ಸೋಮವಾರ, ಏಪ್ರಿಲ್ 28, 2025
HomeCoastal NewsMangaluru student died: ಆಟೋ ಚಾಲಕನ ನಿರ್ಲಕ್ಷ್ಯ: ಜೀವ ಕಳೆದುಕೊಂಡ ವಿದ್ಯಾರ್ಥಿ

Mangaluru student died: ಆಟೋ ಚಾಲಕನ ನಿರ್ಲಕ್ಷ್ಯ: ಜೀವ ಕಳೆದುಕೊಂಡ ವಿದ್ಯಾರ್ಥಿ

- Advertisement -

ಮಂಗಳೂರು: (Mangaluru student died) ಆಟೋ ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಮಧ್ಯದಲ್ಲೇ ಆಟೋ ವನ್ನು ಯುಟರ್ನ್‌ ತೆಗೆದುಕೊಂಡ ಪರಿಣಾಮ ಬೈಕ್‌ ನಲ್ಲಿ ಬರುತ್ತಿದ್ದ ವಿದ್ಯಾರ್ಥಿಯೋರ್ವ ಆಟೋಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ಬಿಜೈ ನಲ್ಲಿ ನಡೆದಿದೆ. ನಗರದ ಎಸ್‌ ಡಿ ಎಂ ಕಾಲೇಜಿನಲ್ಲಿ ಬಿಬಿಎಂ ತೃತಿಯ ವರ್ಷದ ವಿದ್ಯಾರ್ಥಿಯಾಗಿದ್ದ ಬಿಜೈ ನಿವಾಸಿ ಕವನ್‌ ಆಳ್ವ (20 ವರ್ಷ) ಮೃತ ಯುವಕ.

ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಆಟೋ ಚಾಲಕ ನಿರ್ಲಕ್ಷ್ಯದಿಂದ ರಸ್ತೆ ಮಧ್ಯದಲ್ಲಿಯೇ ಆಟೋವನ್ನು ಯುಟರ್ನ್‌ ತೆಗೆದುಕೊಂಡಿದ್ದು, ಈ ವೇಳೆ ಆಟೋ ಮುಂದಿನಿಂದ ಕಾಲೇಜು ಮುಗಿಸಿ ಬರುತ್ತಿದ್ದ ಕವನ್‌ ಬೈಕ್‌ ನ ನಿಯಂತ್ರಣ ಕಳೆದುಕೊಂಡು ಆಟೋಗೆ ಢಿಕ್ಕಿ ಹೊಡೆದಿದ್ದಾನೆ. ನಂತರ ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದ್ದಾನೆ.

ಪರಿಣಾಮ ಹೆಲ್ಮೇಟ್‌ ಧರಿಸದೇ ಬೈಕ್‌ ಓಡಿಸತಿದ್ದ ಕವನ್‌ನ ತಲೆಯ ಭಾಗ ನೇರವಾಗಿ ಮರಕ್ಕೆ ಬಡಿದಿದ್ದು, ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಾದಕ ವಸ್ತು ಸೇವನೆಯ ವಿವಾದ: ಮಹಿಳೆಗೆ ಬೆಂಕಿ ಹಚ್ಚಿ ಕೊಲೆ: ಆರೋಪಿ ಅರೆಸ್ಟ್‌

ನವದೆಹಲಿ: ಮಾದಕ ವಸ್ತು ಸೇವನೆಯ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಲಿವ್‌ ಇನ್‌ ಸಂಗಾತಿ ಬೆಂಕಿ ಹಚ್ಚಿ ಕೊಂದ‍ ಘಟನೆ ದೆಹಲಿ ಅಮನ್‌ ವಿಹಾರ್‌ನಲ್ಲಿ ನಲ್ಲಿ ನಡೆದಿದೆ. ಮೃತರನ್ನು ವಾಯುವ್ಯ ದೆಹಲಿಯ ಬಲ್ಬೀರ್ ವಿಹಾರ್ ನಿವಾಸಿ ಎಂದು ಗುರುತಿಸಲಾಗಿದ್ದು, ಪಾದರಕ್ಷೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆ ತನ್ನ ಪತಿಯನ್ನು ತೊರೆದು ಕಳೆದ ಆರು ವರ್ಷಗಳಿಂದ ಆರೋಪಿ ಮೋಹಿತ್‌ನೊಂದಿಗೆ ವಾಸಿಸುತ್ತಿದ್ದಳು. ಆಕೆಗೆ ಇಬ್ಬರು ಮಕ್ಕಳಿದ್ದರು. ಫೆಬ್ರವರಿ 10 ರಂದು ರಾತ್ರಿ ಮೋಹಿತ್ ತನ್ನ ಸ್ನೇಹಿತನ ಜೊತೆ ಡ್ರಗ್ಸ್ ಸೇವಿಸುತ್ತಿರುವುದನ್ನು ಕಂಡು ಮಹಿಳೆ ಆತನೊಂದಿಗೆ ಜಗಳವಾಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರಿಂದ ಕುಪಿತಗೊಂಡ ಆರೋಪಿ ಆಕೆಯ ಮೇಲೆ ‘ಟಾರ್ಪಿನ್ ಆಯಿಲ್’ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯಲ್ಲಿ ಬೆಂದು ಹೋಗಿದ್ದ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ : Ayushman Bharat scheme scam: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಂಚನೆ: 13 ಆಸ್ಪತ್ರೆಗಳ ವಿರುದ್ಧ ಕ್ರಮ

Mangaluru student died: Auto driver’s negligence: Student lost his life

RELATED ARTICLES

Most Popular