ಉಡುಪಿ: (Power cuts in udupi) ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯದ ಕಾರಣದಿಂದಾಗಿ ಜನವರಿ 3 ರಂದು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಪ್ರದೇಶಗಳು ಈ ಕೆಳಗಿನಂತಿವೆ.
220/110/11 ಕೆವಿ ಕೇಮಾರ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಫೀಡರ್ , 110 ಕೇವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11 ಕೆವಿ ಪದವು ಫೀಡರ್ ಹಾಗೂ 110 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಕಾರಣದಿಂದಾಗಿ ನಿಟ್ಟೆ, ನಿಟ್ಟೆ ಕಾಲೇಜು, ಬೋರ್ಗಲ್ ಗುಡ್ಡೆ, ಹಾಮಾಜೆ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯತ್, ಲೆಮಿನಾ ಇಂಡಸ್ಟ್ರೀಸ್, ದೂಪದಕಟ್ಟೆ, ಕೆಮ್ಮಣ್ಣು, ಗುಂಡ್ಯಡ್ಕ, ಕಲ್ಲಂಬಾಡಿ, ಪದವು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಬೆಳ್ಮಣ್, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಅಂಬರಾಡಿ, ಬೋಳ, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರೆಬೈಲು, ಪುಕ್ಕಲ್ಲು, ಕೆಂಪುಜೋರ, ಮಾವಿನಕಟ್ಟೆ, ದೇಂದೊಟ್ಟು ಪದವು, ಕೊರಜೆ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಜಾರಿಗೆಕಟ್ಟೆ, ಪರಪ್ಪಾಡಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ(Power cuts in udupi)ವಾಗಲಿದೆ.
ಶಿರ್ವ ವಿದ್ಯುತ್ ಉಪಕೇಂದ್ರದ ಬಂಟಕಲ್ಲು ಗ್ರಾಮ, ಪೊಲಿಪು ಗ್ರಾಮ, ಮೂಡಬೆಟ್ಟು, ಗ್ರಾಮ, ಪಾಂಗಳ ಗ್ರಾಮ, ಶಿರ್ವ, ಶಂಕರಪುರ, ಕುರ್ಕಾಲು, ಇನ್ನಂಜೆ, ಕಳತ್ತೂರು, ಪಣಿಯೂರು, ಉಚ್ಚಿಲ, ಮೂಳೂರು, ಬೆಳಪು, ಮಲ್ಲಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವೆರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power cuts in udupi) ಉಂಟಾಗಲಿದೆ.
110/33/11 ಕೆವಿ ಮಣಿಪಾಲ್ ವಿದ್ಯುತ್ ಉಪಕೇಂದ್ರ, 110/33/11 ಕೆವಿ ಹಿರಿಯಡ್ಕ ಉಪಕೇಂದ್ರದ ಹಿರಿಯಡ್ಕ, ಪೇರ್ಡೂರು, ಹಿರೇಬೆಟ್ಟು, ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾ, ಈಶ್ವರನಗರ, ಸರಳೇಬೆಟ್ಟು, ಅರ್ಬಿ, ಪ್ರಗತಿನಗರ, ಬಡಗುತೆಟ್ಟು, ಮಣಿಪಾಲ ಟೌನ್, ಮಣಿಪಾಲ ಮೀಡಿಯಾ ನೆಟ್ವರ್ಕ್, ಪಾಪುಜೆ, ಬಜೆ, ಪುತ್ತಿಗೆ, ಪಕ್ಕಾಲು, ಮತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ, ಗುಡ್ಡೆಯಂಗಡಿ, ಕೊಂಡಾಡಿ, ಕೋಡಿಬೆಟ್ಟು, ಪೆರ್ಣಂಕಿಲ, ಕಣಂಜಾರು, ಕಾಜರಗುತ್ತು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ : Heart attack-soldier death: ರಜೆಗೆಂದು ಊರಿಗೆ ಬಂದಿದ್ದ ಸೇನಾ ಯೋಧ ಹೃದಯಾಘಾತದಿಂದ ಸಾವು
110/33/11 ಕೆವಿ ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಅಂಪಾರು, ಹಳ್ನಾಡು, ಕಾವ್ರಾಡಿ ಶಂಕರನಾರಾಯಣ, ಕೋಣಿ, ಬಳ್ಕೂರು, ಕಂಡ್ಲೂರು, ಮೂಡ್ಲಕಟ್ಟೆ, ಕುಂದಾಪುರ ಪುರಸಭೆ, ಬಸ್ರೂರು, ಆನಗಳ್ಳಿ, ಕಂದಾವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Mescom said in a release that there will be disruption in power supply in many areas of the district on January 3 due to power maintenance work in Udupi district.