ಉಡುಪಿ : ರಾಜ್ಯ ಸರಕಾರ ಅಕ್ಟೋಬರ್ 1ರಿಂದ ರಾಜ್ಯಾದ್ಯಂತ ಥಿಯೇಟರ್ ಗಳಲ್ಲಿ ಹೌಸ್‌ಪುಲ್ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಆದ್ರೆ ಉಡುಪಿಯಲ್ಲಿ ಥಿಯೇಟರ್ ಓಪನ್‌ಗೆ ಪಿತ್ರಪಕ್ಷ ಅಡ್ಡಿಯಾಗಿದ್ದು, ಥಿಯೇಟರ್ ಓಪನ್ ಮಾಡದೇ ಇರಲು ಮಾಲೀಕರು ತೀರ್ಮಾನಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಪಿತೃಪಕ್ಷದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದ್ರೀಗ ಸರಕಾರವೇ ಥಿಯೇಟರನಲ್ಲಿ ಶೇ.100 ಸೀಟು ಭರ್ತಿಗೆ ಅವಕಾಶ ನೀಡಿರೋದು ಸಿನಿಪ್ರಿಯರಿಗೆ ಖುಷಿ ಕೊಟ್ಟಿದೆ. ಆದ್ರೆ ಕರಾವಳಿ ಭಾಗದಲ್ಲಿನ ಥಿಯೇಟರ್ ಗಳು ಬಾಗಿಲು ತೆರೆಯೋದಕ್ಕೆ ಅಕ್ಟೋಬರ್ ಎರಡನೇ ವಾರದ ವರೆಗೂ ಕಾಯಲೇ ಬೇಕು.
ಉಡುಪಿ ಜಿಲ್ಲೆಯಲ್ಲಿ ಮಲ್ಟಿಫ್ಲೆಕ್ಸ್ ಗಳು ಓಪನ್ ಆಗಿವೆ. ಆದರೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಓಪನ್ ಆಗುತ್ತಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಥಿಯೇಟರ್ ಬಂದ್ ಆಗಿದೆ. ಹೀಗಾಗಿ ಥಿಯೇಟರ್ ಓಪನ್ ಮಾಡಲು ಕನಿಷ್ಟ ನಲವತ್ತು ಸಾವಿರದ ವರೆಗೆ ಖರ್ಚಾಗುತ್ತೆ. ಅಕ್ಟೋಬರ್ ಮೊದಲ ವಾರದಲ್ಲಿ ಯಾವುದೇ ಬಿಗ್ ಬಜೆಟ್ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಹೀಗಾಗಿ ಎರಡನೇ ವಾರದಲ್ಲಿ ಸಲಗ ಹಾಗೂ ಕೋಟಿಗೊಬ್ಬ -3 ಸಿನಿಮಾ ತೆರೆಗೆ ಬರ್ತಿದೆ. ಈ ವೇಳೆಗೆ ಉಡುಪಿ ಜಿಲ್ಲೆಯಲ್ಲಿ ಥಿಯೇಟರ್‌ಗಳು ಓಪನ್ ಆಗೋ ಸಾಧ್ಯತೆಯಿದೆ.
ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ಅಪಾಯ ಹೆಚ್ಚಾಗಿದೆ. ಹೀಗಾಗಿ ಥಿಯೇಟರ್ ಓಪನ್ ಮಾಡಿ ಮತ್ತೆ ಕೊರೊನಾ ಸೋಂಕಿನಿಂದ ಬಂದ್ ಆದ್ರೆ ಏನ್ ಮಾಡೋದು ಅನ್ನೋ ಚಿಂತೆ ಯೂ ಥಿಯೇಟರ್ ಮಾಲೀಕರನ್ನು ಕಾಡುತ್ತಿದೆ. ಏನೇ ಆದ್ರೂ ಕರಾವಳಿ ಭಾಗದ ಜನರು ಸಿನಿಮಾ ನೋಡೋದಕ್ಕೆ ಪಿತೃಪಕ್ಷ ಮುಗಿಯುವವರೆಗೆ ಕಾಯಲೇ ಬೇಕು.
ಇದನ್ನೂ ಓದಿ : ಪುಷ್ಪ’ ಚಿತ್ರದ ಫಸ್ಟ್ ಲುಕ್ ರಿಲೀಸ್ ; ಅಲ್ಲು ಅರ್ಜುನ್ ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ
ಇದನ್ನೂ ಓದಿ : ನನ್ನ ಜೊತೆ ಚೆನ್ನಾಗಿದ್ದವರಿಗೆ ಮಾತ್ರ Love u ! ಕಿರುತೆರೆ ನಟಿ ಸೌಜನ್ಯ ಡೆತ್ ನೋಟ್‌ನಲ್ಲಿ ಏನಿದೆ ಗೊತ್ತಾ ?
(Udupi : Single Screen Theaters Not Open Till end Pitru Paksha )