ಸೋಮವಾರ, ಏಪ್ರಿಲ್ 28, 2025
HomeCoastal NewsDoctor Maizy Fernandes : ವಾರಣಾಸಿ ಫಾರ್ಮ್‌ಹೌಸ್‌ ಕೆರೆಯಲ್ಲಿ ಮುಳುಗಿ ಮಂಗಳೂರಿನ ವೈದ್ಯೆ ಸಾವು

Doctor Maizy Fernandes : ವಾರಣಾಸಿ ಫಾರ್ಮ್‌ಹೌಸ್‌ ಕೆರೆಯಲ್ಲಿ ಮುಳುಗಿ ಮಂಗಳೂರಿನ ವೈದ್ಯೆ ಸಾವು

- Advertisement -

ಬಂಟ್ವಾಳ : ಕೆರೆಯಲ್ಲಿ ಈಜಲು ತೆರಳಿದ್ದ ಯುವ ವೈದ್ಯೆಯೋರ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ವಾರಣಾಸಿ ಫಾರ್ಮ್‌ ಹೌಸ್‌ನಲ್ಲಿ ನಡೆದಿದೆ.

ಮಂಗಳೂರಿನ ವೈದ್ಯೆ ಮೈಜಿ ಕರೋಲ್ ಫೆರ್ನಾಂಡೀಸ್ (31ವರ್ಷ) ಎಂಬವರೇ ಸಾವನ್ನಪ್ಪಿದವರು. ಮಂಗಳವಾರ ಸಂಜೆಯ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಇಂದು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಕೃಷಿ ಅದ್ಯಯನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಮೈಜಿ ಕರೋಲ್ ಫೆರ್ನಾಂಡೀಸ್ ಬಂಟ್ವಾಳ ತಾಲೂಕು ಕೇಪು ಗ್ರಾಮದ ವಾರಣಾಸಿ ಪಾರ್ಮ್ ಹೌಸ್ನಲ್ಲಿ ಅಧ್ಯಯನಕ್ಕೆಂದು ತೆರಳಿದ್ದರು. ಸಂಜೆ ಯಾರು ಇಲ್ಲದ ವೇಳೆಯಲ್ಲಿ ಫಾರ್ಮ್ ಹೌಸನಲ್ಲಿದ್ದ ಕೆರೆಯಲ್ಲಿ ಈಜಲು ತೆರಳಿದ್ದಾರೆ. ಈ ವೇಳೆಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ.

ಕೂಡಲೇ ಅವರನ್ನು ರಕ್ಷಿಸಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಆಸ್ಪತ್ರೆಯ ವೈದ್ಯರು ಈಕೆ ಸಾವನ್ನಪ್ಪಿರುವುದನ್ನು ತಿಳಿಸಿದ್ದಾರೆ.

ಮೈಜಿ ಕರೋಲ್ ಫೆರ್ನಾಂಡೀಸ್ ಸಾವಿನ ಕುರಿತು ವಿಟ್ಲ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದರು ತನಿಖೆಯನ್ನು ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರಷ್ಟೇ ಸತ್ಯಾಂತ ಹೊರಬರಬೇಕಾಗಿದೆ.

ಇದನ್ನೂ ಓದಿ : Nipah Virus : ಮಂಗಳೂರು ಯುವಕನ ನಿಫಾ ವೈರಸ್‌ ವರದಿ ನೆಗೆಟಿವ್

ಇದನ್ನೂ ಓದಿ : ಮಂಗಳೂರಿಗರೇ ಎಚ್ಚರ ! ಹಾಡುಹಗಲೇ ದರೋಡೆಕೋರರನ್ನು ಹೊಡೆದು ಓಡಿಸಿದ ಧೀರ ಮಹಿಳೆ

( Mangalore 32-year-old doctor Maizy Fernandes falls into pond, loses life at Varanasi Park near Bantwal )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular