ಬೈಂದೂರು : (Jayaprakash Hegde Visit Kalihitlu) ಭಾರೀ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ತತ್ತರಿಸಿ ಹೋಗಿದೆ. ನೆರೆ, ಕಡಲ್ಕೊರೆತದಿಂದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದ್ರಲ್ಲೂ ಕಳಿಹಿತ್ಲು ಪ್ರದೇಶದಲ್ಲಿ ಉಂಟಾದ ನೆರೆ ಹಾವಳಿಯಿಂದಾಗಿ ಆರವತ್ತಕ್ಕೂ ಅಧಿಕ ದೋಣಿಗಳು ಹಾನಿಗೆ ಒಳಗಾಗಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಭೇಟಿ ನೀಡಿ ಮೀನುಗಾರರ ಸಮಸ್ಯೆ ಆಲಿಸಿದ್ದಾರೆ.

ಶಿರೂರಿನ ಕಳಿಹಿತ್ಲು ಪ್ರದೇಶಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಭೇಟಿ ನೀಡಿ ಹಾನಿಗೆ ಒಳಗಾಗಿರುವ ದೋಣಿಗಳನ್ನು ವೀಕ್ಷಿಸಿದರು. ಈ ವೇಳೆಯಲ್ಲಿ ಮೀನುಗಾರರ ಜೊತೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಈ ಕುರಿತು ಸರಕಾರದ ವತಿಯಿಂದ ಸೂಕ್ತ ಪರಿಹಾರವನ್ನು ದೊರಕಿಸುವ ಭರವಸೆಯನ್ನು ನೀಡಿದ್ದಾರೆ.

ಕಳೆದ ಒಂದು ವಾರದಿಂದಲೂ ಸುರಿದ ಬಾರೀ ಮಳೆಯಿಂದಾಗಿ ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ ದೋಣಿಗಳು ಮಳೆಯ ರಭಸಕ್ಕೆ ಸಮುದ್ರದ ಪಾಲಾಗಿದ್ದವು. ಈ ಪೈಕಿ ಹಲವು ದೋಣಿಗಳನ್ನು ಮೀನುಗಾರರು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದರು. 75 ಕ್ಕೂ ಅಧಿಕ ದೋಣಿಗಳಿಗೆ ಭಾಗಶಃ ಹಾನಿಯಾಗಿದ್ರೆ, 208 ದೋಣಿಗಳ ಬಲೆಗಳು ಸಮುದ್ರ ಪಾಲಾಗಿವೆ.

ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ,ಮೀನುಗಾರಿಕಾ ನಿರ್ದೇಶಕ ಶಿವಕುಮಾರ್,ಮೀನುಗಾರಿಕಾ ಸಹಾಯಕ ನಿರ್ದೇಶಕಿ ಸುಮಲತಾ,ಗಣೇಶ, ಜಿ.ಪಂ ಮಾಜಿ ಸದಸ್ಯರಾದ ಸುರೇಶ ಬಟ್ವಾಡಿ, ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಉಪತಹಶೀಲ್ದಾರ ಭೀಮಪ್ಪ ಎಚ್.ಬಿಲ್ಲಾರ್, ಮೀನುಗಾರ ಮುಖಂಡ ಜಗನ್ನಾಥ ಮೊಗವೀರ, ಉಪ್ಪುಂದ ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುತ್ತಯ್ಯ ಖಾರ್ವಿ, ಉಪ್ಪುಂದ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ, ನಾಗರಾಜ ಖಾರ್ವಿ ಬಿ.ಎಚ್.ಪಿ,ಕುಮಾರ್ ಖಾರ್ವಿ, ಉಪ್ಪುಂದ ಗ್ರಾ.ಪಂ ಸದಸ್ಯ ನಾಗರಾಜ ಖಾರ್ವಿ, ಶಿರೂರು ಗ್ರಾ.ಪಂ ಸದಸ್ಯ ಬಾಬು ಮೊಗೇರ್ ಅಳ್ವೆಗದ್ದೆ, ಸದಾಶಿವ ಡಿ.ಪಡುವರಿ, ತುಳಸಿದಾಸ್ ಮೊಗೇರ್, ಕಂದಾಯ ನಿರೀಕ್ಷಕ ಮಂಜು ಮುಂತಾದವರು ಉಪಸ್ಥಿತರಿದ್ದರು.





ಇದನ್ನೂ ಓದಿ : deep sea fishing : ಮೀನುಗಾರರಿಗೆ ಮತ್ತೆ ಆಘಾತ : ಆಳ ಸಮುದ್ರ ಮೀನುಗಾರಿಕೆಗೆ ಆಗಸ್ಟ್ 11ರವರೆಗೆ ನಿರ್ಬಂಧ
ಇದನ್ನೂ ಓದಿ : Robbery Woman : ಕುಂದಾಪುರದಲ್ಲಿ ಶಾಲೆಯಿಂದ ಬರುವ ಮಗುವಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ, ಚಿನ್ನಾಭರಣ ದರೋಡೆ
Backward Class Commission President K Jayaprakash Hegde Visit Kalihitlu and Watching Damaged Fishing Boat