ಮಂಗಳವಾರ, ಏಪ್ರಿಲ್ 29, 2025
HomeCoastal NewsBrahmavara Road accident: ಟೂರಿಸ್ಟ್‌ ಬಸ್‌ ಚಾಲಕನ ಅಜಾಗರೂಕತೆಗೆ ಓರ್ವ ಬಲಿ

Brahmavara Road accident: ಟೂರಿಸ್ಟ್‌ ಬಸ್‌ ಚಾಲಕನ ಅಜಾಗರೂಕತೆಗೆ ಓರ್ವ ಬಲಿ

- Advertisement -

ಬ್ರಹ್ಮಾವರ: (Brahmavara Road accident) ರಸ್ತೆ ದಾಟುವಾಗ ಟೂರಿಸ್ಟ್ ಬಸ್‌ ಒಂದು ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬ್ರಹ್ಮಾವರದ ಉಪ್ಪೂರು ಗ್ರಾಮದಲ್ಲಿ ನಡೆದಿದೆ. ಬ್ರಹ್ಮಾವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉಪ್ಪೂರು ಗ್ರಾಮದ ಕೆದಗೆಜಡ್ಡು ನಿವಾಸಿ ನಾರಾಯಣ ಪೂಜಾರಿ ಎನ್ನುವವರೇ ಮೃತ ವ್ಯಕ್ತಿ.

ಮೃತ (Brahmavara Road accident) ನಾರಾಯಣ ಪೂಜಾರಿ ಅವರು ಮಧ್ಯಾಹ್ನ 12:55 ಗಂಟೆ ಸುಮಾರಿಗೆ ಜನರಲ್ ಸ್ಟೋರ್ಸ್‌ ನಿಂದ ಸಾಮಾನುಗಳನ್ನು ಖರೀದಿ ಮಾಡಿ ಅಂಗಡಿಯ ಕಡೆಯಿಂದ ಜಾತಬೆಟ್ಟು ಕಡೆಗೆ ಹೋಗಲು ಉಡುಪಿ – ಕುಂದಾಪುರ ರಾಹೆ 66 ರನ್ನು ದಾಟಿ ಡಿವೈಡರ್‌ ಹತ್ತಿ ಅಲ್ಲಿಂದ ಕುಂದಾಪುರ – ಉಡುಪಿ ರಾಹೆ 66 ರ ರಸ್ತೆಯನ್ನು ದಾಟುತ್ತಿದ್ದರು.

ಈ ವೇಳೆ KA.11.B.0018 ನಂಬರ್‌ ನ ಶ್ರೀ ಧರ್ಮಸ್ಥಳ ಶಾಲಾ ಮಕ್ಕಳ ಟೂರಿಸ್ಟ್‌ ಬಸ್ಸ್‌ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದ ಆರೋಪಿ ಟೂರಿಸ್ಟ್‌ ಚಾಲಕ ರಸ್ತೆ ದಾಟುತ್ತಿದ್ದ ನಾರಾಯಣ ಪೂಜಾರಿಯವರಿಗೆ ಡಿಕ್ಕಿ ಹೊಡೆದಿದ್ದು, ವ್ಯಕ್ತಿ ರಸ್ತೆಯ ಮೇಲೆ ಬಿದ್ದಿದ್ದಾರೆ. ರಸ್ತೆಯ ಮೇಲೆ ಬಿದ್ದ ಅವರ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ, ಅತಿಯಾದ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Traffic Rules : ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲು ಮಂಗಳೂರು ನಗರ ಪೊಲೀಸರ ಹೊಸ ತಂತ್ರ

ಇದನ್ನೂ ಓದಿ : ಮಂಗಳೂರಲ್ಲಿ ಸಿಟಿ ಬಸ್ ಚಾಲಕನ ಅಟ್ಟಹಾಸ : ಇಂಜಿನಿಯರ್ ಸಾವು, ಸಾರ್ವಜನಿಕರ ಆಕ್ರೋಶ

ಘಟನೆ ನಡೆದ ಬಳಿಕ ಮೃತ ವ್ಯಕ್ತಿಯ ಪರಿಚಯಸ್ಥರಾದ ಚಂದ್ರ ಪೂಜಾರಿ ಎನ್ನುವವರು ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಪರಾಧ ಕ್ರಮಾಂಕ 209/2022 ಕಲಂ : 279, 304(A) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದ್ದು, ಘಟನೆ ಕುರಿತು ತನಿಖೆ ನಡೆಯುತ್ತಿದೆ.

(Brahmavara Road accident) A tourist bus hit a person while crossing the road and the person died on the spot. The incident took place in Uppur village of Brahmavara. The incident took place in Brahmavar police station area and the dead person is Narayana Pujari, a resident of Kedagejaddu of Uppur village.

RELATED ARTICLES

Most Popular