ಮಂಗಳವಾರ, ಏಪ್ರಿಲ್ 29, 2025
HomeCinemaSaxophonist Dr. Sundar Sherigar : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಕ್ಸೋಫೋನ್‌ ವಾದಕ ಡಾ.ಸುಂದರ...

Saxophonist Dr. Sundar Sherigar : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಕ್ಸೋಫೋನ್‌ ವಾದಕ ಡಾ.ಸುಂದರ ಸೇರಿಗಾರ್‌ ಅಲೆವೂರು ಇನ್ನಿಲ್ಲ

- Advertisement -

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಕ್ಸೋಫೋನ್‌ ವಾದಕ ಆಗಿರುವ ಡಾ. ಸುಂದರ ಸೇರಿಗಾರ್‌ ಅಲೆವೂರು (Saxophonist Dr. Sundar Sherigar) ಅವರು ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ಉಡುಪಿ ಜಿಲ್ಲೆಯ ಹೆಮ್ಮೆಯ ಕಲಾವಿದರಾದ ಸುಂದರ್‌ ಸೇರಿಗಾರ್‌ ಅವರು ಸಾಕಷ್ಟು ವಿದ್ಯಾರ್ಥಿಗಳಿಗೆ ಸಾಕ್ಸೋಫೋನ್‌ ನುಡಿಸುವುದನ್ನು ಹೇಳಿಕೊಟ್ಟಿದ್ದಾರೆ.

ಖ್ಯಾತ ಹಿರಿಯ ಸ್ಯಾಕ್ಸೋಫೋನ್‌ ವಾದಕ ಸುಂದರ ಸೇರಿಗಾರ್‌ ಅವರು ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಬೆಳಿಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಮೂವರು ಪುತ್ರಿ, ಓರ್ವ ಪುತ್ರ ಬಂಧು ಬಳಗ ಹಾಗೂ ಅಪಾರ ಸಂಖ್ಯೆಯ ಶಿಷ್ಯಯಂದಿರುಗಳನ್ನು ಅಗಲಿದ್ದಾರೆ.

ಡಾ. ಸುಂದರ ಸೇರಿಗಾರ್‌ ಅಲೆವೂರು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲೆವೂರಿನಲ್ಲಿ ಆರನೇ ತರಗತಿ ತನಕ ಓದಿರುತ್ತಾರೆ. ಇವರು ತಮ್ಮ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ಬಬ್ಬು ಸೇರಿಗಾರ್‌ರು ಅಲೆವೂರು ಇವರು ಇಲ್ಲಿನ ಉತ್ಸವಕ್ಕೆ ಸಾಕ್ಸೋಫೋನ್‌ ನುಡಿಸಲು ಬಂದಾಗ, ಅವರು ನುಡಿಸುವುದನ್ನು ನೋಡಿ ಸುಂದರ್‌ ಸೇರಿಗಾರ್‌ರಿಗೆ ಸಾಕ್ಸೋಫೋನ್‌ ವಾದಕದ ಮೇಲೆ ಆಸಕ್ತಿ ಬೆಳೆದಿರುತ್ತದೆ. ಇದನ್ನು ತಿಳಿದ ಸುಂದರ ಶೇರಿಗಾರ್‌ ಅವರ ತಾಯಿ ಹಾಗೂ ಅಣ್ಣ ಬಬ್ಬು ಶೇರಿಗಾರರ ಬಳಿ ಸಾಕ್ಸೋಫೋನ್‌ನನ್ನು ನುಡಿಸಲು ಅಭ್ಯಾಸ ಮಾಡಿದ್ದಾರೆ.

ಮುಂದೆ ಅವರೊಂದಿಗೆ ಸುಂದರ ಶೇರಿಗಾರರು ತುಂಬಾ ಕಡೆಗಳಲ್ಲಿ ಉತ್ಸವ ಹಾಗೂ ಕಾರ್ಯಕ್ರಮಗಳಲ್ಲಿ ಸಾಕ್ಸೋಫೋನ್‌ ವಾದಕವನ್ನು ನುಡಿಸಿದ್ದಾರೆ. ಇನ್ನು ಸುಂದರ ಶೇರಿಗಾರರ ಅಣ್ಣ ಮೇಸ್ತ್ರೀ ಕೆಲಸದೊಂದಿಗೆ ಸಮ್ಮೇಳವನ್ನು ನುಡಿಸುತ್ತಿದ್ದಾರೆ ಆಗಿದ್ದಾರೆ. ನಂತರದ ದಿನಗಳಲ್ಲಿ ಉಡುಪಿ‌ ಸಂಗೀತ ವಿದ್ವಾನ್‌ ವಾಸ್ತಯ್ಯ ಭಟ್ ಅವರ ಬಳಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. ಆಮೇಲೆ ಮದ್ದೂರು ಸುಬ್ರಮ್ಯಣ್ಯಂ ಅವರೊಂದಿಗೆ ಕೂಡ ಸಂಗೀತ ಅಭ್ಯಾಸ ಮಾಡಿದ್ದಾರೆ. ಒಳ್ಳೆಯ ಗುರುಗಳೊಂದಿಗೆ ಸಂಗೀತ ಅಭ್ಯಾಸ ಮಾಡಿ ಸುಂದರ ಸೇರಿಗಾರ್‌ರು ತಾವು ಕಲಿತ ವಿದ್ಯೆಯನ್ನು ಅಪಾರ ಸಂಖ್ಯೆ ಶಿಷ್ಯಯಂದಿರಿಗೆ ಧಾರೆ ಎರೆದಿದ್ದಾರೆ. ಅಷ್ಟೇ ಅಲ್ಲದೇ ಇವರಿಗೆ ಗೌರವ ಡಾಕ್ಟರೇಟ್‌ನೊಂದಿಗೆ ಹಲವಾರು ಪ್ರಶಸ್ತಿಗಳು ಲಭಿಸಿದೆ.

ಇದನ್ನೂ ಓದಿ : Actor Pratham engagement : ಸಿಂಪಲ್‌ ಆಗಿ ಎಂಗೇಜ್‌ ಆದ ಒಳ್ಳೆ ಹುಡ್ಗ ಪ್ರಥಮ್‌

ಮೃತ ಸುಂದರ ಸೇರಿಗಾರ್‌ರು ರಾಜ್ಯದಲ್ಲಿ ಮಾತ್ರವಲ್ಲದೇ ಹೊರ ರಾಜ್ಯವಾದ ಸತಾರದಲ್ಲಿ ಇರುವ ನಟರಾಜ ಮಂದಿರದಲ್ಲಿ ಸಾಕ್ಸೋಫೋನ್‌ ನುಡಿಸಿ ಸನ್ಮಾನವನ್ನು ಪಡೆದಿದ್ದಾರೆ. ಸುಂದರ ಸೇರಿಗಾರ್‌ರ ಅವರ ಸಾಕ್ಸೋಫೋನ್‌ ವಾದಕಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಖ್ಯಾತ ಸ್ಯಾಕ್ಸೋಫೋನ್ ವಾದಕರು, ನೂರಾರು ವಿದ್ಯಾರ್ಥಿಗಳಿಗೆ ಸ್ಯಾಕ್ಸೋಫೋನ್ ವಾದನ ಕಲಿಸಿದವರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಅಲೆವೂರು ಸುಂದರ ಸೇರಿಗಾರ್ ರವರು ನಮ್ಮನ್ನಗಲಿದ್ದಾರೆ ಎಂದು ತಿಳಿಸಲು ದುಃಖವಾಗುತ್ತಿದೆ. ಭಗವಂತ ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ‌.

Zilla Rajyotsava award winning saxophonist Dr. Sundar Sherigar Alevoor is no more.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular