ಒಟಿಟಿ ಕ್ಷೇತ್ರದಲ್ಲಿ ದೊಡ್ಡ ಪಾಲು ಹೊಂದಿರುವ ಜೀ5 ಹೊಸ ಆಫರ್‌ನೊಂದಿಗೆ ಇನ್ನಷ್ಟು ವೀಕ್ಷಕರನ್ನು ತಲುಪುವ ಯೋಜನೆ ಹಾಕಿಕೊಂಡಿದೆ. ವಿವಿಧ ಭಾಷೆಗಳ ಸಿನಿಮಾಗಳಿಂದ ಈಗಾಗಲೆ ವೀಕ್ಷಕರ ಮನ ಗೆದ್ದಿರುವ ಜೀ5 ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತಿದೆ. ಈ ವಿಶೇಷ ಆಫರ್ ಏಕೆಂದರೆ, ZEE5 ಒಟಿಟಿ ಫ್ಲಾಟ್‌ಫಾರ್ಮ್ ಆರಂಭವಾಗಿ ಇದೇ ಫೆಬ್ರವರಿ 12ಕ್ಕೆ ನಾಲ್ಕು ವರ್ಷಗಳು ತುಂಬುತ್ತವೆ. ಸಹಜವಾಗಿ ಈ ಖುಷಿಯನ್ನು ಆಚರಿಸಲು ಬಯಸಿರುವ ಜೀ5 ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುವ (ZEE5 OTT Free Watch) ಮೂಲಕ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ಹಿಗ್ಗಿಸಲು ಯೋಜನೆ ರೂಪಿಸಿದೆ.
ಫೆಬ್ರವರಿ 12 ರಿಂದ14 ರವರೆಗೆ ತನ್ನ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸಲು ಮೂರು ದಿನಗಳ ಅಭಿಯಾನ ಹಮ್ಮಿಕೊಂಡಿದ್ದು ‘ZEE5 ಇಂಡಿಯಾ ಕಾ ಬಿಂಗೆ-ಎ-ಥಾನ್’ ಎಂದ ಹೆಸರಿಟ್ಟಿದೆ. ಈ ಮೂರು ದಿನಗಳ ಅವಧಿಯಲ್ಲಿ ಜೀ5ನಲ್ಲಿ ಲಭ್ಯವಿರುವ ಸಿನಿಮಾಗಳನ್ನು ವೀಕ್ಷಿಸಲು ಒಟಿಟಿ ಪ್ರಿಯರಿಗೆ ಅವಕಾಶ ಮಾಡಿಕೊಟ್ಟಿದೆ.
ಸೂಪರ್ ಹಿಟ್ ಚಿತ್ರಗಳು, ಸೀರೀಸ್ ಗಳನ್ನ ಇಂಡಿಯಾ ದ ಬಿಂಜ್-ಅ-ಥಾನ್ ನಲ್ಲಿ ಉಚಿತವಾಗಿ ನೋಡಿ!#Bingathon Feb 12-14 ರ ವರೆಗೆ, ಈಗಲೇ #ZEE5 download ಮಾಡಿಕೊಳ್ಳಿ ನೋಡಿ ಎಂಜಾಯ್ ಮಾಡಿhttps://t.co/gP5ZOpGcuD#ZEE5Anniversary #Indiadhabingathon #NiddeGoneBingeOn #ZEE5Kannada pic.twitter.com/RPU3ATFJ19
— ZEE5 Kannada (@ZEE5Kannada) February 11, 2022
ಹೀರೋ, ಕಾಳಿದಾಸ ಕನ್ನಡ ಮೇಷ್ಟ್ರು, ದಿ ವಿಲನ್, ಕೆಮಿಸ್ಟ್ರಿ ಆಫ್ ಕರಿಯಪ್ಪ, ಈ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಅಲ್ಲದೇ ವಿವಿಧ ಭಾಷೆಗಳ ಹಲವು ಸಿನಿಮಾಗಳನ್ನು ಸಹ ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ ಎಂಬುದು ವಿಶೇಷವಾಗಿದೆ. ZEE5 ಒಟಿಟಿ ಫ್ಲಾಟ್‌ಫಾರ್ಮ್ ಆರಂಭವಾಗಿ ಇದೇ ಫೆಬ್ರವರಿ 12ಕ್ಕೆ ನಾಲ್ಕು ವರ್ಷಗಳು ತುಂಬುತ್ತವೆ. ಸಹಜವಾಗಿ ಈ ಖುಷಿಯನ್ನು ಆಚರಿಸಲು ಬಯಸಿರುವ ಜೀ5 ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುವ ಮೂಲಕ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ಹಿಗ್ಗಿಸಲು ಯೋಜನೆ ರೂಪಿಸಿದೆ.
ಇದನ್ನೂ ಓದಿ: Airtel Xtreme Premium: ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ರೀಮಿಯಂ ಯೋಜನೆ: ಕೇವಲ 149 ರೂ.ಗೆ ಸಿಗಲಿದೆ 15 ಓಟಿಟಿ ಸೇವೆಗಳು
(ZEE5 OTT Free Watch for 4rth anniversary)