ಮಂಗಳೂರು : remove the rakhi : ಹಿಂದೂ ಧರ್ಮದಲ್ಲಿ ಬರುವ ಪ್ರತಿಯೊಂದು ಹಬ್ಬಗಳಿಗೂ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ರಕ್ಷಾ ಬಂಧನವಂತೂ ಸಹೋದರ ಹಾಗೂ ಸಹೋದರಿಯ ನಡುವಿನ ಬಾಂಧವ್ಯವನ್ನು ಸಾರುವ ಹಬ್ಬವಾಗಿ ಆಚರಿಸಲಾಗುತ್ತದೆ. ಸಹೋದರಿಗೆ ರಾಖಿಯನ್ನು ಕಟ್ಟಿ ಸಹೋದರಿಯು ಆತನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರೆ ಸಹೋದರನು ಸಹೋದರಿಗೆ ಜೀವಮಾನಪೂರ್ತಿ ರಕ್ಷಣೆ ನೀಡುವ ಭರವಸೆ ನೀಡುತ್ತಾನೆ.
ಇಷ್ಟೊಂದು ವಿಶಾಲಾರ್ಥವನ್ನು ಹೊಂದಿರುವ ರಕ್ಷಾ ಬಂಧನದ ಹಬ್ಬಕ್ಕೆ ಮಂಗಳೂರಿನ ಹೊರ ವಲಯದಲ್ಲಿರುವ ಕಾಟಿಪಳ್ಳದ ಇನ್ಫ್ಯಾಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಪಮಾನವೆಸಗಲಾಗಿದೆ. ಶಾಲೆಗೆ ರಾಖಿಯನ್ನು ಕಟ್ಟಿಕೊಂಡು ಬಂದಿದ್ದ ವಿದ್ಯಾರ್ಥಿಗಳಿಗೆ ರಾಖಿ ಕಳಚಿಟ್ಟು ತರಗತಿಗೆ ಪ್ರವೇಶಿಸುವಂತೆ ಶಾಲಾ ಶಿಕ್ಷಕಿ ತಾಕೀತು ನೀಡಿದ್ದಾರೆ.
ಶಿಕ್ಷಕಿಯ ಈ ನಡವಳಿಕೆಯು ಪೋಷಕರಲ್ಲಿ ತೀವ್ರ ಆಕ್ರೋಶವನ್ನು ಉಂಟು ಮಾಡಿದೆ. ವಿದ್ಯಾರ್ಥಿಗಳ ಜೊತೆಯಲ್ಲಿ ಶಾಲೆಗೆ ಆಗಮಿಸಿದ ಪೋಷಕರು ಶಿಕ್ಷಕಿಯ ಬೇಜವಾಬ್ದಾರಿ ನಡೆಯ ಕುರಿತಂತೆ ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಪೋಷಕರು ಶಾಲೆಗೆ ಮುತ್ತಿಗೆ ಹಾಕುತ್ತಿದ್ದಂತೆಯೇ ತಪ್ಪಿನ ಅರಿವು ಮಾಡಿಕೊಂಡು ಶಿಕ್ಷಕಿಯು ಪೋಷಕರ ಎದುರು ಕ್ಷಮೆಯಾಚಿಸಿದ್ದಾರೆ.
ಶಿಕ್ಷಕಿ ಹಾಗೂ ಶಾಲೆಯ ಫಾಧರ್ಗೆ ರಕ್ಷಾ ಬಂಧನದ ಹಿಂದಿನ ಸಂದೇಶವೇನು ಎಂಬುದನ್ನು ತಿಳಿಸಿದ ಪೋಷಕರು ಪ್ರೌಢ ಶಾಲೆಯ ಫಾದರ್ ಕೈಗೆ ರಾಖಿ ಕಟ್ಟಿಸಿದ್ದಾರೆ. ಪೋಷಕರು ಹಾಗೂ ಶಿಕ್ಷಕರ ನಡುವಿನ ಗಲಾಟೆಯನ್ನು ಸಂಧಾನ ಮಾಡಲು ಸುರತ್ಕಲ್ನ ಪೊಲೀಸರು ಕೂಡ ಶಾಲೆಗೆ ಆಗಮಿಸಿದ್ದರು. ಸುರತ್ಕಲ್ ಪೊಲೀಸರ ಮಧ್ಯ ಪ್ರವೇಶದ ಬಳಿಕ ಪೋಷಕರು ಹಾಗೂ ಶಿಕ್ಷಕರ ನಡುವಿನ ಗಲಾಟೆ ಸುಖಾಂತ್ಯ ಕಂಡಿದೆ.
ಇದನ್ನು ಓದಿ : VHP request to stop DJ : ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿಜೆಗೆ ಬ್ರೇಕ್ ಹಾಕುವಂತೆ ವಿಹೆಚ್ಪಿ ಮನವಿ
ಇದನ್ನೂ ಓದಿ : Tourists banned from going to sea : ಪ್ರವಾಸಿಗರ ಗಮನಕ್ಕೆ : ಕಡಲ ನಗರಿಯಲ್ಲಿ ಬೀಚ್ಗೆ ತೆರಳಲು ನಿರ್ಬಂಧ
The teacher asked the students to remove the rakhi from the hands of the students