ಚೀನಾ : oral Covid-19 vaccine : ಕೊರೊನಾ ವೈರಸ್ನ ತೀವ್ರತೆ ಇದೀಗ ಬಹುತೇಕ ಕಡಿಮೆಯಾಗಿದೆ. ಆದರೆ 2019ರಿಂದ 2021ರವರೆಗೂ ಈ ಕೊರೊನಾ ಸೋಂಕು ಕೊಟ್ಟ ಕಾಟ ಅಷ್ಟಿಷ್ಟಲ್ಲ. ಈಗಲೂ ಕೋವಿಡ್ ಸೋಂಕು ಸಂಪೂರ್ಣ ಕಡಿಮೆಯಾಗಿಲ್ಲ. ಯಾವಾಗ ಹೊಸ ರೂಪಾಂತರ ಸೃಷ್ಟಿಯಾಗುತ್ತೋ ಎಂಬ ಭಯ ಈಗಲೂ ಇದೆ. ಕೊರೊನಾ ವಿರುದ್ಧ ಸೆಣೆಸಾಡಲು ಈಗಾಗಲೇ ಕೊರೊನಾ ಲಸಿಕೆಯ ಮೂರು ಡೋಸ್ಗಳನ್ನು ಜನತೆಗೆ ನೀಡಲಾಗಿದೆ. ಈ ಎಲ್ಲದರ ನಡುವೆ ಚೀನಾದ ಶಾಂಘೈ ನಗರದಲ್ಲಿ ಬಾಯಿಯ ಮೂಲಕ ಹೀರಲ್ಪಡುವ ಕೋವಿಡ್ 19 ಲಸಿಕೆಯನ್ನು ನೀಡಲು ಆರಂಭಿಸಲಾಗಿದೆ. ಇದು ಜಗತ್ತಿನ ಮೊದಲ ಬಾಯಿಯಿಂದ ಹೀರುವ ಕೋವಿಡ್ ಲಸಿಕೆಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಈ ಲಸಿಕೆಯನ್ನು ಬಾಯಿಯ ಮೂಲಕ ಹೀರಲಾಗುತ್ತದೆ. ಈ ಹಿಂದೆ ಕೋವಿಡ್ ಲಸಿಕೆಯನ್ನು ಪಡೆದವರಿಗೆ ಬೂಸ್ಟರ್ ಡೋಸ್ ರೂಪದಲ್ಲಿ ಈ ಲಸಿಕೆಯನ್ನು ನೀಡಲು ಆರಂಭಿಸಲಾಗಿದೆ.
ಈ ಸೂಜಿ ಮುಕ್ತ ಲಸಿಕೆಗಳು ದುರ್ಬಲವಾದ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಇಂತಹ ಲಸಿಕೆಗಳು ವ್ಯಾಕ್ಸಿನೇಷನ್ ಅಭಿಯಾನಕ್ಕೆ ಇನ್ನಷ್ಟು ಪುಷ್ಠಿಯನ್ನು ಉಂಟು ಮಾಡುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಕೆಲವು ಸೂಜಿಗಳಿಗೆ ಅಂಜುತ್ತಾರೆ. ಹೀಗಾಗಿ ಕೊರೊನಾ ಲಸಿಕೆಗಳಿಂದ ದೂರ ಉಳಿದಿದ್ದಾರೆ. ಹೀಗಾಗಿ ಇಂತಹ ಬಾಯಿಯಿಂದ ಹೀರುವ ಲಸಿಕೆಗಳಿಂದಾಗಿ ಸೂಜಿಗಳಿಗೆ ಹೆದರುವವರೂ ಸಹ ಕೊರೊನಾ ಲಸಿಕೆಯನ್ನು ಸ್ವೀಕರಿಸುವಂತಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ವಿಡಿಯೋದಲ್ಲಿ ಜನರು ಅರೆಪಾರದರ್ಶಕ ಬಿಳಿ ಬಣ್ಣದ ಕಪ್ನಲ್ಲಿ ಸಣ್ಣ ನಳಿಕೆಯನ್ನು ತಮ್ಮ ಬಾಯಿಗೆ ಹಾಕಿಕೊಂಡಿರುವುದನ್ನು ಕಾಣಬಹುದಾಗಿದೆ. 20 ಸೆಕೆಂಡುಗಳ ಅವಧಿಯಲ್ಲಿ ಲಸಿಕೆಯನ್ನು ಹೀರುವ ಮೂಲಕ ಚೀನಾದ ಜನತೆ ಸೂಜಿ ಮುಕ್ತ ಕೊರೊನಾ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : Delhi CM: ಹಿಂದುತ್ವ ಅಜೆಂಡಾ: ಪ್ರಧಾನಿ ಮೋದಿಗೆ ದೆಹಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದೇನು
Afraid of needles: China rolling out oral Covid-19 vaccine