ಸೋಮವಾರ, ಏಪ್ರಿಲ್ 28, 2025
HomeCinemaಮಗಳು ಹುಟ್ಟಿದಾಗ ಸಿಹಿ ಹಂಚಲು ಕಾಸಿರಲಿಲ್ಲ : ವಿಕೇಂಡ್ ಟೆಂಟ್ ನಲ್ಲಿ ರಿವೀಲ್ ಆಯ್ತು ನಟ...

ಮಗಳು ಹುಟ್ಟಿದಾಗ ಸಿಹಿ ಹಂಚಲು ಕಾಸಿರಲಿಲ್ಲ : ವಿಕೇಂಡ್ ಟೆಂಟ್ ನಲ್ಲಿ ರಿವೀಲ್ ಆಯ್ತು ನಟ ಪ್ರೇಮ್ ಕಣ್ಣೀರ ಕಹಾನಿ

- Advertisement -

ಸ್ಯಾಂಡಲ್ ವುಡ್ ಅನ್ನೋದು ಎದುರಿಗೆ ಎಷ್ಟು ಸುಂದರ ಹಾಗೂ ಗ್ಲ್ಯಾಮರಸ್ ಕಾಣ್ಸುತ್ತೋ ಅದರ ಒಡಲಲ್ಲಿ ಅಷ್ಟೇ ಕಣ್ಣೀರ ಕಹಾನಿಗಳು ಅಡಗಿವೆ. ಚಂದನವನದಲ್ಲಿ‌ ಮಿಂಚಿದ ಹೀರೋ-ಹೀರೋಯಿನ್ ಗಳ ನಿಜ ಬದುಕಿನಲ್ಲೂ ಯಾವ ಸಿನಿಮಾಗೂ ಕಡಿಮೆ ಇಲ್ಲದ ಕತೆಯಿದೆ. ಝೀ ಕನ್ನಡದ ವಿಕೇಂಡ್ ವಿತ್ ರಮೇಶ್ ರಿಯಾಲಿಟಿ ಶೋದಲ್ಲಿ (Actor Prem – Weekend with Ramesh Show) ಇಂತಹ ಕತೆಗಳು ಅನಾವರಗೊಂಡಿದ್ದು, ಈಗ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಬದುಕು ಹಾಗೂ ಸಿನಿಮಾಗಾಗಿ ಪಟ್ಟ ಕಷ್ಟದ ಪುಟಗಳು ಅನಾವರಣಗೊಂಡಿದೆ.

ಹೌದು ಮೂಲತಃ ಮಧ್ಯಮವರ್ಗದ ನೇಕಾರರ ಕುಟುಂಬದಿಂದ ಬಂದ ಪ್ರೇಮ್, ಮದುವೆಯ ನಂತರ ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕೊಳ್ಳಲು ಬಂದವರು. ಮೊದಲ ಸಿನಿಮಾ ಪ್ರಾಣ ಅದ್ದೂರಿಯಾಗಿ ಮುಹೂರ್ತದೊಂದಿಗೆ ಆರಂಭಗೊಂಡರೂ ಕೊನೆಗೆ ಆರ್ಥಿಕ ಸಮಸ್ಯೆ ಕಾರಣಕ್ಕೆ ನಿಂತು ಹೋಗಿತ್ತು. ಇದರೊಂದಿಗೆ ಪ್ರೇಮ್ ಕಷ್ಟದ ದಿನಗಳು ಆರಂಭಗೊಂಡಿತ್ತಂತೆ. ಬೇರೆ ಕೆಲಸ ಮಾಡಲು ಮನಸ್ಸಿಲ್ಲದ ಪ್ರೇಮ್, ಸಿನಿಮಾ‌ನಟರಾಗಲು ಸಾಧ್ಯವಾಗದೇ, ಮನೆ ನಿರ್ವಹಣೆಗೂ ದುಡ್ಡಿಲ್ಲದೇ ಆತ್ಮಹತ್ಯೆಯ ಬಗ್ಗೆಯೂ ಯೋಚ್ನೆ ಮಾಡಿದ್ದರಂತೆ.

ಆದರೆ‌ ಪತಿಯ ಕನಸಿನ ಬಗ್ಗೆ ಅವರ ಸಿನಿ ಪ್ರೇಮದ ಬಗ್ಗೆ ಅರಿತ ಪತ್ನಿ ನಾನು ಸಂಸಾರದ ಭಾರ ಹೊರುತ್ತೇನೆ. ನೀನು ಸಿನಿಮಾ ವೃತ್ತಿಯ ಬಗ್ಗೆ ಗಮನ ಹರಿಸು ಎಂದು ಭರವಸೆ ನೀಡಿದ್ದರಂತೆ. ಪ್ರಾಣ ಸಿನಿಮಾ ನಿಂತು ಹೋದಾಗ ಅತಿಯಾದ ಟೀಕೆ ಹಾಗೂ ನಿಂದನೆ ಎದುರಿಸಿದ್ದ ಪ್ರೇಮ್ ಗೆ ಸ್ನೇಹಿತರು ಮಗುವಿನ ಹಾಲಿನ ಖರ್ಚಿಗಾದರೂ ದುಡಿ ನೀನು ಎಂದು ಪ್ರೋತ್ಸಾಹ ತುಂಬಿದ್ದರಂತೆ. ಮಗಳು ಹುಟ್ಟಿದಾಗ ಕಿಸೆಯಲ್ಲಿದ್ದ 300 ರೂಪಾಯಿಯಲ್ಲಿ ಮಗಳ ಹುಟ್ಟಿಗೆ ಸಿಹಿ ಹಂಚಲೋ ಅಥವಾ ಆಸ್ಪತ್ರೆ ಖರ್ಚಿಗೆ ಬಳಸಲೋ ಎಂಬುದು ಅರಿವಾಗದೇ ಕಣ್ಣೀರಿಟ್ಟಿದ್ದೇ ಎಂದು ಪ್ರೇಮ್ ಭಾವುಕರಾದರು.

ನಟನೆ ಕಲಿಯಲು ದೊಡ್ಡ ಸ್ಕೂಲ್ ಗಳಿಗೆ ಹೋಗಲು ಸಾಧ್ಯವಾಗದ ಪ್ರೇಮ್ ಬೀದಿ ನಾಟಕಗಳ ಮೂಲಕ ನಟನೆ ಕಲಿಯುತ್ತ ಸಿನಿಮಾದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸದ್ಯ ಯಶಸ್ವಿ ನಟ ಎನ್ನಿಸಿರುವ ಪ್ರೇಮ್ ಕೈಯಲ್ಲಿ ಹಲವಾರು ಸಿನಿಮಾಗಳಿವೆ.‌ಆದರೆ ತನ್ನ ಕಷ್ಟದಲ್ಲಿ ತಾಳಿಸರ ಅಡವಿಟ್ಟು ಧೈರ್ಯ ತುಂಬಿದ ಪತ್ನಿಯಿಂದಲೇ ಎಲ್ಲ ಯಶಸ್ಸು ನನಗೆ ಎಂದು ಪ್ರೇಮ್ ಪ್ರೀತಿಯಿಂದ ಪತ್ನಿಯ ತ್ಯಾಗವನ್ನು ನೆನಪಿಸಿಕೊಂಡಿದ್ದಾರೆ. ಇಂದಿಗೂ ಸ್ಟಾರ್ ಗಿರಿಯನ್ನು ತಲೆಗೇರಿಸಿಕೊಳ್ಳದ ಪ್ರೇಮ್ ಕುಟುಂಬ ಸಹಜವಾಗಿಯೇ ಬದುಕುತ್ತಿದ್ದು, ನಟ ಪ್ರೇಮ್ ಮಕ್ಕಳು ಈಗ ಬಿಎಂಟಿಸಿ ಬಸ್ ನಲ್ಲಿ ಓಡಾಡುತ್ತಾರಂತೆ.

ಇದನ್ನೂ ಓದಿ : ವಿನಯ್‌ ರಾಜ್‌ಕುಮಾರ್‌ಗೆ ಹುಟ್ಟುಹಬ್ಬ ಸಂಭ್ರಮ : ವಿಶೇಷವಾಗಿ ಹಾರೈಸಿದ ಒಂದು ಸರಳ ಪ್ರೇಮಕಥೆ ಸಿನಿತಂಡ

ಕೆ.ಮಂಜು ಅವರು ಪ್ರೇಮ್ ಗೆ ವಿಷ್ಣುವರ್ಧನ್ ಪುತ್ರನ ಪಾತ್ರದಲ್ಲಿ ನಟಿಸುವ ಅವಕಾಶ ನೀಡಿದ್ದರಂತೆ. ಆದರೆ ಪ್ರಾಣ ಸಿನಿಮಾಗಾಗಿ ನಾನು ಆ ಅವಕಾಶವನ್ನು ಬಿಟ್ಟು ಕೊಟ್ಟಿದ್ದರಂತೆ. ಈ ವೇಳೆ ಕೆ.ಮಂಜು ಅವರು ಪ್ರೀತಿಯಿಂದ ಕಳುಹಿಸಿದ್ದು ಹಾಗೂ ನಾನೇ ಮುಂದೊಂದು ದಿನ ನಿಮ್ಮ ಕಾಲ್ ಶೀಟ್ ಕೇಳುವ ದಿನ ಬಂದರೂ ಬರಬಹುದು ಎಂದಿದ್ದು,ಕೊನೆಗೆ ಅಂತಹ ದಿನಗಳೇ ಎದುರಾಗಿದ್ದನ್ನು ಪ್ರೇಮ್ ವಿನೀತರಾಗಿ ಸ್ಮರಿಸಿದ್ದಾರೆ. ಸದ್ಯ ಪ್ರೇಮ್ ಪುತ್ರ ಹಾಗೂ ಪುತ್ರಿ ಇಬ್ಬರೂ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹೊಸ ಹೊಸ ಸಿನಿಮಾಗಳ ಮೂಲಕ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

Weekend with Ramesh Show: When a daughter was born, there was no money to distribute sweets: Actor Prem’s tearful story was revealed in the weekend tent.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular