ಸೋಮವಾರ, ಏಪ್ರಿಲ್ 28, 2025
HomeCinemaPooja Hegde : ರಾಕಿಂಗ್ ಸ್ಟಾರ್ ಗೆ ಕರಾವಳಿ ಸುಂದರಿ ಜೋಡಿ : ಯಶ್ ಗೆ...

Pooja Hegde : ರಾಕಿಂಗ್ ಸ್ಟಾರ್ ಗೆ ಕರಾವಳಿ ಸುಂದರಿ ಜೋಡಿ : ಯಶ್ ಗೆ ನಾಯಕಿಯಾದ ಪೂಜಾ ಹೆಗ್ಡೆ

- Advertisement -

ವಿಶ್ವದ ಗಮನ ಸೆಳೆದ ಕನ್ನಡ ಸಿನಿಮಾ ಕೆಜಿಎಫ್ -2 ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರಿದೆ. ಅಲ್ಲದೇ ಬಾಲಿವುಡ್ ಸೇರಿದಂತೆ ಹಲವೆಡೆಯ ದಾಖಲೆ ಮುರಿದಿದೆ. ಹೀಗಾಗಿ ಇಂತಹದೊಂದು ಯಶಸ್ವಿ ಸಿನಿಮಾ ನೀಡಿದ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರಿಗೂ ಇದೆ. ಆದರೆ ಕುತೂಹಲಕ್ಕೆ ಯಶ್ ಮುಂದಿನ ಸಿನಿಮಾ (Yash next movie) ನರ್ತನ್ ನಿರ್ದೇಶನದಲ್ಲಿ ಎಂಬ ಉತ್ತರ ಬಹುತೇಕ ಖಚಿತವಾಗಿದೆ. ಈಗ ಈ ಸಿನಿಮಾದ ನಾಯಕಿ ಯಾರು (Pooja Hegde) ಎಂಬ ಕುತೂಹಲಕ್ಕೂ ಉತ್ತರ ಸಿಕ್ಕಿದೆ.

ಹೌದು ಕೆಜಿಎಫ್-2 ಮೂಲಕ ವಿಶ್ವದ ಗಮನ ಸೆಳೆದ ಯಶ್ ಮುಂದಿನ ಸಿನಿಮಾ ಕೂಡ ದೊಡ್ಡ ದಾಖಲೆ ಬರೆಯೋ ಮುನ್ಸೂಚನೆ ಸಿಕ್ಕಿದೆ. ಯಾಕೆಂದರೇ ಮಫ್ತಿಯಂತಹ ಹಿಟ್ ಸಿನಿಮಾ ನೀಡಿದ ನರ್ತನ್ ರಾಕಿಂಗ್ ಸ್ಟಾರ್ ಯಶ್ ಗಾಗಿ ಹೊಸ ಕತೆ ನಿರ್ಮಿಸಿ ಸಿದ್ಧತೆ ನಡೆಸಿಕೊಂಡಿದ್ದಾರೆ. ಕೆವಿನ್ ಪ್ರೊಡಕ್ಷನ್ ಅಡಿಯಲ್ಲಿ ಯಶ್ ಮುಂದಿನ ಸಿನಿಮಾ ಫಿಕ್ಸ್ ಆಗಿದೆ.

ಸಿನಿಮಾದ ಬಗ್ಗೆ ಎಷ್ಟು ಕುತೂಹಲ ಇದೆಯೋ ಅಷ್ಟೇ ಕುತೂಹಲ ಸಿನಿಮಾದ ನಾಯಕಿ ಯಾರು ಎಂಬುದರ ಬಗ್ಗೆಯೂ ಇದೆ. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಯಶ್ ಗೆ ನಾಯಕಿ ಯಾಗಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಸೌತ್ ನ ನಂಬರ್ ಒನ್ ಸ್ಟಾರ್ ಎನ್ನಿಸಿರೋ ಪೂಜಾ ಹೆಗ್ಡೆ ಯಶ್ ರ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಿಂಚಲಿದ್ದಾರಂತೆ.

ಟಾಲಿವುಡ್ ನಲ್ಲಿ ಹರಿದಾಡ್ತಿರೋ ಸುದ್ದಿ ಪ್ರಕಾರ ಈಗಾಗಲೇ ಕೆವಿನ್ ಪ್ರೊಡಕ್ಷನ್ ಹಾಗೂ ನರ್ತನ್ ಪೂಜಾ ಹೆಗ್ಡೆ ಜೊತೆ ಮಾತುಕತೆ ನಡೆಸಿದ್ದಾರಂತೆ. ಹೀಗಾಗಿ ಬೀಸ್ಟ್ ನಾಯಕಿಯೇ ಯಶ್ ಹಿರೋಯಿನ್ ಅನ್ನೋದು ಬಹುತೇಕ ಖಚಿತಗೊಂಡಿದೆ. ಆದರೆ ಪೂಜಾ ಹೆಗ್ಡೆ ಸೌತ್ ನಲ್ಲಿ ಸಖತ್ ಬ್ಯುಸಿಯಾಗಿದ್ದು, ಈಗಾಗಲೇ ಪೂರಿ ಜಗನ್ನಾಥ್ ನಿರ್ದೇಶನದ ಜನ,ಗಣ,ಮನ ಸಿನಿಮಾಗೆ ಡೇಟ್ ನೀಡಿದ್ದಾರಂತೆ. ಕೇವಲ ಟಾಲಿವುಡ್ ಮಾತ್ರವಲ್ಲ ಬಾಲಿವುಡ್ ನಲ್ಲೂ ಪೂಜಾ ಹೆಗ್ಡೆ ಬ್ಯುಸಿಯಾಗಿದ್ದು, ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಸ್ ಸಿನಿಮಾದಲ್ಲಿ ರಣಬೀರ್ ಕಪೂರ್ ಗೆ ಜೊತೆಯಾಗುತ್ತಿದ್ದಾರೆ.

ಅಲ್ಲದೇ‌ ಕಬೀ ಈದ್ ಕಬೀ ದಿವಾಳಿ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗ್ತಿದ್ದಾರೆ. ಆದರೆ ಸದ್ಯ ಪೂಜಾ ಹೆಗ್ಡೆ ಐರನ್ ಲೆಗ್ ಎಂದು ಖ್ಯಾತಿ ಪಡೆದುಕೊಳ್ತಿದ್ದು ಪೂಜಾ ನಟನೆಯ ಸಿನಿಮಾಗಳು ಸಾಲು ಸಾಲು ಸೋಲು ಕಾಣ್ತಿವೆ. ಹೀಗಾಗಿ ಪೂಜಾ ಯಶ್ ಗೆ ಜೋಡಿಯಾಗಿರೋದು ಯಶ್ ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಕೊಂಚ ಅಸಮಧಾನ ತಂದಿದೆ.

ಇದನ್ನೂ ಓದಿ : Justin Bieber : ಖ್ಯಾತ ಪಾಪ್​ ಗಾಯಕ ಜಸ್ಟಿನ್​ ಬೈಬರ್​ಗೆ ಮುಖದ ಪಾರ್ಶ್ವವಾಯು ಕಾಯಿಲೆ

ಇದನ್ನೂ ಓದಿ : Rashmika Mandanna : ರಣಬೀರ್​ ಕಪೂರ್​ ನನ್ನನ್ನು ಮೇಡಂ ಎಂದು ಕರೆಯುವ ಏಕೈಕ ನಟ  : ರಶ್ಮಿಕಾ ಮಂದಣ್ಣ

Yash next movie South beauty Pooja Hegde heroine

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular