ಕೋಟ : ಪ್ರವಾಸಿಗರ ನೆಚ್ಚಿನ ತಾಣವೆನಿಸಿರೋ ಉಡುಪಿ ಜಿಲ್ಲೆಯ ಸಾಲಿಗ್ರಾಮ ಸಮೀಪದಲ್ಲಿರುವ ಪಡುಕೆರೆ ಹಾಗೂ ಪಾರಂಪಳ್ಳಿ ಸಂಪರ್ಕ ಕಲ್ಪಿಸುವ ಮರದ ಸೇತುವೆ (Parampalli Wooden Bridge) ಕೊಚ್ಚಿ ಹೋಗುವ ಭೀತಿಯಲ್ಲಿದೆ. ಇದರಿಂದಾಗಿ ಪಡುಕೆರೆ ಹಾಗೂ ಪಾರಂಪಳ್ಳಿ ನಡುವಿನ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

ನಿನ್ನೆಯಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಾರಂಪಳ್ಳಿಯ ವುಡನ್ ಬ್ರಿಡ್ಜ್ ಪಕ್ಕದಲ್ಲಿ ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಆದರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಸೇತುವೆ ಪಕ್ಕದಲ್ಲಿ ನಿರ್ಮಾಣವಾಗಿದ್ದ ಮಣ್ಣಿನ ಸೇತುವೆ ಕಡಿದು ಹೋಗಿದ್ದು, ಪಕ್ಕದಲ್ಲಿಯೇ ಇರುವ ಮರದ ಸೇತುವೆಯೂ ಕೊಚ್ಚಿ ಹೋಗುವ ಸಾಧ್ಯತೆಯಿದೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಮರದ ಸೇತುವೆಯ ಪಕ್ಕದಲ್ಲಿ ಶಾಶ್ವತ ಸೇತುವೆ ನಿರ್ಮಾಣ ಮಾಡಬೇಕೆಂಬುದು ಇಲ್ಲಿನ ನಿವಾಸಿಗಳ ಬಹು ದಶಕದ ಬೇಡಿಕೆಯಾಗಿತ್ತು. ಕೊನೆಗೂ ಸರಕಾರ ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಇದೀಗ ಹೊಸ ಸೇತುವೆಯೊಂದನ್ನು ನಿರ್ಮಾಣ ಮಾಡಲು ಮುಂದಾಗಿದೆ. ಪಿಲ್ಲರ್ ಕಾರ್ಯಕ್ಕೆ ಈಗಾಗಲೇ ಪಕ್ಕದಲ್ಲಿ ನದಿಗೆ ಅಡ್ಡಲಾಗಿ ಮಣ್ಣಿನ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ ಭಾರೀ ಮಳೆಯಿಂದಾಗಿ ಇದೀಗ ಮಣ್ಣಿನ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದಾಗಿ ಪಕ್ಕದಲ್ಲಿರುವ ಮರದ ಸೇತುವೆ ಶಿಥಿಲವಾಗಿದ್ದು, ಭಾರಿ ಮಳೆಯಿಂದಾಗಿ ಕುಸಿಯುವ ಭೀತಿ ಎದುರಾಗಿದೆ.
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ :

ಪಡುಕೆರೆ ಹಾಗೂ ಪಾರಂಪಳ್ಳಿಯ ಗ್ರಾಮಸ್ಥರು ಮರದ ಸೇತುವೆಯ ಮೇಲೆ ಗ್ರಾಮಸ್ಥರು ನಡೆದಾದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ನಿತ್ಯವೂ ನೂರಾರು ಮಂದಿ ಇದೇ ಸೇತುವೆಯನ್ನೇ ಆಶ್ರಯಿಸಿದ್ದಾರೆ. ಈ ಹಿಂದೆ ಇದೇ ಮರದ ಸೇತುವೆ ಹಲವರನ್ನು ಬಲಿ ಪಡೆದಿದೆ. ಇದೀಗ ಮಳೆಯಿಂದಾಗಿ ಸೇತುವೆ ಕುಸಿತವಾದ್ರೆ ಅನಾಹುತ ಸಂಭವಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಐಪಿಎಲ್‌ನಲ್ಲಿ ಗಳಿಸಿದ ಅಷ್ಟೂ ದುಡ್ಡನ್ನು ತಂದೆಗೆ ಕೊಟ್ಟ ಮುಂಬೈ ಇಂಡಿಯನ್ಸ್ ಸ್ಟಾರ್
ಇದನ್ನೂ ಓದಿ : President Elections : ರಾಷ್ಟ್ರಪತಿ ಚುನಾವಣೆ; ಮುನ್ನಲೆಯಲ್ಲಿ ಸುಧಾಮೂರ್ತಿ ಹೆಸರು
ಇದನ್ನೂ ಓದಿ : South Indian Tourism: ಮಾನ್ಸೂನ್ ನಲ್ಲಿ ಮಿಸ್ ಮಾಡದೆ ಭೇಟಿ ನೀಡಬೇಕಾದ ಟಾಪ್ ಪ್ರವಾಸಿ ತಾಣಗಳು
Heavy rain Udupi collapse Parampalli Wooden Bridge