ಉಡುಪಿ / ಮಂಗಳೂರು : ಕೊರೊನಾ ವೈರಸ್ ಸೋಂಕಿನ ಆರ್ಭಟದ ಬೆನ್ನಲ್ಲೇ ಓಮಿಕ್ರಾನ್ ಸೋಂಕು ಕರಾವಳಿ ಭಾಗದಲ್ಲಿ ಆತಂಕವನ್ನು ತಂದೊಂಡಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಕಳೆದ ಒಂದು ವಾರದ ಅವಧಿಯಲ್ಲಿ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ನಿತ್ಯವೂ ನೂರಕ್ಕೂ ಅಧಿಕ ಮಂದಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೇರಳ, ಮಹಾರಾಷ್ಟ್ರ, ಬೆಂಗಳೂರಿನಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣ ಹೆಚ್ಚಳವಾಗುತ್ತಿರುವುದು ಕರಾವಳಿ ಜಿಲ್ಲೆಗಳಿಗೆ ಮಾರಕವಾಗಿ (Covid-19 danger list) ಪರಿಣಮಿಸುತ್ತಿದೆ. ಕೇರಳ ಮಂಗಳೂರು ಹಾಗೂ ಉಡುಪಿಗೆ ನೇರ ಸಂಪರ್ಕವನ್ನು ಹೊಂದಿದ್ರೆ, ಇನ್ನೊಂದೆಡೆಯಲ್ಲಿ ಮುಂಬೈ ಹಾಗೂ ಬೆಂಗಳೂರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಭಾಗದ ಜನರೇ ವಾಸವಾಗಿದ್ದಾರೆ. ಹೀಗಾಗಿ ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ಸ್ಪೋಟವಾಗುವ ಆತಂಕ ಎದುರಾಗಿದೆ.
ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿಯೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೊರೊನಾ ಹೆಮ್ಮಾರಿ ಇನ್ನಿಲ್ಲದಂತೆ ಕಾಡಿತ್ತು. ಇದೀಗ ಮೂರನೇ ಅಲೆಯ ಹೊತ್ತಲ್ಲೂ ಅದೇ ಸೂಚನೆಯನ್ನೇ ನೀಡುತ್ತಿದೆ. ದಿನೇ ದಿನೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ 31 ರಂದು 31 ಪ್ರಕರಣ ದಾಖಲಾಗಿದ್ರೆ, ಉಡುಪಿ ಜಿಲ್ಲೆಯಲ್ಲಿ 35 ಪ್ರಕರಣ ದೃಢಪಟ್ಟಿತ್ತು. ಆದರೆ ನಿನ್ನೆ (ಜನವರಿ 6) ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 106 ಪ್ರಕರಣ ದಾಖಲಾಗಿದ್ರೆ, ಉಡುಪಿಯಲ್ಲಿ 92 ಪ್ರಕರಣ ಪತ್ತೆಯಾಗಿತ್ತು. ಅತೀ ಹೆಚ್ಚು ಕೊರೊನಾ ಸೋಂಕಿತ ಪ್ರಕರಣ ಸಂಖ್ಯೆಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ರೆ, ದಕ್ಷಿಣ ಕನ್ನಡ ಎರಡನೇ ಹಾಗೂ ಉಡುಪಿ ಮೂರನೇ ಸ್ಥಾನದಲ್ಲಿದೆ.
ಉಡುಪಿ ಜಿಲ್ಲೆಯ ಒಟ್ಟು 435 ಸಕ್ರೀಯ ಕೊರೊನಾ ಪ್ರಕರಣಗಳಿದ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 536 ಸಕ್ರೀಯ ಪ್ರಕರಣಗಳಿಗೆ. ಸೋಂಕಿತರ ಸಂಖ್ಯೆಯಲ್ಲಷ್ಟೇ ಅಲ್ಲಾ ಸಕ್ರೀಯ ಕೊರೊನಾ ಪ್ರಕರಣ ಪಟ್ಟಿಯಲ್ಲಿಯೂ ಕರಾವಳಿಯ ಎರಡು ಜಿಲ್ಲೆಗಳೇ ಎರಡನೇ ಹಾಗೂ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ. ಕಳೆದ ಮೂರು ದಿನಗಳಿಂದ ನೂರಕ್ಕೂ ಅಧಿಕ ಪ್ರಕರಣ ಪತ್ತೆಯಾಗುತ್ತಿರುವುದು ಆತಂಕವನ್ನು ಮೂಡಿಸಿದೆ. ಇನ್ನೊಂದೆಡೆಯಲ್ಲಿ ಓಮಿಕ್ರಾನ್ ಪ್ರಕರಣ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿಂದು 107 ಓಮಿಕ್ರಾನ್ ಸೋಂಕಿತ ಪ್ರಕರಣಗಳ ದಾಖಲಾಗಿದ್ದು, ಇದುವರೆಗೆ ಒಟ್ಟು 333 ಮಂದಿ ಓಮಿಕ್ರಾನ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿಯನ್ನು ನೀಡಿದ್ದಾರೆ. ಅದ್ರಲ್ಲೂ ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಕೋಲಾರ ಹಾಗೂ ಮಂಡ್ಯ ಜಿಲ್ಲೆಗಳು ಓಮಿಕ್ರಾನ್ ಅಪಾಯಕಾರಿ ಜಿಲ್ಲೆಗಳು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗಕ್ಕೆ ಕೊರೊನಾ ಜೊತೆ ಜೊತೆಗೆ ಓಮಿಕ್ರಾನ್ ಭೀತಿಯೂ ಆವರಿಸುತ್ತಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ಹೆಚ್ಚುತ್ತಿದ್ದರೂ ಕೂಡ ಜನರು ಮೈ ಮರೆತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಬಸ್ಸು, ಮಾಲ್, ಸಿನಿಮಾ ಥಿಯೇಟರ್, ಅಷ್ಟೇ ಯಾಕೆ ಆಸ್ಪತ್ರೆಗಳಲ್ಲಿಯೂ ಜನರು ಮಾಸ್ಕ್ ಧರಿಸುತ್ತಿಲ್ಲ. ಕೊರೊನಾ ಹೆಚ್ಚಳವಾದ ನಂತರದಲ್ಲಿ ಸರಕಾರ ಲಾಕ್‌ಡೌನ್, ಕರ್ಪ್ಯೂ ಹೇರಿಕೆ ಮಾಡಲು ತೋರುವ ಆಸಕ್ತಿಯನ್ನು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ತೋರಲಿ ಅನ್ನೋ ಮಾತುಗಳು ಕೇಳಿಬರುತ್ತಿದೆ ಇದೆ.
ಇದನ್ನೂ ಓದಿ : ವೀಕೆಂಡ್ ಕರ್ಪ್ಯೂ : ರಾಜ್ಯದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿದ ಶಿಕ್ಷಣ ಇಲಾಖೆ
ಇದನ್ನೂ ಓದಿ : ದೇಶದಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 1.17 ಲಕ್ಷ ಪ್ರಕರಣ ವರದಿ
(coastal area corona and Omicron hike, Dakshin kannada and Udupi in Covid-19 danger list )