ಭಾನುವಾರ, ಏಪ್ರಿಲ್ 27, 2025
HomeCoastal Newsಕರಾವಳಿಯಲ್ಲಿ ಕೆಮಿಕಲ್‌ ಮರವಾಯಿ : ತಿಂದವರಿಗೆ ವಾಂತಿ, ಬೇಧಿ ಫಿಕ್ಸ್‌, ತಿನ್ನುವ ಮುನ್ನ ಹುಷಾರ್‌ !

ಕರಾವಳಿಯಲ್ಲಿ ಕೆಮಿಕಲ್‌ ಮರವಾಯಿ : ತಿಂದವರಿಗೆ ವಾಂತಿ, ಬೇಧಿ ಫಿಕ್ಸ್‌, ತಿನ್ನುವ ಮುನ್ನ ಹುಷಾರ್‌ !

- Advertisement -

ಕುಂದಾಪುರ : Chemical Clams Marvai : ಕಳೆದ ಎರಡು ಮೂರು ವರ್ಷಗಳ ಹಿಂದೆ ಮೀನುಗಳು ಹಾಳಾಗದಂತೆ ಕೆಮಿಕಲ್‌ ಬಳಸುತ್ತಾರೆ ಅನ್ನೋ ಆರೋಪ ಕೇಳಿಬಂದಿತ್ತು. ಇದು ರಾಜ್ಯದಾದ್ಯಂತ ದೊಡ್ಡಮಟ್ಟದ ಚರ್ಚೆಗೂ ಕಾರಣವಾಗಿತ್ತು. ಆದ್ರೀಗ ಕೆಮಿಕಲ್‌ ಮರವಾಯಿ ಕರಾವಳಿ ಮಾರುಕಟ್ಟೆಗೆ ಬಂದಿದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಯಾಕೆಂದ್ರೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಆಲೂರು ಸುತ್ತಮುತ್ತಲಿನ ಭಾಗಗಳಲ್ಲಿ ಮರವಾಯಿ ಪದಾರ್ಥ ತಿಂದ ಕೆಲವರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಇದರಿಂದಾಗಿ ಜನರು ಮರವಾಯಿ ತಿನ್ನಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಕುಂದಾಪುರ ತಾಲೂಕಿನ ಹಲವು ಕಡೆಗಳಲ್ಲಿ ಮರವಾಯಿ ತಿಂದ ಜನರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದ್ದು ಕೆಲವರು ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಕುಂದಾಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಆಗಿದ್ದಾರೆ. ಕಳೆದ ಮಳೆಗಾಲದ ಆರಂಭದಲ್ಲಿಯೂ ಇದೇ ರೀತಿ ಮರವಾಯಿ ತಿಂದ ಕುಂದಾಪುರ ಬಹುತೇಕ ಜನರಿಗೆ ವಾಂತಿ, ಬೇಧಿ ಸೇರಿದಂತೆ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಅದ್ರಲ್ಲೂ ಮಕ್ಕಳ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ.

ಇದನ್ನೂ ಓದಿ : Heavy Rain School Holiday : ಕರಾವಳಿಯಲ್ಲಿ ಆರಿದ್ರಾ ಮಳೆಯ ಆರ್ಭಟ : ಉಡುಪಿ, ದಕ, ಉಕ ಜಿಲ್ಲೆಯಲ್ಲಿ ಶಾಲೆಗೆ ರಜೆ

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕರಾವಳಿಯಲ್ಲಿನ ನದಿಗಳು ತುಂಬಿ ಹರಿಯುತ್ತವೆ. ಹೀಗಾಗಿ ನದಿಗಳಲ್ಲಿ ಮರವಾಯಿ ತೆಗೆಯೋದಕ್ಕೆ ಸಾಧ್ಯವಿಲ್ಲ. ಆದರೂ ಕೂಡ ಕರಾವಳಿಯ ಮಾರುಕಟ್ಟೆಗಳಲ್ಲಿ ಬಾರೀ ಪ್ರಮಾಣದಲ್ಲಿ ಮರವಾಯಿ ಲಭ್ಯವಾಗುತ್ತಿದೆ. ಹೀಗೆ ಸಿಗುತ್ತಿರುವ ಮರವಾಯಿ ಅನ್ಯರಾಜ್ಯದ್ದು ಅನ್ನೋ ಮಾತುಗಳು ಕೇಳಿಬರುತ್ತಿದೆ. ಸಾಮಾನ್ಯವಾಗಿ ಮರವಾಯಿಯನ್ನು ನದಿಯಿಂದ ಹೊರ ತೆಗೆದ ನಂತರ ಎರಡದಿಂದ ಮೂರು ದಿನಗಳ ಕಾಲ ಮಾತ್ರವೇ ನೀರಿನಲ್ಲಿ ಸಂಗ್ರಹಿಸಿ ಇಡಬಹುದು. ನಂತರದ ಅದು ಕೆಟ್ಟು ಹೋಗುತ್ತದೆ. ಇಂತಹ ಮರವಾಯಿಯಿಂದ ಖಾದ್ಯಗಳನ್ನು ತಯಾರಿಸಿದ್ರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ : ಯುವಕನ ಮೇಲೆ‌ ಮೂತ್ರ ವಿಸರ್ಜನೆ, ಆರೋಪಿ ಅರೆಸ್ಟ್ : 

ಇನ್ನು ಹೊರ ರಾಜ್ಯಗಳ ಮರವಾಯಿ ನಮ್ಮ ರಾಜ್ಯವನ್ನು ತಲುಪಲು ಕನಿಷ್ಠ ಒಂದು ದಿನ ಬೇಕು. ನದಿಯಿಂದ ತೆಗೆದು ಕನಿಷ್ಠ ಎರಡರಿಂದ ಮೂರು ದಿನಗಳ ನಂತರವೇ ಕರಾವಳಿಯ ಮಾರುಕಟ್ಟೆಗೆ ಮರವಾಯಿ ಬರುತ್ತಿದೆ. ಹೀಗೆ ಬರುವ ಮರವಾಯಿ ಕೆಡಬಾರದು ಅನ್ನೋ ಕಾರಣಕ್ಕೆ ಕೆಮಿಕಲ್‌ ಬಳಕೆ ಮಾಡಲಾಗುತ್ತಿದೆ. ಆದರೆ ಕೆಮಿಕಲ್‌ ಬಳಕೆ ಮಾಡಿದ್ರೆ ಒಂದೂ ವಾರಕ್ಕೂ ಅಧಿಕ ಕಾಲ ಕೆಡದಂತೆ ಇಡಬಹುದು. ಕರಾವಳಿಯ ಮಾರುಕಟ್ಟೆಯಲ್ಲಿ ಮರವಾಯಿ ಹೆಚ್ಚು ಬೇಡಿಕೆಯನ್ನು ಹೊಂದಿದ್ದು, ಹಣದಾಸೆಗೆ ಬಲಿಬಿದ್ದ ಮಾರಾಟಗಾರರು, ಕೆಮಿಕಲ್‌ ಮರವಾಯಿಯನ್ನು ಖರೀದಿಸಿ ಜನರಿಗೆ ಮಾರಾಟ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು. ಜೊತೆಗೆ ಜನರಿಗೆ ಇರುವ ಗೊಂದಲವನ್ನು ನಿವಾರಣೆ ಮಾಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ : ಗ್ರಾಹಕರಿಗೆ ಶಾಕ್‌ ಕೊಟ್ಟ ಟೊಮೆಟೋ : ಮಾರುಕಟ್ಟೆಯಲ್ಲಿ ಟೊಮೆಟೋಗೆ ಕೆಜಿಗೆ 160 ರೂ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular