ಕುಂದಾಪುರ : ಬೊಲೆರೋ ವಾಹನದಲ್ಲಿ ಗೋವುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗೋಕಳ್ಳರನ್ನು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವ್ರಾಡಿಯಲ್ಲಿ ನಡೆದಿದೆ.

ಕಂಡ್ಲೂರಿನ ಸಮೀರ್, ಮುತಾಯಬ್ ಮತ್ತು ರಿದಾನ್ ಎಂಬವರೇ ಪೊಲೀಸರಿಗೆ ಸಿಕ್ಕಿ ಬಿದ್ದ ಗೋಕಳ್ಳರು. ಬೆಳಗ್ಗಿನ ವೇಳೆಯಲ್ಲಿ ಕಾವ್ರಾಡಿಯ ಜನತಾ ಕಾಲೋನಿಯಲ್ಲಿ ಬೊಲೋರೋ ವಾಹನದ ಹಿಂಭಾಗದಲ್ಲಿ 3 ಗಂಡು ಕರುಗಳ ಹಿಂಸಾತ್ಮಕ ರೀತಿಯಲ್ಲಿ ತುಂಬಿಕೊಂಡು ಮಾಂಸ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆಯಲ್ಲಿ ಪೊಲೀಸರು ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ್ದಾರೆ.

ಗೋ ಸಾಗಾಟಕ್ಕೆ ಬಳಸುತ್ತಿದ್ದ ಬೊಲೆರೋ ಕಾರು, 3 ಗಂಡು ಕರುವನ್ನು ವಶಕ್ಕೆ ಪಡೆದುಕೊಂಡಿರುವ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.