ಉಡುಪಿ : ತಾವು ಪೊಲೀಸರು ಅಂತಾ ಸುಳ್ಳು ಹೇಳಿ ಮಹಿಳೆಯರನ್ನು ನಂಬಿಸಿ ದರೋಡೆ ನಡೆಸುತ್ತಿದ್ದ ಇರಾನಿ ಗ್ಯಾಂಗಿನ ನಾಲ್ವರು ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಕೀರ್ ಹುಸೇನ್ ( 26ವರ್ಷ ),ಕಂಬರ್ ರಹೀಂ ಮಿರ್ಜಾ, (32ವರ್ಷ), ಅಕ್ಷಯ್ ಸಂಜಯ್ ಗೋಸ್ವಾಮಿ( 22 ವರ್ಷ), ಶಾಹರುಖ್ ಬಂದೆನವಾಜ್ ಶೇಖ್ (24ವರ್ಷ) ಬಂಧಿತ ಆರೋಪಿಗಳು.

ರಸ್ತೆಯಲ್ಲಿ ಜನರನ್ನು ಅಡ್ಡಗಟ್ಟುತ್ತಿದ್ದ ಈ ಗ್ಯಾಂಗ್ ಮುಂದೆ ಗಲಾಟೆಯಾಗಿದೆ. ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ. ತಮ್ಮ ಬಳಿಯಲ್ಲಿದ್ದ ಬ್ಯಾಗಿನಲ್ಲಿ ಚಿನ್ನಾಭರಣಗಳನ್ನು ಹಾಕುತ್ತಿದ್ದರು. ನಂತರ ಅವರಿಗೆ ಗೊತ್ತೇ ಆಗದಂತೆ ಚಿನ್ನಾಭರಣ ಗಳೊಂದಿಗೆ ಪರಾರಿಯಾಗುತ್ತಿದ್ದರು.

ವಯಸ್ಸಾದ ಒಂಟಿ ಮಹಿಳೆಯರು, ಗಂಡಸರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದರು. ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿಯೂ ಈ ಗ್ಯಾಂಗ್ ದರೋಡೆಯನ್ನು ನಡೆಸಿದೆ. ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಈ ಗ್ಯಾಂಗ್ ದರೋಡೆ ಯನ್ನು ನಡೆಸಿದೆ.

ಇರಾನಿ ಗ್ಯಾಂಗಿನ ಕಳ್ಳರನ್ನು ಬಂಧಿಸಿದಾಗ ಆರೋಪಿಗಳು ಉಡುಪಿ ನಗರ, ಕುಂದಾಪುರದಲ್ಲಿಯೂ ಕಳ್ಳತನ ಮಾಡಿರುವುದನ್ನು ಒಪ್ಪಿ ಕೊಂಡಿದ್ದಾರೆ. ಅಲ್ಲದೇ ವಿಜಯಪುರದಲ್ಲಿ 4 ಕಡೆ, ಬಂಟ್ವಾಳ, ಮಂಗಳೂರಿನ ಉರ್ವಾ ಹಾಗೂ ಚಿಕ್ಕಮಗಳೂರು ನಗರದಲ್ಲಿ ಒಂದೊಂದು ಬಾರಿ ಕಳ್ಳತನ ಮಾಡಿದ್ದಾರೆ.