Fresh COVID-19 Case :ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1,17,100 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದ 7 ತಿಂಗಳಲ್ಲಿ ಇದೇ ಮೊದಲನೇ ಬಾರಿ ದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯ ಮಿತಿಯು 1 ಲಕ್ಷದ ಗಡಿಯನ್ನು ದಾಟಿದೆ. 2021ರ ಜೂನ್ 6ರಂದು ದೇಶದಲ್ಲಿ 1,14,460 ಕೇಸುಗಳು ವರದಿಯಾಗಿದ್ದವು. ದೈನಂದಿನ ಸೋಂಕುಗಳ ಪ್ರಮಾಣ 28 ಪ್ರತಿಶತ ಏರಿಕೆಯಾದ್ದರಿಂದ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 3.52 ಕೋಟಿ ಆಗಿದೆ. ಅಂದಹಾಗೆ ದೇಶದ 27 ರಾಜ್ಯಗಳಲ್ಲೂ ಇದೇ ಓಮಿಕ್ರಾನ್ ವೈರಸ್ ಪತ್ತೆಯಾದಂತಾಗಿದೆ.
ಕಳೆದೊಂದು ದಿನದಲ್ಲಿ ದೇಶದಲ್ಲಿ 377 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 3007 ಆಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಓಮಿಕ್ರಾನ್ ವರದಿಯಾದಂತಾಗಿದ್ದು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 876 ಪ್ರಕರಣ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 465 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಂತೂ ಕೋವಿಡ್ 19 ಆಕ್ರಮಣ ಮಿತಿಮೀರಿ ಹೋಗಿದೆ. ಒಂದು ದಿನದಲ್ಲಿ ಮಹಾರಾಷ್ಟ್ರವು 36,265 ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಇದರಲ್ಲಿ 20,181 ಪ್ರಕರಣಗಳು ಮುಂಬೈ ನಗರದಲ್ಲೊಂದೇ ಪತ್ತೆಯಾಗಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಲಾಕ್ಡೌನ್ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 15 ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದು ಮೇ 8ರ ಬಳಿಕ ವರದಿಯಾದ ಅತೀ ಹೆಚ್ಚಿನ ದೈನಂದಿನ ಪ್ರಕರಣವಾಗಿದೆ. ಇದರಿಂದ ಪಾಸಿಟಿವಿಟಿ ದರವು 15 ಪ್ರತಿಶತವಾಗಿದೆ.
ದೆಹಲಿ ಹಾಗೂ ಮುಂಬೈಯನ್ನು ಹೊರತುಪಡಿಸಿ ಕೋಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ನಿಂದಾಗಿ 302 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
1.17 Lakh Fresh COVID-19 Cases In India, 28% Higher Than Yesterday
ಇದನ್ನು ಓದಿ : Goa Restriction : ಗೋವಾ ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ: ರಾಜ್ಯ ಪ್ರವೇಶಕ್ಕೆ ಪ್ರತ್ಯೇಕ ಮಾರ್ಗಸೂಚಿ
ಇದನ್ನೂ ಓದಿ : Weekend curfew rules : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ: ಇಲ್ಲಿದೆ ಮಾಹಿತಿ