ಉಡುಪಿ : ತೌಕ್ಟೇ ಚಂಡ ಮಾರುತದಿಂದಾಗಿ ಬಂಡೆಗೆ ಬಡಿದು ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್ ಪ್ರೆಸ್ ವೆಸೆಲ್ ಟಗ್ ನಲ್ಲಿ ಸಿಲುಕಿರುವ 9 ಮಂದಿ ಸಿಬಂದಿಗಳ ರಕ್ಷಣೆಗಾಗಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಆರಂಭಿಸಿದೆ.
ಕಾಪು ಲೈಟ್ ಹೌಸ್ ಗಿಂತ 15 ಕಿ.ಮೀ ದೂರದಲ್ಲಿ ಚಂಡ ಮಾರುತದ ಆರ್ಭಟಕ್ಕೆ ಸಿಲುಕಿ ಟಗ್ ಬಂಡೆಗೆ ಬಡಿದಿತ್ತು. ಈ ಹಿನ್ನೆಲೆಯಲ್ಲಿ ಬೋಟ್ ನಲ್ಲಿದ್ದ ಸಿಬ್ಬಂದಿ ರಕ್ಷಣೆಗಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೊಚ್ಚಿನ್ ನಿಂದ ಆಗಮಿಸಿರುವ ನೌಕಾ ಪಡೆಯ ಹೆಲಿಕಾಪ್ಟರ್ ಮೂಲಕ ಟಗ್ ನಲ್ಲಿರುವ ಸಿಬ್ಬಂದಿಗಳ ರಕ್ಷಣಾ ಕಾರ್ಯ ಆರಂಭವಾಗಿದೆ.
ಟಗ್ ಹಾಗೂ ಕೋಸ್ಟ್ ಗಾರ್ಡ್ ನ ವರಾಹ ಹಡಗಿನ ನಡುವೆ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.
