ಮಂಗಳವಾರ, ಏಪ್ರಿಲ್ 29, 2025
HomeCoastal NewsSEIKO KAI KARATE INTERNATIONAL 2023: ಕುಂದಾಪುರದ ಶ್ರೀಶ ಗುಡ್ರಿಗೆ ಚಿನ್ನದ ಪದಕ

SEIKO KAI KARATE INTERNATIONAL 2023: ಕುಂದಾಪುರದ ಶ್ರೀಶ ಗುಡ್ರಿಗೆ ಚಿನ್ನದ ಪದಕ

- Advertisement -

ಉಡುಪಿ : ನಮ್ಮೂರ ಪ್ರತಿಭೆಯಾದ ಶ್ರೀಶ ಗುಡ್ರಿ (Shreesha Gundri) ಇವರು “ಸೀಕೊ ಕೈ ಕರಾಟೆ ಇಂಟರ್ನ್ಯಾಷನಲ್, ಇಂಡಿಯಾ ಮತ್ತು ಭಾರತ್ ಕರಾಟೆ ಅಕಾಡೆಮಿ” (SEIKO KAl KARATE NTERNATIONAL, INDIA & BHARAT KARATE ACADEMY) ಇವರ ಸಂಯೋಜನೆಯಲ್ಲಿ ನಡೆಸಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗೆದ್ದು ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ. ಪ್ರತಿಯೊಂದು ಮಗುವಿನಲ್ಲೂ ವಿಶೇಷವಾದ ಪ್ರತಿಭೆ ಅಡಗಿರುತ್ತದೆ. ಆ ಮಗುವಿಗೆ ಸರಿಯಾದ ಸಮಯದಲ್ಲಿ ತರಬೇತಿ ಪ್ರೋತ್ಸಾಹ ನೀಡುವ ಪೋಷಕರು ಹಾಗೂ ಗುರು ಇದ್ದರೆ ಸಾಧನೆ ಮೆಟ್ಟಿಲುಗಳನ್ನು ಏರಲು ಸುಲಭ ಎನ್ನುವುದಕ್ಕೆ ಇದೇ ಸಾಕ್ಷಿ.

ಕುಂದಾಪುರ ವಂಡ್ಸೆ ನಿವಾಸಿ ಹೇಮಾ ಸಂತೋಷ್‌ ಅವರ ಸುಪುತ್ರ ಶ್ರೀಶ ಗುಡ್ರಿ ಈ ಸಾಧನೆಗೆ ಭಾಜನರಾಗಿದ್ದಾರೆ. ಶ್ರೀಶ ಗುಡ್ರಿ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವ೦ಡ್ಸೇಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಶ್ರೀಶ ಗುಡ್ರಿ ಅವರು ಶೈಕ್ಷಣಿಕವಾಗಿಯೂ ಬಹಳಷ್ಟು ಚುರುಕಾಗಿದ್ದು, ಓದಿನ ಜೊತೆ ಜೊತೆಯಲ್ಲಿ ಕರಾಟೆಯನ್ನು ಕಲಿಯುತ್ತಿದ್ದಾರೆ. ಗ್ರಾಮೀಣ ಪ್ರತಿಭೆಯಾದ ಶ್ರೀಶ ಗುಡ್ರಿ ಅವರು ಫೀನಿಕ್ಸ್ ಅಕಾಡೆಮಿ ಇಂಡಿಯಾ (Phoenix Academy India) ಇದರ ಮುಖ್ಯಸ್ಥ ಶಿಹಾನ್ ಕೀರ್ತಿ ಜಿಕೆ ಇವರ ಶಿಷ್ಯ ಕೋಚ್ ಅಕ್ಷಯ್ ಹೆಮ್ಮಾಡಿ ಇವರಲ್ಲಿ ತರಬೇತಿ ಪಡಯುತ್ತಿದ್ದಾರೆ. ಇದನ್ನೂ ಓದಿ : Udupi power cut : ಆಗಸ್ಟ್‌ 16, 17 ರಂದು ಉಡುಪಿ ಜಿಲ್ಲೆಯ ಹಲವಡೆ ವಿದ್ಯುತ್ ವ್ಯತ್ಯಯ

ಆಗಸ್ಟ್ 11 ರಿಂದ 13ರವರೆಗೆ ತಾಲ್ಕಟೋರ ಒಳಾಂಗಣ ಕ್ರೀಡಾಂಗಣ ದೆಹಲಿಯಲ್ಲಿ “ಸೀಕೊ ಕಲ್ ಕರಾಟೆ ಇಂಟರ್ನ್ಯಾಷನಲ್, ಇಂಡಿಯಾ ಮತ್ತು ಭಾರತ್ ಕರಾಟೆ ಅಕಾಡೆಮಿ” ಇವರ ಸಂಯೋಜನೆಯಲ್ಲಿ ನಡೆಸಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಮ್ಮೂರ ಪ್ರತಿಭೆಯಾದ ಶ್ರೀಶ ಗುಡ್ರಿ ಇವರು ಭಾಗವಹಿಸಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗೆದ್ದು ನಮ್ಮೂರಿಗೆ ಬಹಳ ದೊಡ್ಡ ಮಟ್ಟದ ಕೀರ್ತಿ ತಂದಿದ್ದು, ಹುಟ್ಟೂರಿನ ಜನರು, ಕುಟುಂಬಸ್ಥರು ಹಾಗೂ ಗುರುಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Sreesha Gundri: Seiko Kai Karate International: Gold Medal for Sreesha Gundri of Kundapur

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular