Udupi News : ಕೋಟ : ಕ್ಷುಲಕ ಕಾರಣಕ್ಕೆ ಪತಿ ಹಾಗೂ ಪತ್ನಿಯ ನಡುವೆ ಜಗಳ ನಡೆದಿದ್ದು, ಪತ್ನಿ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಸಮೀಪದ ಕಾರ್ಕಳ ಕಡಿದ ಹೆದ್ದಾರಿ ಎಂಬಲ್ಲಿ ನಡೆದಿದೆ. ಜಯಶ್ರೀ (28 ವರ್ಷ) ಕೊಲೆಯಾಗಿರುವ ಮಹಿಳೆ. ಪತಿ ಕಿರಣ್ ಉಪಾಧ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಲಿಗ್ರಾಮ ಸಮೀಪದಲ್ಲಿರುವ ಕಾರ್ಕಡದ ಕಡಿದ ಹೆದ್ದಾರಿಯ ಅಂಗನವಾಡಿ ಕೇಂದ್ರದ ಬಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಈ ದಂಪತಿ ವಾಸವಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ದಂಪತಿಗೆ ಮದುವೆಯಾಗಿತ್ತು.

ಇಂದು ಮುಂಜಾನೆ ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು, ಪತಿ ಕಿರಣ್ ಉಪಾಧ್ಯ ಗುಂಡ್ಮಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕೋಟ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ. ಆದರೆ ಕೊಲೆ ನಿಖರವಾದ ಕಾರಣ ಏನೂ ಅನ್ನೋದು ತಿಳಿದು ಬಂದಿಲ್ಲ.
ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ಪ್ರಕರಣ : ನಟ ಚಿಕ್ಕಣ್ಣಗೆ ಎದುರಾಯ್ತು ಸಂಕಷ್ಟ

ಶಾಲಾ ಬಸ್ ಚಾಲಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಕೋಲ್ಕತ್ತಾದಲ್ಲಿ ನಡೆದಿದ್ದ ವೈದ್ಯೆಯ ಮೇಲೆ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದೆ. ೧೨ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಬಸ್ ಶಾಲೆಯ ಬಸ್ ಚಾಲಕನೇ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಘಡದಲ್ಲಿ ನಡೆದಿದೆ. ಸದ್ಯ ಛತ್ತೀಸ್‌ಗಡದ ಮಣಿಮಜ್ರಾದ ನಿವಾಸಿಯಾಗಿರುವ ಆರೋಪಿ ಝಿಯಾಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಕೋಟ ಉದ್ಯಮಿ ಮನೆಗೆ ನಕಲಿ ಐಟಿ ದಾಳಿ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಕಳೆದ ಮೇ, ಜೂನ್, ಜುಲೈ ತಿಂಗಳಿನಲ್ಲಿ ಆರೋಪಿ ಒಟ್ಟು ಮೂರು ಬಾರಿ ವಿದ್ಯಾರ್ಥಿನಿಯ ಮನೆಯಲ್ಲಿಯೇ ಅತ್ಯಾಚಾರ ನಡೆಸಿದ್ದಾನೆ. ನಕಲಿ ಪೋಟೋವೊಂದನ್ನು ಬಳಸಿಕೊಂಡು ವಿದ್ಯಾರ್ಥಿನಿಗೆ ಬ್ಲಾಕ್‌ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಗೆ ಆರೋಪಿಯ ಕಿರುಕುಳ ತಾಳಲಾರದೆ ಪೋಷಕರಿಗೆ ತಿಳಿಸುತ್ತಿದ್ದಂತೆಯೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಶಾಲೆಯ ಬಸ್ ಚಾಲಕನಾಗಿರುವ ಆರೋಪಿ ಝೀಜಾಕ್ ಹಲವು ತಿಂಗಳಿನಿಂದಲೂ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ. ನಂತರ ಆಕೆಯ ಸ್ನೇಹಕ್ಕಾಗಿ ಮೊರೆಯಿಟ್ಟಿದ್ದ. ವಿದ್ಯಾರ್ಥಿನಿ ಯಾವುದಕ್ಕೂ ಕ್ಯಾರೇ ಅನ್ನದೇ ಇದ್ದಾಗ, ವಿದ್ಯಾರ್ಥಿನಿಯ ಪೋಟೋವೊಂದನ್ನು ತಿರುಚಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎನ್ನುವುದು ತಿಳಿದು ಬಂದಿದೆ.
ಇದನ್ನೂ ಓದಿ : ರಂಜಿತ್ ಶಿರಿಯಾರ್‌ಗೆ ಸೌತ್ ಇಂಡಿಯಾ ಬೆಸ್ಟ್ ಆಂಕರ್ ಪ್ರಶಸ್ತಿ
ವಿದ್ಯಾರ್ಥಿನಿಯ ಪೋಷಕರು ಕೆಲಸಕ್ಕೆ ತೆರಳುತ್ತಿದ್ದ ಮನೆಯಲ್ಲಿ ವಿದ್ಯಾರ್ಥಿನಿ ಓರ್ವಳೇ ಇದ್ದ ಸಮಯವನ್ನು ಬಳಸಿಕೊಂಡು ಆರೋಪಿ ಕೃತ ಎಸಗುತ್ತಿದ್ದ ಅನ್ನೋದನ್ನು ವಿದ್ಯಾರ್ಥಿನಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
Udupi News Wife Murder By Husband in Saligrama Karkada