ನಟ ಯುವರಾಜ್‌ಕುಮಾರ್‌ ಚೊಚ್ಚಲ ಸಿನಿಮಾದ ಟೈಟಲ್‌ ಯಾವುದು ಗೊತ್ತಾ ?

ಕನ್ನಡ ಸಿನಿರಂಗದಲ್ಲಿ ದೊಡ್ಮನೆಯವರು, ದೊಡ್ಮನೆಯವರ ಸಿನಿಮಾ ಎಂದರೆ ಸಿನಿಪ್ರೇಕ್ಷರಲ್ಲಿ ಬೇರೆ ಕ್ರೇಜ್‌ ಇರುತ್ತದೆ. ಅದರಲ್ಲೂ ನಟ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ಅಂದರೆ ಅಭಿಮಾನಿಗಳು ಮುಗ್ಗಿ ಬೀಳುತ್ತಾರೆ. ಇದೀಗ ಅವರ ಅಗಲಿಕೆ ನಂತರ ಅವರ ಸ್ಥಾನಕ್ಕೆ ಅಣ್ಣಾವ್ರ ಮೊಮ್ಮಗ ಯುವರಾಜ್‌ಕುಮಾರ್‌ನ್ನು ನೋಡಲು ಬಯಸುತ್ತಿದ್ದು, ಅವರ ಸಿನಿಮಾಕ್ಕಾಗಿ ಜಾತಕಪಕ್ಷಿ ತರ ಕಾದು ಕುಳ್ಳಿತ್ತಿದ್ದಾರೆ. ಹಾಗೆಯೇ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಯುವರಾಜ್‌ಕುಮಾರ್‌ಗೆ ಸಿನಿಮಾ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅದರಂತೆ ಸಂತೋಷ್‌ ಆನಂದ್‌ರಾಮ್‌ ಯುವರಾಜ್‌ಕುಮಾರ್‌ಗಾಗಿ ಸಿನಿಮಾವನ್ನು ನಿರ್ದೇಶಿಸಿದ್ದು, ಇಂದು ( ಮಾರ್ಚ್ 3 ) ಸಂಜೆ 6.55ಕ್ಕೆ ಸಿನಿಮಾ ಟೈಟಲ್‌ ರಿವೀಲ್‌ (Yuvarajkumar Debut movie title) ಮಾಡಲಿದ್ದಾರೆ. ಇನ್ನು ಯುವರಾಜ್‌ಕುಮಾರ್‌ ಸಿನಿಮಾದ ಶೀರ್ಷಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ.

ಹಾಗಾಗಿ ಹೆಚ್ಚಾಗಿ ಎರಡು ಟೈಟಲ್‌ಗಳು ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿದ್ದು, ಈ ಎರಡರಲ್ಲಿ ಒಂದು ಟೈಟಲ್ ಸಿನಿಮಾಕ್ಕೆ ಪಕ್ಕಾ ಎಂದು ಅಭಿಮಾನಿಗಳು ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಆ ಎರಡು ಟೈಟಲ್‌ಗಳು ಯಾವುವೆಂದರೆ ಒಂದು ‘ಜ್ವಾಲಾಮುಖಿ’ ಹಾಗೂ ಇನ್ನೊಂದು ‘ಅಶ್ವಮೇಧ’ ಎನ್ನುವುದಾಗಿದೆ. ಈಗಾಗಲೇ ರಾಜ್‌ಕುಮಾರ್ ಜ್ವಾಲಾಮುಖಿ ಹೆಸರಿನಲ್ಲಿ ಸಿನಿಮಾ ಮಾಡಿದ್ದರೆ, ಇನ್ನು ಕುಮಾರ್ ಬಂಗಾರಪ್ಪ ನಟನೆಯ ಅಶ್ವಮೇಧ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಎರಡು ಟೈಟಲ್‌ಗಳಲ್ಲಿ ಯಾವುದಾದರೊಂದು ಟೈಟಲ್ ಯುವ ರಾಜ್‌ಕುಮಾರ್ ಸಿನಿಮಾಗೆ ಪಕ್ಕಾ ಎನ್ನಲಾಗುತ್ತಿದೆ. ಇವುಗಳ ಜತೆಗೆ ಇನ್ನೂ ಹಲವು ಹೆಸರುಗಳೂ ಸಹ ಹರಿದಾಡುತ್ತಿವೆ. ಅದರಲ್ಲಿಯೂ ಅಣ್ಣಾವ್ರು ನಟಿಸಿದ್ದ ಜ್ವಾಲಾಮುಖಿ ಟೈಟಲ್ ಪಕ್ಕಾ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇನ್ನು ಭಾರತ ಸಿನಿರಂಗದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್‌ ಸಿನಿಮಾಕ್ಕೆ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಟೈಟಲ್ ಅನ್ನು ವಿಶೇಷ ಟೀಸರ್ ಮೂಲಕ ಘೋಷಿಸಲು ಯೋಜನೆ ಹಾಕಿಕೊಂಡಿದೆ. ಬೆಂಗಳೂರಿನ ಕುರುಬರಹಳ್ಳಿಯಲ್ಲಿ, ಜೆಪಿ ನಗರದ ಸಿದ್ಧಲಿಂಗೇಶ್ವರ ಥಿಯೇಟರ್ ಹಾಗೂ ಹೊಸಪೇಟೆ ಸೇರಿದಂತೆ ಹಲವೆಡೆ ಟೀಸರ್ ಅನ್ನು ಪ್ರಸಾರ ಮಾಡಿ ಸಂಭ್ರಮಿಸಲು ಅಭಿಮಾನಿಗಳು ರೆಡಿಯಾಗಿದ್ದಾರೆ.

ಇದನ್ನೂ ಓದಿ : Oscars Awards 2023 : ಆಸ್ಕರ್‌ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನಿರೂಪಕರು ಯಾರಾರು ಇದ್ದಾರೆ ಗೊತ್ತಾ ?

ಇದನ್ನೂ ಓದಿ : ನಟ ಶಾರೂಖ್ ಖಾನ್ ಮನೆಗೆ ಅಕ್ರಮ ಪ್ರವೇಶ : ಗುಜರಾತ್ ಮೂಲದ ಇಬ್ಬರ ಬಂಧನ

ಇದನ್ನೂ ಓದಿ : ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ ! ಇನ್‌ಸ್ಟಾಗ್ರಾಮ್‌ನಲ್ಲಿ ಫೋಸ್ಟ್‌

‌ಇನ್ನುಳಿದಂತೆ ದೊಡ್ಮನೆ ಕುಡಿ ಯುವರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾಕ್ಕೆ ನಾಯಕಿ ಯಾರು ಎನ್ನುವ ಕುತೂಹಲ ಮೊದಲಿನಿಂದಲೂ ಇತ್ತು. ಮೊದಲಿಗೆ ಈ ಸಿನಿಮಾಕ್ಕೆ ಮಲಯಾಳಂನ ಚೆಲುವೆ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಲಿದ್ದಾರೆ ಎಂಬ ಗುಸು ಗುಸು ಹರಡಿತ್ತು, ಇತ್ತೀಚೆಗಷ್ಟೆ ರುಕ್ಮಿಣಿ ವಸಂತ್ ಸಿನಿಮಾಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಆದರೆ ಈ ಎರಡೂ ಸಹ ಗಾಳಿಸುದ್ದಿಯಾಗಿದ್ದು, ಸಿನಿತಂಡ ಯಾವ ನಟಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಿದೆ ಎಂಬ ಕುತೂಹಲವನ್ನು ಸಿನಿಪ್ರೇಕ್ಷಕರಲ್ಲಿ ಕಾಪಾಡಿಕೊಂಡಿದೆ.

Yuvarajkumar Debut movie title : Do you know the title of actor Yuvarajkumar’s debut movie?

Comments are closed.