ಮಂಗಳೂರು : attempt to smuggle gold worth crores : ವಿಮಾನ ನಿಲ್ದಾಣಗಳಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಮಂಗಳೂರು ಹಾಗೂ ನೆರೆ ರಾಜ್ಯ ಕೇರಳದ ವಿಮಾನ ನಿಲ್ದಾಣಗಳಲ್ಲಿ ಆಗಾಗ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತದೆ. ಇದೀಗ ಕೇರಳದ ಕರಿಪ್ಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಕಳ್ಳ ಸಾಗಾಟಕ್ಕೆ ಯತ್ನಿಸಿದ ಸುಮಾರು ಒಂದು ಕೋಟಿ ರೂ.ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದುಬೈನಿಂದ ಬಂದಿದ್ದ ಮಲಪ್ಪುರಂ ಕೊಳತ್ತೂರು ನಿವಾಸಿ ಮೊಹಮ್ಮದ್ ಯಾಸಿರ್ ತನ್ನ ಒಳ ಉಡುಪು ಹಾಗೂ ಶೂ ಒಳಗಡೆ ಬಚ್ಚಿಟ್ಟು ಚಿನ್ನ ಕಳ್ಳ ಸಾಗಾಣೆಗೆ ಯತ್ನಿಸಿದ್ದಾನೆ. ಆದ್ರೆ ಕಸ್ಟಮ್ಸ್ ಅಧಿಕಾರಿಗಳಿಗೆ ಯಾಸಿರ್ ಬಗ್ಗೆ ಅನುಮಾನ ಬಂದು ತೀವ್ರ ತಪಾಸಣೆ ನಡೆಸಿದಾಗ ಚಿನ್ನ ಕಳ್ಳಸಾಗಣೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಯಾಸಿರ್ ನ್ನು ಬಂಧಿಸಿದ್ದಾರೆ.
ಕೇರಳದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣ ಹೆಚ್ಚುತ್ತಿದೆ. ಅದರಲ್ಲೂ ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಪ್ರತಿನಿತ್ಯ ಕೋಟ್ಯಾಂತರ ಮೌಲ್ಯದ ಕಿಲೋಗಟ್ಟಲೇ ತೂಕದ ಚಿನ್ನ ವಶಪಡಿಸಲಾಗುತ್ತಿದೆ. ಈ ರೀತಿ ಕಳ್ಳ ಸಾಗಾಣಿಕೆ ಮೂಲಕ ಬಂದ ಚಿನ್ನವನ್ನು ಹೆಸರಾಂತ ಜ್ಯುವೆಲ್ಲರಿ ಸಂಸ್ಥೆಗಳ ಬಳಕೆ ಮಾಡುತ್ತದೆ ಎಂಬ ಆರೋಪವಿದೆ. ಪ್ರಕರಣದಲ್ಲಿ ಸಿಕ್ಕಿ ಬೀಳುವ ಆರೋಪಿಗಳು ಒಂದೊಂದು ಉಪಾಯವನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ನಡೆಸುತ್ತಾರೆ. ಖತರ್ನಾಕ್ ವಂಚಕರು ಚಾಪೆ ಕೆಳಗೆ ನುಸುಳಿದರೆ ನಮ್ಮ ಕಸ್ಟಮ್ಸ್ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಲಿ ವಂಚಕರ ಹೆಡೆಮುರಿ ಕಟ್ಟುತ್ತಿದ್ದಾರೆ.
ಇನ್ನು ಈ ಚಿನ್ನ ಕಳ್ಳ ಸಾಗಾಣಿಕೆ ಒಂದು ವ್ಯವಸ್ಥಿತ ಜಾಲವಾಗಿದೆ. ಈ ರೀತಿ ಚಿನ್ನವನ್ನು ತರುವುದಕ್ಕೆಂದೆ ಕೆಲ ವ್ಯಕ್ತಿಗಳು ವಿದೇಶಕ್ಕೆ ತೆರಳುತ್ತಾರೆ. ಕೆಲ ಎಜೆಂಟ್ ಈ ಕೆಲಸಕ್ಕೆಂದೆ ಜನರನ್ನು ತಮ್ಮದೇ ಖರ್ಚಿನಲ್ಲಿ ವಿದೇಶಕ್ಕೆ ಕಳುಹಿಸುತ್ತಾರೆ. ಯಶಸ್ವಿಯಾಗಿ ಚಿನ್ನವನ್ನು ವಿಮಾನನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳನ್ನು ದಾಟಿ ತಂದ್ರೆ ಅವರಿಗೆ ಇಂತಿಷ್ಟು ಹಣ ಎಂದು ನೀಡಲಾಗುತ್ತೆ. ಇದೆಲ್ಲವೂ ಮೊದಲೆ ಡೀಲ್ ಆಗಿರುತ್ತೆ. ಒಟ್ಟಿನಲ್ಲಿ ಈ ಚಿನ್ನ ಕಳ್ಳ ಸಾಗಾಣಿಕೆ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸಿ ಜಾಲದ ಹಿಂದಿರುವ ಶಕ್ತಿಗಳನ್ನು ಬಯಲಿಗೆಳೆಯಬೇಕಾಗಿದೆ .
ಇದನ್ನು ಓದಿ : Condoms From Swiggy : ಸ್ವಿಗ್ಗಿಯಲ್ಲಿ ಐಸ್ಕ್ರೀಂ, ಚಿಪ್ಸ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಕಾಂಡೋಮ್ : ವೈರಲ್ ಆಯ್ತು ಟ್ವೀಟ್
An attempt to smuggle gold worth crores in underwear and shoes