ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೇ, ಇನ್ನೊಂದೆಡೆ ಸರ್ಕಾರ ಸೋಂಕಿನ ನಿಯಂತ್ರಣದ ಹೆಸರಿನಲ್ಲಿ ಈಗಾಗಲೇ ಸಂಕಷ್ಟದಲ್ಲಿರುವ ಜನರ ಸುಲಿಗೆಗೆ ಮುಂದಾಗಿದೆ. ಮಾಸ್ಕ್ ಕಡ್ಡಾಯದ ನೆಪದಲ್ಲಿ ಸಾವಿರ ರೂಪಾಯಿ ದಂಡ ನಿಗದಿಯಾಗಿದ್ದು, ಇದನ್ನು ವಸೂಲಿ ಮಾಡೋಕೆ ಪೊಲೀಸ್ ಠಾಣೆಗೆ ಟಾರ್ಗೆಟ್ ಫಿಕ್ಸ್ ಮಾಡಿರೋ ಅಂಶ ಬಯಲಾಗಿದೆ.

ಇದುವರೆಗೂ ಬಿಬಿಎಂಪಿ ಮಾರ್ಷಲ್ ಗಳು ದಂಡವಸೂಲಿ ಮಾಡುತ್ತಿದ್ದರು. ಆದರೆ ಈಗ ಸರ್ಕಾರದ ಆದೇಶದಂತೆ ಪೊಲೀಸ್ ಇಲಾಖೆ ಲಾ ಆಂಡ್ ಆರ್ಡರ್ ಪೊಲೀಸರನ್ನು ಬಳಸಿಕೊಂಡು ದಂಡ ವಸೂಲಿ ಮಾಡಲು ಮುಂಧಾಗಿದೆ. ಆದರೆ ಇದರಲ್ಲಿ ಇರೋ ಶಾಕಿಂಗ್ ಅಂಶ ಏನಂದ್ರೇ, ಕೇವಲ ದಂಡ ವಸೂಲಿಯಷ್ಟೇ ಅಲ್ಲ. ದಂಡ ವಸೂಲಿಗೆ ನಗರ ಪೊಲೀಸ್ ಇಲಾಖೆ ಟಾರ್ಗೆಟ್ ಫಿಕ್ಸ್ ಮಾಡಿದೆ. ಅಂದ್ರೆ ಅನಿವಾರ್ಯವಾಗಿ ಪೊಲೀಸರು ದಂಡದ ಹೆಸರಿನಲ್ಲಿ ವಸೂಲಿ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸಪೆಕ್ಟರ್ ರೇಂಜ್ ನ ಅಧಿಕಾರಿಗೆ ಈ ಟಾರ್ಗೆಟ್ ನೀಡಲಾಗಿದ್ದು, ದಿನವೊಂದಕ್ಕೆ ಮಿನಿಮಮ್ 50 ಕೇಸ್ ದಾಖಲಿಸಲೇಬೇಕೆಂಬ ಮೌಖಿಕ ಆದೇಶ ನೀಡಲಾಗಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳೇ ಖಚಿತಪಡಿಸಿವೆ.
ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಪಾಲಿಸದವರನ್ನು ಹುಡುಕಿ ದಂಡ ವಿಧಿಸಿ ಹಣ ಸಂಗ್ರಹಿಸಲು ಮೇಲಾಧಿಕಾರಿಗಳ ಆದೇಶ ಹೊರಬಿದ್ದಿದೆ. ಆದರೆ ಈಗಾಗಲೇ ಕೊರೋನಾ ಲಾಕ್ ಡೌನ್ ಸಂಕಷ್ಟದಿಂದ ದುಡ್ಡಿಲ್ಲದೇ, ಕೆಲಸ ಇಲ್ಲದೇ ಪರದಾಡ್ತಾ ಇರೋ ಸಾರ್ವಜನಿಕರಿಂದ ದಂಡ ವಸೂಲಿ ಮಾಡೋದು ಹೇಗೆ ಅಂತ ಪೊಲೀಸರು ಪರದಾಡುತ್ತಿದ್ದಾರೆ.
ನಗರದ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾಗ್ತಿರೋ ಸರ್ಕಾರ ದುಬಾರಿ ದಂಡ ವಿಧಿಸುವ ಮೂಲಕ ಈಗಾಗಲೇ ಸಂಕಷ್ಟದಲ್ಲಿರೋ ಜನರ ರಕ್ತ ಹೀರುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.