ನವದೆಹಲಿ : ದಿನ ಕಳೆದಂತೆ ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣ ಇಳಿಕೆಯನ್ನು ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ 18,870 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 18,870 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು,ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನತರ ಸಂಖ್ಯೆ 3,37,16,451 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 378 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,47,751 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: Karnataka Corona Updates : ಕರ್ನಾಟಕದಲ್ಲಿ ಇಂದು ಕೊರೊನಾ ಪ್ರಕರಣಗಳಲ್ಲಿ ಇಳಿಕೆ
ದೇಶದಲ್ಲಿ ಒಟ್ಟು ಪ್ರಕರಣಗಳು 3,37,16,451, ಒಟ್ಟು ಗುಣಮುಖರಾಗಿದ್ದಾರೆ. 3,29,86,180, ಸಾವಿನ ಸಂಖ್ಯೆ 4,47,751, ಸಕ್ರಿಯ ಪ್ರಕರಣಗಳು 2,82,520 ಇದೆ ರೀತಿ ಕೊರೊನಾ ಪ್ರಕರಣಗಳು ಇಳಿಕೆಯಾದರೆ ಜನರು ಕೊರೊನಾ ಆತಂಕ ಬಿಟ್ಟು ನೆಮ್ಮದಿಯ ಜೀವನ ನಡೆಸಬಹುದು.
ಇದನ್ನೂ ಓದಿ: Dengue fever : ಕೊರೊನಾವನ್ನೇ ಮೀರಿಸಿದ ಡೆಂಗ್ಯೂ : ರಾಜ್ಯದಲ್ಲಿ 3,386 ಮಂದಿಗೆ ಡೆಂಗ್ಯೂ ಜ್ವರ !
(Coronavirus infection reduces in India)