ಭಾನುವಾರ, ಏಪ್ರಿಲ್ 27, 2025
HomeCoastal NewsMuniyalu Uday Kumar Shetty : ಕಾರ್ಕಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುನಿಯಾಲು ಉದಯ್‌ ಕುಮಾರ್‌...

Muniyalu Uday Kumar Shetty : ಕಾರ್ಕಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ನಾಮಪತ್ರ ಸಲ್ಲಿಕೆ

- Advertisement -

ಕಾರ್ಕಳ : (Muniyalu Uday Kumar Shetty) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾರ್ಕಳ ಕ್ಷೇತ್ರದ ಹಿಂದುತ್ವವಾದಿ ಗುತ್ತಿಗೆದಾರ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಕೇವಲ ಕಾಂಗ್ರೆಸ್‌ ಮಾತ್ರವಲ್ಲ ಇಡೀ ಕಾರ್ಕಳದಲ್ಲೇ ಪ್ರಬಲ ಬಂಟ ನಾಯಕ ಎನಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ಸದ್ಯ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಈ ಬಾರಿ ಕಾಂಗ್ರೆಸ್‌ ಹಿಂದುತ್ವಕ್ಕೆ ಆದ್ಯತೆ ನೀಡಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ಟಿಕೇಟ್ ನೀಡಿದೆ. ಈ ಮೂಲಕ ಹಿಂದುತ್ವದ ಕಣವಾಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಾಪ್ಟ್ ಹಿಂದುತ್ವಕ್ಕೆ ಮಣೆ ಹಾಕಿದೆ. ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಈ ಮೊದಲು ಕಾಂಗ್ರೆಸ್‌ ನ ಜಿಲ್ಲಾ ಉಪಾಧ್ಯಕ್ಷರಾಗಿದ್ದರು.

ಯಶಸ್ವಿ ಉದ್ಯಮಿಯಾದ ಉದಯ್ ಕುಮಾರ್ ಶೆಟ್ಟಿ ಅವರು ಕಾರ್ಕಳ ಹೆಬ್ರಿ ಭಾಗದ ಸಾವಿರಾರು ಜನರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಕಾರ್ಕಳ ಪ್ರದೇಶದಾದ್ಯಂತ ಅವರು ಹಲವಾರು ಸಾಮಾಜಿಕ ಚಟುವಟಿಕೆಗಳು, ಧಾರ್ಮಿಕ ಸೇವೆಗಳು ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆ ಮನೆಗೆ ಕಾಂಗ್ರೇಸ್ ಕಾರ್ಯಕ್ರಮದ ಮೂಲಕ ಪ್ರತಿ ಮನೆ ಮನೆಗೂ ಕಾಂಗ್ರೇಸ್ ಪಕ್ಷದ ಕೆಲಸಗಳನ್ನು ತಲುಪಿಸುವ ಮೂಲಕ ತಳ ಮಟ್ಟದ ಕಾರ್ಯಕರ್ತರವರನ್ನು,ಮತದಾರರನ್ನು ತಲುಪಿದ ಹೆಗ್ಗಳಿಕೆಗೆ ಪಾತ್ರರಾದವರಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳಾದ ಕೀರ್ತಿ ಮೊಯಿಲಿ ಭಂಡಾರಿಯ ನಂತರ ಅದು ಉದಯ್ ಶೆಟ್ಟಿ ಎಂದರೆ ತಪ್ಪಾಗಲಾರದು. ಸುನೀಲ್ ಕುಮಾರ್ ಹೊಡೆತಕ್ಕೆ ನಲುಗಿದ್ದ ಕಾಂಗ್ರೆಸ್ ನಲ್ಲಿ ಮತ್ತೆ ಚೈತನ್ಯ ತುಂಬಿಸಿದ್ದು ಉದಯ್ ಕುಮಾರ್ ಶೆಟ್ಟಿ.

ಇದನ್ನೂ ಓದಿ : ಕಾಪು ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ನಾಮಪತ್ರ ಸಲ್ಲಿಕೆ

2018 ರ ಚುನಾವಣೆಯಲ್ಲಿ ವೈಯಕ್ತಿಕ ವರ್ಚಸ್ಸಿನ ಉದ್ಯಮಿ ಆಗಿರುವ ಉದಯ್‌ ಕುಮಾರ್‌ ಶೆಟ್ಟಿ ಅವರಿಗೆ ಟಿಕೆಟ್‌ ಕೈ ತಪ್ಪಿದ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದರು. ನಂತರದಲ್ಲಿ ಕಾಂಗ್ರೆಸ್‌ ಸಂಘಟನೆಯ ಕಾರ್ಯದಲ್ಲಿ ಕ್ರಿಯಾಶೀಲತೆ ಇಲ್ಲದ ಕಾರಣ ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದರು. ಈ ನಡುವೆ ಬಿಜೆಪಿ ಕೂಡ ಮುನಿಯಾಲು ಅವರನ್ನು ತನ್ನ ಪಕ್ಷಕ್ಕೆ ಸೆಳೆಯಲು ಪ್ರಯತ್ನ ಪಟ್ಟಿದ್ದು, ಇದಕ್ಕೆ ಒಪ್ಪದ ಮುನಿಯಾಲು ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಆದರೆ ಈ ಬಾರಿ ಕಾಂಗ್ರೆಸ್‌ ನಿಂದಲೇ ಎಮ್‌ ಎಲ್‌ ಎ ಸ್ಥಾನಕ್ಕೆ ಕಣಕ್ಕಿಳಿದಿದ್ದು, ಇದು ಅವರ ಮೊದಲ ವಿಧಾನಸಭಾ ಚುನಾವಣೆಯಾಗಿದೆ.

Muniyalu Uday Kumar Shetty: Congress candidate for Karkala Constituency Muniyalu Uday Kumar Shetty has submitted nomination papers.

RELATED ARTICLES

Most Popular