ಮಂಗಳೂರು : death threats : ಕರಾವಳಿ ಜಿಲ್ಲೆಯಲ್ಲಿ ನಡೆದ ಸಾಲು ಸಾಲು ಕೊಲೆ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮಸೂದ್, ಪ್ರವೀಣ್ ನೆಟ್ಟಾರು. ಫಾಜಿಲ್ ಹೀಗೆ ಸರಣಿ ಕೊಲೆಗಳು ಕಡಲ ನಗರಿಯ ಜನತೆಯನ್ನು ಭಯದಲ್ಲಿ ಬದುಕುವಂತೆ ಮಾಡಿದೆ. ಅದರಲ್ಲೂ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕವಂತೂ ಹಿಂದೂ ಮುಖಂಡರಿಗೆ ನಡುಕ ಶುರುವಾಗಿದೆ. ಅದೇ ರೀತಿ ಮಂಗಳೂರಿನಲ್ಲಿ ಮತ್ತೊಬ್ಬ ವಿಹೆಚ್ಪಿ ಕಾರ್ಯಕರ್ತ ಕೂಡ ನನ್ನ ಮೇಲೆ ಕೊಲೆ ಯತ್ನವನ್ನು ಮಾಡಲು ಹಂತಕರು ಯತ್ನಿಸಿದ್ದಾರೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ .
ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು ಆಗಸ್ಟ್ 2ರಂದು ನಗರದ ಬಜ್ಪೋಡಿ – ಬಿಕರ್ನಕಟ್ಟೆ ಎಂಬಲ್ಲಿ ತಮ್ಮ ಕಾರನ್ನು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತರು ಹಿಂಬಾಲಿಸಿದ್ದಾರೆ. ಅಲ್ಲದೇ ಆಗಸ್ಟ್ ಏಳರಂದು ರಾತ್ರಿ ಸುಮಾರು 10:30ಕ್ಕೆ ಹೆಲ್ಮೆಟ್ ಧರಿಸಿ ಬಂದ ಬೈಕ್ ಸವಾರರು ಬೈಕ್ನ್ನು ನನ್ನ ಕಾರಿಗೆ ತಾಗಿಸಿ ಪರಾರಿಯಾಗಿದ್ದಾರೆಂದು ಉಲ್ಲೇಖಿಸಿದ್ದರು.
ವಿಶ್ವ ಹಿಂದೂ ಪರಿಷತ್ ನಾಯಕ ಈ ರೀತಿ ದೂರು ನೀಡುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದವರು ಹಂತಕರಲ್ಲ ಬದಲಾಗಿ ಫುಡ್ ಡೆಲಿವರಿ ಬಾಯ್ ಎಂಬ ವಿಚಾರ ಬಯಲಿಗೆ ಬಂದಿದೆ. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನ ಮನೆಯ ಪಕ್ಕದ ಮನೆಯ ನಿವಾಸಿಯೊಬ್ಬರು ಫುಡ್ ಆರ್ಡರ್ ಮಾಡಿದ್ದರು. ಹೀಗಾಗಿ ಫುಡ್ ಡೆಲಿವರಿ ಮಾಡಲೆಂದು ಡೆಲಿವರಿ ಬಾಯ್ ಕಾರ್ಯಕರ್ತನ ಪಕ್ಕದ ಮನೆಗೆ ಆಗಮಿಸಿದ್ದರು.
ಆದರೆ ಡೆಲಿವರಿ ಬಾಯ್ ತನ್ನನ್ನು ಕೊಲೆ ಮಾಡಲು ಬಂದಿರುವ ಹಂತಕ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ತಪ್ಪಾಗಿ ಭಾವಿಸಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಪೊಲೀಸರಿಗೆ ಅಸಲಿ ವಿಚಾರ ತಿಳಿದು ಬಂದಿದೆ.
ಈ ಹಿಂದೆ ಅನೇಕ ಬಾರಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನಿಗೆ ಕೊಲೆ ಬೆದರಿಕೆಗಳು ಬಂದಿದ್ದವು. ಭಾನುವಾರ ರಾತ್ರಿ ಕೂಡ ಅವರಿಗೆ ಕೊಲೆ ಬೆದರಿಕೆ ಬಂದಿತ್ತು . ರಾತ್ರಿ 11:43ರ ಸುಮಾರಿಗೆ +1 (661)748-0242 ಸಂಖ್ಯೆಯಿಂದ ಕರೆ ಮಾಡಿದ್ದ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದರಂತೆ. ತುಳು ಮಿಶ್ರಿತ ಮುಸ್ಲಿಂ ಭಾಷೆಯಲ್ಲಿ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಐಪಿಸಿ ಸೆಕ್ಷನ್ 506,507ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ : Arrested For Raping Cows: ಹಸುಗಳ ಮೇಲೆ ಅತ್ಯಾಚಾರ : ಬೆಂಗಳೂರಿನಲ್ಲಿ ಕಾಮುಕ ಅರೆಸ್ಟ್
ಇದನ್ನೂ ಓದಿ : ಮಂಗಳೂರಲ್ಲಿ ಮತ್ತೋರ್ವ ಹಿಂದೂ ಮುಖಂಡನ ಹತ್ಯೆಗೆ 3 ಬಾರಿ ಸ್ಕೆಚ್ , ದೂರು ದಾಖಲು
A twist in the case of death threats to Mangalore Vishwa Hindu Parishad worker