವುದಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಂತೆ ರಕ್ಕಮ್ಮ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದವರಿಗೆ 25 ಸಾವಿರ ಹಣ ಹಾಗೂ 10 ಜನಕ್ಕೆ ಕಿಚ್ಚನ ಕಡೆಯಿಂದ ಪತ್ರ ಹಾಗೂ ಉಡುಗೊರೆ ನೀಡಲಾಗಿದೆ. ಒಟ್ಟಾರೆಯಾಗಿ ಜೀ5 ಸಿನಿಪ್ರೇಕ್ಷಕರಿಗೆ ಸುವರ್ಣಾವಕಾಶವನ್ನು ಕಲ್ಪಿಸಿದೆ.

ಇದನ್ನೂ ಓದಿ : ಕೆಜಿಎಫ್‌ ಖ್ಯಾತಿಯ ಕೃಷ್ಣಾಜಿ ರಾವ್‌ ರವರ ಸಿನಿಮಾ ‘ನ್ಯಾನೋ ನಾರಾಯಣಪ್ಪ’ ಮುಂದಿನ ತಿಂಗಳು ತೆರೆಗೆ

ಇದನ್ನೂ ಓದಿ : ಲವ್ ಲಿ’ ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್‌ನಲ್ಲಿ ಬ್ಯುಸಿಯಾದ ನಟ ವಸಿಷ್ಠ ಸಿಂಹ

ಇದನ್ನೂ ಓದಿ : ಸೆಪ್ಟೆಂಬರ್‌ 24 ರಿಂದ ಬಿಗ್‌ಬಾಸ್‌ ಸೀಸನ್ 9 ಆರಂಭ : ವಾಹಿನಿ ಮುಂದೆ ಬೇಡಿಕೆ ಇಟ್ಟ ವೀಕ್ಷಕರು

ಅದ್ದೂರಿ ಬಜೆಟ್​ನಲ್ಲಿ “ವಿಕ್ರಾಂತ್​ ರೋಣ” (Vikrant Rona)ಜಾಕ್​ ಮಂಜು ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್​, ಅನೂಪ್​ ಭಂಡಾರಿ, ನೀತಾ ಅಶೋಕ್​, ಮಿಲನಾ ನಾಗರಾಜ್​, ಜಾಕ್ವೆಲಿನ್​ ಫರ್ನಾಂಡಿಸ್​, ಮಧುಸೂದನ್​ ರಾವ್​, ರವಿಶಂಕರ್ ಗೌಡ ಮುಂತಾದವರು ಸೇರಿದಂತೆ ಬಹು ತಾರಾಂಗಣವ ನಟಿಸಿದ್ದಾರೆ. ಅಜನೀಶ್​ ಬಿ. ಲೋಕನಾಥ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಜಾಕ್ವೆಲಿನ್ ಫರ್ನಾಂಡಿಸ್​ ಜೊತೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ “ರಾ ರಾ ರಕ್ಕಮ್ಮ..” ಹಾಡಿಗೆ​ ಅಭಿಮಾನಿಗಳು ಫಿದಾ ಆಗಿದ್ದರು. ಥಿಯೇಟರ್ ನಲ್ಲಿಯೂ ಭರ್ಜರಿ ಕಮಾಯಿ ಮಾಡಿದ್ದ ಸಿನಿಮಾ ಈಗ ಜೀ5 ಒಟಿಟಿಯಲ್ಲಿ ಹಂಗಾಮ ಸೃಷ್ಟಿಸುತ್ತಿದೆ.

Vikrant Rona Rakkamma song got twenty five thousand prize for those who danced

RELATED ARTICLES

Most Popular