ಸೋಮವಾರ, ಏಪ್ರಿಲ್ 28, 2025
HomeCoastal Newsಮಂಗಳೂರು ಡಯಟ್‌ನಲ್ಲಿ ತಲವಾರು ದಾಳಿ : ಆರೋಪಿ ಕುಂದಾಪುರದ ನವೀನ್‌ ಅರೆಸ್ಟ್‌

ಮಂಗಳೂರು ಡಯಟ್‌ನಲ್ಲಿ ತಲವಾರು ದಾಳಿ : ಆರೋಪಿ ಕುಂದಾಪುರದ ನವೀನ್‌ ಅರೆಸ್ಟ್‌

- Advertisement -

ಮಂಗಳೂರು : ಶಿಕ್ಷಕರ ತರಬೇತಿ ಕೇಂದ್ರ (ಡಯಟ್‌)ದಲ್ಲಿ ಮಾರಕಾಸ್ತ್ರದಿಂದ ಮೂವರು ಸಿಬ್ಬಂದಿಗಳ ಮೇಲೆ ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರದ ನಿವಾಸಿ ನವೀನ್‌ ಎಂಬಾತನೇ ಬಂದಿತ ಆರೋಪಿಯಾಗಿದ್ದ. ಈತ ಕುಂದಾಪುರ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ12.45ರ ಸುಮಾರಿಗೆ ಪ್ರಾಧ್ಯಾಪಕಿಯೋರ್ವರಿಗೆ ಗಿಫ್ಟ್‌ ನೀಡುವ ನೆಪದಲ್ಲಿ ಮಂಗಳೂರು ನಗರದ ಜೈಲು ರಸ್ತೆಯಲ್ಲಿರುವ ಶಿಕ್ಷಕರ ತರಬೇತಿ ಕೇಂದ್ರಕ್ಕೆ ವ್ಯಕ್ತಿಯೋರ್ವ ಬಂದಿದ್ದಾನೆ.

ಹೀಗೆ ಬಂದವನೇ ತನ್ನ ಬಳಿಯಲ್ಲಿದ್ದ ತಲವಾರಿನಿಂದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಮೂವರು ಮಹಿಳಾ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಬ್ಬಂದಿ ಮೇಲೆ ದಾಳಿ ನಡೆಸಿದ ನಂತರ ಮಚ್ಚು ಹಿಡಿದು ಹೊರಗೆ ನಡೆದಿದ್ದಾನೆ. ಈ ವೇಳೆಯಲ್ಲಿ ಜೈಲು ಸಿಬ್ಬಂದಿಗಳು ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೀಗ ನವೀನ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ನವೀನ್‌ ಈ ಹಿಂದೆ ಇದೇ ಸಂಸ್ಥೆಯ ಹಳೆ ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದ. ಆತ ಯಾವ ಕಾರಣಕ್ಕೆ ಈ ಕೃತ್ಯವನ್ನು ಎಸಗಿದ್ದಾನೆ ಅನ್ನೋ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಎನ್.‌ ಶಶಿಕುಮಾರ್‌ ಅವರು ತಿಳಿಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆಯೇ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಘಟನಾ ಸ್ಥಳಕ್ಕೆ ಭೇಟಿದ್ದಾರೆ. ಘಟನೆಯ ಕುರಿತು ಬರ್ಕೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಶಿಕ್ಷಕ ತರಬೇತಿ ಕೇಂದ್ರದಲ್ಲಿ ತಲ್ವಾರ್‌ ದಾಳಿ : ಮೂವರು ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : ನನ್ನಪ್ಪ ಕಾಮುಕ, ಕುಡುಕ, ಸಹೋದರಿಯರ ಬಾಳು ಹಾಳು ಮಾಡಿದ : ಮಧುಸಾಗರ್‌ ಗಂಭೀರ ಆರೋಪ

(Kundapura Naveen Arrest from Mangalore police, Teachers Training center Attack case

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular