ಉಡುಪಿ: (Entry of the new Brahmaratha) ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ ಮಹತೋಭಾರ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಶ್ರೀ ಕ್ಷೇತ್ರ ನೀಲಾವರ ರಾಜ್ಯ ಹಾಗೂ ಹೊರರಾಜ್ಯದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಕ್ಷೇತ್ರ. ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇದೀಗ ಶ್ರೀ ಕ್ಷೇತ್ರಕ್ಕೆ ಹೊಸ ಕೊಡುಗೆಯೊಂದು ಸಲ್ಲಲಿದ್ದು, ಸುಮಾರು ವರ್ಷಗಳ ಬಳಿಕ ದೇವಸ್ಥಾನದಲ್ಲಿ ಹೊಸ ಬದಲಾವಣೆಯೊಂದಿಗೆ ನೂತನ ಬ್ರಹ್ಮರಥ ಪುರಪ್ರವೇಶ ಮಾಡಲಿದೆ.
ನೀಲಾವರ ಮಕ್ಕಿತೋಟ ಮನೆಯ ಶ್ರೀಮತಿ ಗೌರಿ ವಿಠಲ ಶೆಟ್ಟಿ ಮತ್ತು ಮಕ್ಕಳು, ಮನೆಯವರು ಮತ್ತು ಕುಟುಂಬಸ್ಥರಿಂದ ನೀಲಾವರ ಶ್ರೀ ಮಹಿಷಮರ್ಧಿನಿಗೆ ಸೇವಾರೂಪವಾಗಿ ನೂತನ ಬ್ರಹ್ಮ ರಥವನ್ನು ಸಮರ್ಪಿಸಲಾಗುತ್ತಿದೆ. ಇದೇ ಫೆ.27 ರಂದು ಈ ನೂತನ ಬ್ರಹ್ಮರಥವನ್ನು ಸಕಲ ಧಾರ್ಮಿಕ ವಿಧಿವಿಧಾನಗಳಿಂದ ದೇವಸ್ಥಾನದ ಪುರಪ್ರವೇಶ ಮಾಡಲಿದ್ದು, ಈ ನೂತನ ಬ್ರಹ್ಮರಥದ ವಿಶೇಷ ರಥೋತ್ಸವ ಮುಂದಿನ ತಿಂಗಳು ಮಾರ್ಚ್ 10 ರಂದು ನಡೆಯಲಿದೆ.
ನೂತನವಾಗಿ ನಿರ್ಮಾಣಗೊಂಡಿರುವ ರಥವನ್ನು ಆಧುನಿಕ ತಂತ್ರಜ್ಞಾನ ಬಳಸಿರುವ ರಥಶಿಲ್ಪಗಳಿಂದ ನಿರ್ಮಾಣ ಮಾಡಿದ್ದಾರೆ.ಈ ವರೆಗೆ ದೇವಸ್ಥಾನದಲ್ಲಿ ಬಳಸುತ್ತಿದ್ದ ರಥವು ಆಳುಪ ಅರಸರ ಕಾಲದ್ದಾಗಿದ್ದು, ಹಲವು ವರ್ಷಗಳ ಇತಿಹಾಸವನ್ನು ಹೊಂದಿದೆ.ಯಾವುದೇ ಲೋಪದೋಷಗಳಿಲ್ಲದೇ ನೂತನ ರಥವನ್ನು ನಿರ್ಮಾಣ ಮಾಡಿದ್ದು, ಶಿಲ್ಪಕಲಾಕಾರರು ಹಲವು ತಿಂಗಳುಗಳ ಕಾಲ ಶ್ರಮವಹಿಸಿ ಈ ರಥವನ್ನು ನಿರ್ಮಾಣ ಮಾಡಿದ್ದಾರೆ.
ಇದೀಗ ನೀಲಾವರ ಮಹಿಷಮರ್ಧಿನಿ ದೇಗುಲದ ನೂತನ ರಥದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು,ಇದೇ ಫೆ.27 ರಂದು ದೇವಸ್ಥಾನದ ಪುರಪ್ರವೇಶ ಮಾಡಲಿದೆ.ಮಾರ್ಚ್ 10 ರಂದು ಶ್ರೀ ಮಹಿಷಮರ್ದಿನಿ ದೇವಿಯು ನೂತನ ರಥದ ಮೇಲೆ ಮೊದಲ ಬಾರಿಗೆ ಕುಳಿತು ಭಕ್ತರಿಗೆ ದರ್ಶನ ನೀಡಲಿದ್ದಾಳೆ. ವಿಶೇಷ ವಾಗಿ ನೂತನ ಬ್ರಹ್ಮರಥದ ರಥೋತ್ಸವ ನಡೆಯಲಿದ್ದು, ಇಂದೆಂದೂ ಕಂಡು ಕೇಳರಿಯದ ರೀತಿ ಮಹಿಷಮರ್ದಿನಿ ತಾಯಿ ನೂತನ ಬ್ರಹ್ಮರಥದಲ್ಲಿ ರಾರಾಜಿಸಲಿದ್ದಾಳೆ
ಇದನ್ನೂ ಓದಿ : Sri Mookambika Temple Kollur : ಕೊಲ್ಲೂರಿನ ಶ್ರೀ ಕ್ಷೇತ್ರ ಮೂಕಾಂಬಿಕೆಗೆ ನೂತನ ರಥ ಸಮರ್ಪಣೆ
ಇದನ್ನೂ ಓದಿ : Construction of a new chariot: 400 ವರ್ಷಗಳ ಬಳಿಕ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಹೊಸ ರಥ ನಿರ್ಮಾಣ
Entry of the new Brahmaratha: Entry of the new Brahmaratha to Mahishamardhini Sannidhana of Nilavara