ಉಡುಪಿ: (Water supply – power cut) ಜಿಲ್ಲಾ ವ್ಯಾಪ್ತಿಯ ವಿದ್ಯುತ್ ಉಪಕೇಂದ್ರ ಹಿರಿಯಡಕದಲ್ಲಿ ವಾರ್ಷಿಕ ವಿದ್ಯುತ್ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಕಾರಣದಿಂದ ಮಾರ್ಚ್ 24 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕಯಲ್ಲಿ ವ್ಯತ್ಯಯವಾಗಲಿರುವುದಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಇದರ ಜೊತೆಗೆ ಮೆಸ್ಕಾಂ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ ನಾಳೆ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
110/33/11 ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಬಸ್ ಬಾರ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ವಾರ್ಷಿಕ ನಿರ್ವಹಣೆಯ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಪಡೆಯುವ 110 ಕೆವಿ ಮಧುವನ, ಕುಂದಾಪುರ ಮತ್ತು ನಾವುಂದ ವಿದ್ಯುತ್ ಉಪಕೇಂದ್ರಗಳಿಗೆ ವಿದ್ಯುತ್ ಅಡಚಣೆಯಾಗಲಿದೆ. 110 ಕೆವಿ ವಿದ್ಯುತ್ ಉಪಕೇಂದ್ರ ಹಿರಿಯಡಕದಿಂದ ಹೊರಡುವ 133 ಕೆವಿ ಮಾರ್ಗಗಳಾದ ಹೆಬ್ರಿ, ಮಾಹೆ, ಪರ್ಕಳ ಮತ್ತು ಎಣ್ಣೆಹೊಳೆ ಹಾಗೂ 11 ಕೆವಿ ಹಿರಿಯಡಕ, ಬಜೆ, ಪೇರ್ಡೂರು, ಮಾಣೈ, ಹಿರೆಬೆಟ್ಟು ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ. ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ನಿರ್ವಹಣಾ ಕಾರ್ಯ ನಡೆಯಲಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇನ್ನೂ ಹಿರಿಯಡಕ ಸ್ವರ್ಣ ನದಿ ಬಜೆ ಅಣೆಕಟ್ಟಿನ ರೇಚಕ ಸ್ಥಾವರದಲ್ಲಿ ಮೆಸ್ಕಾಂ ನಿರ್ವಹಣೆ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಪೂರೈಕೆಯ ಜೊತೆಗೆ ನಾಳೆ ನಗರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲೂ ಕೂಡ ವ್ಯತ್ಯಯವಾಗಲಿದೆ ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಮಂಗಳೂರಲ್ಲಿ ಶಾಸಕ ವೇದವ್ಯಾಸ್ ಕಾಮತ್ ವಿರುದ್ದ ಆಕ್ರೋಶ : ಚುನಾವಣೆ ಬಹಿಷ್ಕರಿಸಿದ ಬಿಜೈ ನಿವಾಸಿಗಳು
ಇದನ್ನೂ ಓದಿ : ಉಡುಪಿ – ಮಂಗಳೂರು : ಗುರುವಾರದಿಂದ ರಂಜಾನ್ ಉಪವಾಸ ಆರಂಭ
ಇದನ್ನೂ ಓದಿ : Anti Riot Drill: ಬೆಳ್ತಂಗಡಿ: ಪೊಲೀಸ್ ಸಿಬ್ಬಂದಿಗಳಿಗೆ ದೊಂಬಿ ನಿಗ್ರಹ ತರಬೇತಿ
Water supply – power cut: Udupi: tomorrow there will be a difference in electricity and water supply