ಉಡುಪಿ: (Young Artist Vignesh R.G)ಎಲೆಮರೆಯ ಕಾಯಿಯಂತಿದ್ದು, ಸದ್ದಿಲ್ಲದೆ 2022 ರಲ್ಲಿ ನಡೆದ ಇಂಟರ್ನ್ಯಾಷನಲ್ ಆರ್ಟ್ ಐಕಾನ್ ಸ್ಪರ್ಧೆಯ ಟಾಪ್ 100 ವಿಜೇತ ಸ್ಪರ್ಧಿಗಳಲ್ಲಿ ಉಡುಪಿಯ ಯುವ ಕಲಾವಿದ ವಿಘ್ನೇಶ್. ಆರ್. ಜಿ ಆಯ್ಕೆಯಾಗಿದ್ದು, ಉಡುಪಿಯ ಕೀರ್ತಿ, ಗರಿಮೆಯನ್ನು ಹೆಚ್ಚಿಸಿದ್ದಾರೆ.
ಉಡುಪಿಯ ಲಕ್ಷ್ಮೀನಗರದ ಪೂರ್ಣಿಮಾ ಮತ್ತು ರಾಘವೇಂದ್ರ ದಂಪತಿಯ ಮಗನಾದ ವಿಘ್ನೇಶ್ ಆರ್ ಜಿ.(Young Artist Vignesh R.G) ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಬಾಲ್ಯದಲ್ಲೇ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ವಿಘ್ನೇಶ್ ಕೇವಲ ಒಂದು ವರ್ಷ ಚಿತ್ರಕಲೆಯಲ್ಲಿ ತರಬೇತಿಯನ್ನು ಪಡೆದಿದ್ದು ನಂತರ, ಸ್ವತಃ ಯೂಟ್ಯೂಬ್ ನೋಡಿ ಚಿತ್ರಕಲೆಯನ್ನು ಕಲಿತವರು. ಇವರು ಗುರುವಿಲ್ಲದ ಕಲೆಗಾರನಾಗಿದ್ದು, ಇದೀಗ ಕಲೆಯಲ್ಲಿ ಉಡುಪಿಯ ಗರಿಮೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಇದನ್ನೂ ಓದಿ : Chithrapady Children Santhe : ಮಕ್ಕಳ ದಿನಾಚರಣೆ : ಚಿತ್ರಪಾಡಿ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ
ರೆಯಾನ್ಶ್ ರಾಹುಲ್ ಆರ್ಟ್ ಯೂನಿವರ್ಸಿಟಿ ಇತ್ತೀಚೆಗೆ ಆನ್ ಲೈನ್ ಮೂಲಕ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿತ್ತು. ಆಕ್ರಿಲಿಕ್ ,ವಾಟರ್ ಕಲರ್ ,ಚಾರ್ಕೊಲ್ ,ಗ್ರಾಫೈಟ್ ಮತ್ತು ಆವೆ ಮಣ್ಣಿನಿಂದ ಹಲವು ಚಿತ್ರಗಳನ್ನು ರಚಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಪೈಕಿ ವಿಘ್ನೇಶ್ ಟಾಪ್ 100 ಕಲಾವಿದರ ಪೈಕಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಇಂಟರ್ನ್ಯಾಷನಲ್ ಆರ್ಟ್ ಐಕಾನ್ ಸ್ಪರ್ಧೆಯ ಟಾಪ್ 100 ರಲ್ಲಿ ಇವರು ಸ್ಥಾನವನ್ನು ಪಡೆದಿದ್ದಾರೆ.

ಪೋಷಕರಾದ ಪೂರ್ಣಿಮಾ ಮತ್ತು ರಾಘವೇಂದ್ರ ಅವರ ಪ್ರೋತ್ಸಾಹವೂ ಈ ಸಾಧನೆಗೆ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೊದಲು ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ರಾಜ್ಯಕ್ಕೇ ಮೊದಲ ಬಹುಮಾನ ಪಡೆದ ಹೆಗ್ಗಳಿಕೆಯೂ ಇವರದ್ದಾಗಿದೆ. ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿರುವ ಇವರು ಅನಿಮೇಷನ್ ನಲ್ಲಿ ತುಂಬ ಆಸಕ್ತಿ ಹೊಂದಿದ್ದಾರೆ.
ಇದನ್ನೂ ಓದಿ : Death by Heart attack : ಶಾಲಾ ಮಕ್ಕಳನ್ನು ಕರೆದೊಯ್ಯುವ ವೇಳೆ ರಿಕ್ಷಾ ಚಾಲಕ ಹೃದಯಾಘಾತದಿಂದ ಸಾವು

ತಮ್ಮ ಮಗ ಚಿತ್ರಕಲೆಯಲ್ಲೇ ಉನ್ನತ ವಿದ್ಯಾಭ್ಯಾದ ಮಾಡುವುದಿದ್ದರೆ ಅದಕ್ಕೆ ಸಂಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸುವುದಾಗಿ ತಾಯಿ ಹೇಳಿದ್ದಾರೆ.ಮಗನ ಈ ಸಾಧನೆಯ ಬಗ್ಗೆ ಪೋಷಕರಿಬ್ಬರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಎಲೆ ಮರೆ ಕಾಯಿಯಂತಿದ್ದ ಈ ಗ್ರಾಮೀಣ ಪ್ರತಿಭೆ ಸ್ವಯಂ ಪರಿಶ್ರಮದಿಂದ ಈ ಸಾಧನೆ ಮಾಡಿರುವುದು ನಿಜಕ್ಕು ಮೆಚ್ಚುವಂತಹದ್ದು. ಆತ ಮುಂದೆಯೂ ಕೂಡ ಚಿತ್ರಕಲೆಯಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬುದು ಪ್ರತಿಯೊಬ್ಬರ ಹಾರೈಕೆಯಾಗಿದೆ.
(Young Artist Vignesh R.G) The young artist Vignesh from Udupi is among the top 100 winners of the International Art Icon competition held in 2022. R. G has been selected and has increased the fame and dignity of Udupi.